ಎಸ್. ಸುರೇಶ್ ಕುಮಾರ್ 
ರಾಜ್ಯ

'ಸಕಾಲ' ಯೋಜನೆ ಬಗ್ಗೆ ಆಸಕ್ತಿ ವಹಿಸುವಂತೆ ಸರ್ಕಾರಕ್ಕೆ ಎಸ್.ಸುರೇಶ್ ಕುಮಾರ್ ಒತ್ತಾಯ

ನಾಗರಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಕಾಲಮಿತಿಯಲ್ಲಿ ಒದಗಿಸುವ  'ಸಕಾಲ' ಯೋಜನೆ ಬಗ್ಗೆ ಸರ್ಕಾರ ವಿಶೇಷ ಅಸ್ಥೆ ವಹಿಸಬೇಕೆಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.

ಬೆಂಗಳೂರು: ನಾಗರಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಕಾಲಮಿತಿಯಲ್ಲಿ ಒದಗಿಸುವ  'ಸಕಾಲ' ಯೋಜನೆ ಬಗ್ಗೆ ಸರ್ಕಾರ ವಿಶೇಷ ಅಸ್ಥೆ ವಹಿಸಬೇಕೆಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ಅವರು ಪತ್ರ ಬರೆದಿದ್ದು, ಇಂದು ನಾಳೆ ಇನ್ನಿಲ್ಲ; ಹೇಳಿದ ಸಮಯ ತಪ್ಪೊಲ್ಲ ಎನ್ನುವ ಉಪ ಶೀರ್ಷಿಕೆಯಲ್ಲಿಯೇ ಯೋಜನೆ ಉದ್ದೇಶ ವ್ಯಕ್ತವಾಗಿದ್ದು, ಕೋಟ್ಯಂತರ ನಾಗರಿಕರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಕಾಲ ಕಾರ್ಯಕ್ರಮದ ಮತ್ತೊಂದು ಮಹತ್ವದ ಕವಲು ಯೋಜನೆ ''ಜನಸೇವಕ' ಮೂಲಕ ಜನರ ಮನೆ ಬಾಗಿಲಿಗೆ ನಾಗರಿಕ ಸೇವೆಗಳನ್ನು ಕೊಂಡೊಯ್ಯುವ ನಿರೀಕ್ಷೆ ಹೊಂದಿದ್ದು, ಇದರಿಂದಲೂ ಬೆಂಗಳೂರಿನ ಲಕ್ಷಾಂತರ ಹಿರಿಯ ನಾಗರಿಕರು ಪ್ರಯೋಜನ ಪಡೆದಿದ್ದಾರೆ. ಸರ್ಕಾರ ಈ ಎರಡು ಯೋಜನೆಗಳ ಕುರಿತು ವಿಶೇಷ ಗಮನಹರಿಸಬೇಕೆಂದು ಅವರು ಕೋರಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ನಿಂದ ಇರಾನ್ ಗುಪ್ತಚರ ಇಲಾಖೆ ಮುಖ್ಯಸ್ಥರ ಹತ್ಯೆ?; ಇದರಿಂದೆಲ್ಲಾ ನಾಯಕತ್ವಕ್ಕೆ ಮಾರಕ ಹೊಡೆತ ಬೀಳಲ್ಲ- ಇರಾನ್

ಉಪ ಚುನಾವಣೆ 2026: ಸಿದ್ದರಾಮಯ್ಯ ಸಂಧಾನ ಯಶಸ್ವಿ, ಬಾಗಲಕೋಟೆ ಕಾಂಗ್ರೆಸ್ ಕದನಕ್ಕೆ ಕೊನೆಗೂ ತೆರೆ, ಇವರಿಗೇ ಟಿಕೆಟ್ ಎಂದ ಸಿಎಂ!

ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಶಾಕ್; ಇನ್ನುಮುಂದೆ ಉತ್ತಮ ಕ್ರೆಡಿಟ್ ಸ್ಕೋರ್ ಕಡ್ಡಾಯ!

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸೀಟ್ ಚಾರ್ಜ್‌ಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಇನ್ನು ಮುಂದೆ ಶೇ.60ರಷ್ಟು ಸೀಟುಗಳು ಉಚಿತ..!

ರಾಹುಲ್ ಗಾಂಧಿಯನ್ನು 'ಟಪೋರಿ' ಎಂದು ಕರೆದ ಕಂಗನಾ; ಕಾರಣ ಏನು ಗೊತ್ತಾ?

SCROLL FOR NEXT