ಬಸ್ ನಲ್ಲಿ ಅಂಟಿಸಲಾಗಿರುವ ಬಿಜೆಪಿ ಸ್ಟಿಕರ್. 
ರಾಜ್ಯ

ಶಕ್ತಿ ಯೋಜನೆ ಚಾಲನೆ ವೇಳೆ ಬಸ್​ ಮೇಲೆ ಬಿಜೆಪಿ ಸ್ಟಿಕ್ಕರ್: ಅಧಿಕಾರಿಗಳ ಯಡವಟ್ಟು

ಶಕ್ತಿ ಯೋಜನೆಗೆ ಚಾಲನೆ ನೀಡುವ ವೇಳೆ ಬಸ್ ಮೇಲೆ ಇದ್ದ ಬಿಜೆಪಿ ಸ್ಟಿಕ್ಕರ್ ನೋಡಿ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಗರಂ ಆದ ಬೆಳವಣಿಗೆ ಭಾನುವಾರ ಕಂಡು ಬಂದಿತು.

ಬಳ್ಳಾರಿ: ಶಕ್ತಿ ಯೋಜನೆಗೆ ಚಾಲನೆ ನೀಡುವ ವೇಳೆ ಬಸ್ ಮೇಲೆ ಇದ್ದ ಬಿಜೆಪಿ ಸ್ಟಿಕ್ಕರ್ ನೋಡಿ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಗರಂ ಆದ ಬೆಳವಣಿಗೆ ಭಾನುವಾರ ಕಂಡು ಬಂದಿತು.

ಶಕ್ತಿ ಯೋಜನೆಗೆ ಚಾಲನೆ ನೀಡಲು ಆರು ಹೊಸ ಬಸ್ ತರಲಾಗಿತ್ತು. ಈ ವೇಳೆ ಒಂದು ಬಸ್​ ಮೇಲೆ ಬಿಜೆಪಿ ಸ್ಟಿಕ್ಕರ್ ಕಂಡು ಬಂದಿತ್ತು. ಸ್ಟಿಕರ್ ಕಂಡ ಸಚಿವ ನಾಗೇಂದ್ರ ಅವರು, ಯೋಜನೆಗೆ ಚಾಲನೆ ನೀಡಲು ನಿರಾಕರಿಸಿದರು. ಈ ವೇಳ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬಳಿಕ ಕಾರ್ಯಕ್ರಮವನ್ನು ಸುಗಮವಾಗಿ ನಡೆಯುವಂತೆ ಮಾಡಲು ಬಿಜೆಪಿ ಸ್ಟಿಕರ್'ನ್ನು ತೆಗೆದು ಹಾಕಿದರು. ನಂತರ ನಾಗೇಂದ್ರ ಅವರು ಬಸ್'ಗೆ ಚಾಲನೆ ನೀಡಿದರು.

ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ರ್ಯಾಲಿಗಳಿಗೆ ಬಸ್ ಗಳನ್ನು ಬಳಕೆ ಮಾಡಲಾಗಿತ್ತು. ರ್ಯಾಲಿ ವೇಳೆ ಬಿಜೆಪಿ ಪೋಸ್ಟರ್ ಗಳನ್ನು ಬಸ್ ಗಳ ಮೇಲೆ ಅಂಟಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟಿಕರ್ ಗಾತ್ರದಲ್ಲಿ ಚಿಕ್ಕದಾಗಿತ್ತು. ಹೀಗಾಗಿ ಅದನ್ನು ಯಾರೂ ಗಮನಿಸಿಲ್ಲ. ಸಚಿವರ ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆಯಲಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ: ಬೆಳಗ್ಗೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ; ಮೇ 13ಕ್ಕೆ ಬಹುಮತ ಸಾಬೀತು

ಗುಜರಾತ್ ಟೈಟನ್ಸ್‌ಗೆ ಸತತ 4ನೇ ಗೆಲುವು: 77 ರನ್‌ಗಳಿಂದ ರಾಜಸ್ಥಾನಕ್ಕೆ ಹೀನಾಯ ಸೋಲು, 4ನೇ ಸ್ಥಾನಕ್ಕೆ ಕುಸಿದ RCB!

ಪಾಕ್ ISI ಮಾಡ್ಯೂಲ್ ಬಯಲಾದ ಬೆನ್ನಲ್ಲೇ ಉಗ್ರ ದಾಳಿಯ ಬಗ್ಗೆ ಗುಪ್ತಚರ ಎಚ್ಚರಿಕೆ: ದೆಹಲಿಯಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಸಿಎಂ ಆಯ್ಕೆ ಕಗ್ಗಂಟು: ಮೂವರು ಘಟಾನುಘಟಿಗಳ ನೇರ ಹಣಾಹಣಿ, ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್!

ಕಾಂಗ್ರೆಸ್‌ನಿಂದ ದ್ರೋಹ, ಸೌಜನ್ಯಕ್ಕಾದರೂ ಧನ್ಯವಾದ ಹೇಳಲಿಲ್ಲ: ಎಂ.ಕೆ ಸ್ಟಾಲಿನ್ ಕಿಡಿ

SCROLL FOR NEXT