ಕೃಷ್ಣಾ ನದಿ 
ರಾಜ್ಯ

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಉತ್ತಮ ಕೆಲಸಗಳನ್ನು ಸರ್ಕಾರ ಮುಂದುವರಿಸಬೇಕು: ಗೋವಿಂದ ಕಾರಜೋಳ

‘ಕರ್ನಾಟಕ ಸರ್ಕಾರ ನೀರಿನ ಯೋಜನೆಗಳ ಉತ್ತಮ ಕೆಲಸವನ್ನು ಮುಂದುವರಿಸಬೇಕು’ ಎಂದು ಬಿಜೆಪಿ ನಾಯಕ ಗೋವಿಂದ್ ಕಾರಜೋಳ ಹೇಳಿದರು. ಕೃಷ್ಣಾ, ಘಟಪ್ರಭಾ ಮತ್ತು ನೇತ್ರಾವತಿ ನದಿಗಳು ರಾಜ್ಯಾದ್ಯಂತ ಹಲವು ಭಾಗಗಳಲ್ಲಿ ಬತ್ತಿ ಹೋಗಿವೆ. ಕರ್ನಾಟಕವು ಸಾಕಷ್ಟು ಜಲಸಂಪನ್ಮೂಲಗಳಿಂದ ಆಶೀರ್ವದಿಸಲ್ಪಟ್ಟಿದ್ದರೂ, ಅವುಗಳ ನಿರ್ವಹಣೆ ಕಳಪೆಯಾಗಿದೆ. 

ಬೆಂಗಳೂರು: ಕೃಷ್ಣಾ, ಘಟಪ್ರಭಾ ಮತ್ತು ನೇತ್ರಾವತಿ ನದಿಗಳು ರಾಜ್ಯಾದ್ಯಂತ ಹಲವು ಭಾಗಗಳಲ್ಲಿ ಬತ್ತಿ ಹೋಗಿವೆ. ಕರ್ನಾಟಕವು ಸಾಕಷ್ಟು ಜಲಸಂಪನ್ಮೂಲಗಳಿಂದ ಆಶೀರ್ವದಿಸಲ್ಪಟ್ಟಿದ್ದರೂ, ಅವುಗಳ ನಿರ್ವಹಣೆ ಕಳಪೆಯಾಗಿದೆ. ಅದರಲ್ಲೂ, ರಾಜ್ಯದಲ್ಲಿ ಅಲ್ಪ ಪ್ರಮಾಣದ ಮಳೆಯನ್ನು ಪಡೆಯುವ ಹಲವಾರು ಪ್ರದೇಶಗಳಿವೆ ಮತ್ತು ದೀರ್ಘಕಾಲಿಕ ಬರಪೀಡಿತ ಪ್ರದೇಶಗಳಾಗಿವೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದರೆ ರಾಜ್ಯವು ದೊಡ್ಡ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಾಜಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ನೀರಿನ ವಿಚಾರದಲ್ಲಿ ನಾವು ಉತ್ತಮ ಹೋರಾಟ ನಡೆಸಿದ್ದೇವೆ. ಡಿಕೆ ಶಿವಕುಮಾರ್ ನೇತೃತ್ವದ ಹೊಸ ತಂಡ ಅಧಿಕಾರ ವಹಿಸಿಕೊಳ್ಳುವ ಸಮಯ ಬಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ (ಯುಕೆಪಿ) ನಾವು ಉತ್ತಮ ಕೆಲಸವನ್ನು ಮಾಡಿದ್ದೇವೆ. ಆದರೆ, ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಮಹದಾಯಿ, ಮೇಕೆದಾಟು ಯೋಜನೆಗಳಲ್ಲೂ ಸಾಕಷ್ಟು ಕೆಲಸಗಳ ಅಗತ್ಯವಿದೆ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದನ್ನು ಹೊಸ ಸರ್ಕಾರವು ವಹಿಸಿಕೊಳ್ಳಲಿ ಮತ್ತು ಮುಂದುವರಿಸಲಿ ಎಂದು ನಾವು ಬಯಸುತ್ತೇವೆ' ಎಂದರು.

'ಯುಕೆಪಿಗಾಗಿ ಎರಡು ವರ್ಷಗಳಲ್ಲಿ ಒಟ್ಟು 10,000 ಕೋಟಿ ರೂ.ಗಳ ಎರಡು ಬಜೆಟ್ ಹಂಚಿಕೆ ಮಾಡಲಾಗಿದೆ. ಯೋಜನೆಗಾಗಿ ಭೂಸ್ವಾಧೀನ, ಪುನರ್ವಸತಿ ಮತ್ತು ಸಿವಿಲ್ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಹಾಯ ಮಾಡುವ ಮಹದಾಯಿ ಯೋಜನೆಯು ಪ್ರಗತಿಯಲ್ಲಿದೆ, ಹಾಗೆಯೇ ಕೃಷ್ಣಾ ನೀರಿನ ಗೆಜೆಟ್ ಅಧಿಸೂಚನೆಯನ್ನು ಬಿಡುಗಡೆ ಮಾಡುವ ಕೆಲಸ ನಡೆಯುತ್ತಿದೆ. ಮೇಕೆದಾಟು ಯೋಜಿತ ರೀತಿಯಲ್ಲಿ ನಡೆಯಲಿದೆ ಎಂದು ನನಗೆ ಖಾತ್ರಿಯಿದೆ' ಎಂದು ಭರವಸೆ ವ್ಯಕ್ತಪಡಿಸಿದರು.

ಯುಕೆಪಿ ಹಂತ 3ಕ್ಕೆ ಕಾಲುವೆ ಜಾಲ ಮತ್ತು ಜಲಾಶಯಕ್ಕಾಗಿ 1.34 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರಂತರ ಕಸರತ್ತು ನಡೆಯುತ್ತಿದೆ. ನೀರಾವರಿ ಭೂಮಿಗೆ ರೈತರಿಗೆ ಮೂರು ಪಟ್ಟು ದರ ನೀಡಿ ಈ ಕಸರತ್ತು ಆರಂಭಿಸಿದ್ದೆವು ಎಂದಿದ್ದಾರೆ. 

ಜಲಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಯೋಜನೆ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ನಾವು ಎಲ್ಲಾ ಪ್ರಮುಖ ಜಲ ಸಂಪನ್ಮೂಲ ಪ್ರದೇಶಗಳಲ್ಲಿ ಆಯಕಟ್ಟಿನ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT