ರಾಜ್ಯ

ಉತ್ತಮ ಗುಣಮಟ್ಟದ ಡಯಾಲಿಸಿಸ್ ಕೇಂದ್ರ: ಹೊಸದಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ

Manjula VN

ಬೆಂಗಳೂರು: ಸರ್ಕಾರಿ ಡಯಾಲಿಸಿಸ್ ಕೇಂದ್ರಗಳ ಸ್ಥಿತಿಯನ್ನು ಸುಧಾರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಹೊಸದಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಆರೋಗ್ಯ ಆಯುಕ್ತ ಡಿ.ರಂದೀಪ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ ಮತ್ತು ಡಾ.ಮೂರ್ತಿ ಸೇರಿದಂತೆ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಆಂತರಿಕ ಸಭೆ ನಡೆಸಿದರು.

ಪ್ರಸ್ತುಕ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳು ಉತ್ತಮ ಸ್ಥಿತಿಯಲ್ಲಿತ್ತ. ಪ್ರತೀ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ವೆಚ್ಚಗಳು ಹೆಚ್ಚಾಗಿವೆ. ಟೆಂಡರ್ ಗಳ ಕುರಿತು ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದೇನೆ. ನಿರ್ವಹಣಾ ವೆಚ್ಚ ಹೆಚ್ಚಿರುವುದನ್ನು ಗಮನಿಸಲಾಗಿದೆ. ಹೀಗಾರಿ ಹೊಸ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಇದರ ಅಡಿಯಲ್ಲಿ ಸುಧಾರಿತ ಗುಣಮಟ್ಟದೊಂದಿಗೆ ವೆಚ್ಚವನ್ನು ಕಡಿಮೆ ಮಾಡಬಹುದು. ಈ ಕೇಂದ್ರಗಳಲ್ಲಿ ಮೂತ್ರಪಿಂಡ ಶಾಸ್ತ್ರಜ್ಞರ ಕೊರತೆಯನ್ನೂ ನಿವಾರಿಸಲಾಗುವುದು ಎಂದು ಗುಂಡೂರಾವ್ ಅವರು ಹೇಳಿದರು.

ಡಯಾಲಿಸಿಸ್ ಕೇಂದ್ರಗಳ ಸ್ಥಿತಿ ಕಳಪೆಯಾಗಿದ್ದು, ಅನೇಕ ಕೇಂದ್ರಗಳಲ್ಲಿನ ಉಪಕರಣಗಳು ನಿಷ್ಕ್ರಿಯವಾಗಿರುವುದರಿಂದ ಮೂತ್ರಪಿಂಡಶಾಸ್ತ್ರಜ್ಞರ ಕೊರತೆಯೂ ಇದೆ ಎಂದು ಇದೇ ಸಂದರ್ಭದಲ್ಲಿ ನೆಫ್ರಾಲಜಿ ವಿಭಾಗದ ನಿರ್ದೇಶಕ ಡಾ.ಕೇಶವ ಮೂರ್ತಿಯವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದ ಅಡಿಯಲ್ಲಿ, ಕರ್ನಾಟಕದಲ್ಲಿ 167 ಕೇಂದ್ರಗಳು ಚಾಲನೆಯಲ್ಲಿವೆ. ವರದಿಗಳ ಪ್ರಕಾರ, 145 ಕೇಂದ್ರಗಳು ಮೂತ್ರಪಿಂಡಶಾಸ್ತ್ರಜ್ಞರ ಮೇಲ್ವಿಚಾರಣೆಯಿಲ್ಲದೆ ನಡೆಯುತ್ತಿವೆ ಎನ್ನಲಾಗಿದೆ.

ಈ ಕೇಂದ್ರಗಳ ಮೇಲೆ ನಿಗಾ ವಹಿಸದಿರುವುದು ಸೇವೆಗಳ ಗುಣಮಟ್ಟದಲ್ಲಿ ಕ್ಷೀಣಿಸಲು ಕಾರಣವಾಗಿದೆ ಎಂದು ಆಯುಕ್ತ ರಂದೀಪ್ ಅವರು ಹೇಳಿದ್ದಾರೆ.

ಹೊಸ ಟೆಂಡರ್ ಬಳಿಕ ಪಿಎಂಎನ್‌ಡಿಪಿ ಪೋರ್ಟಲ್‌ನಲ್ಲಿ ನಡೆಸಿದ ಪ್ರತಿ ಡಯಾಲಿಸಿಸ್‌ನ ವಿವರಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ.  ಅದರ ಆಧಾರದ ಮೇಲೆ ಮಾರಾಟಗಾರರಿಗೆ ಪಾವತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT