ಬೆಂಗಳೂರು ವಿವಿ 
ರಾಜ್ಯ

ದಾಖಲೆ ಬರೆದ ಬೆಂಗಳೂರು ವಿವಿ: ನ್ಯಾಕ್ ಎ++ ಶ್ರೇಣಿ, ರಾಜ್ಯದ ಏಕೈಕ, ದೇಶದ 2ನೇ ಸರ್ಕಾರಿ ವಿವಿ

ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯ ಐತಿಹಾಸಿಕ ಸಾಧನೆಗೈದಿದ್ದು, ನ್ಯಾಕ್ ಎ++ ಶ್ರೇಣಿ ಪಡೆಯುವ ಮೂಲಕ ಈ ಕೀರ್ತಿಗೆ ಭಾಜನವಾದ ರಾಜ್ಯದ ಮೊದಲ ಮತ್ತು ದೇಶದ 2ನೇ ಸರ್ಕಾರಿ ವಿವಿ ಎಂಬ ಕೀರ್ತಿಗೆ ಭಾಜನವಾಗಿದೆ.

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯ ಐತಿಹಾಸಿಕ ಸಾಧನೆಗೈದಿದ್ದು, ನ್ಯಾಕ್ ಎ++ ಶ್ರೇಣಿ ಪಡೆಯುವ ಮೂಲಕ ಈ ಕೀರ್ತಿಗೆ ಭಾಜನವಾದ ರಾಜ್ಯದ ಮೊದಲ ಮತ್ತು ದೇಶದ 2ನೇ ಸರ್ಕಾರಿ ವಿವಿ ಎಂಬ ಕೀರ್ತಿಗೆ ಭಾಜನವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯವು ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ‘ಎ++’ ಶ್ರೇಣಿ ಪಡೆದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಜೆಎನ್‌ಯು (ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ) ನಂತರ ಈ ಸಾಧನೆ ಮಾಡಿದ ಸರ್ಕಾರಿ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಇದೀಗ ಬೆಂಗಳೂರು ವಿವಿ ಪಾತ್ರವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್ ಅವರು, '‘ವಿಶ್ವವಿದ್ಯಾಲಯವು 2018ರಿಂದ 2022ರವರೆಗಿನ ಮೌಲ್ಯಮಾಪನ ಅವಧಿಯ ಸ್ವಯಂ ಅಧ್ಯಯನ ವರದಿಯನ್ನು ನ್ಯಾಕ್‌ಗೆ ಸಲ್ಲಿಸಿತ್ತು. ದೇಶದ ಕೆಲವೇ ಶೈಕ್ಷಣಿಕ ಸಂಸ್ಥೆಗಳು ನಾಲ್ಕನೇ ಆವೃತ್ತಿಗೆ ಮಂಡಳಿಯಿಂದ ಮಾನ್ಯತೆ ಪ‍ಡೆದಿವೆ. ಇವುಗಳಲ್ಲಿ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ನಂತರ ದೇಶದಲ್ಲಿ ಮೊದಲ ಬಾರಿಗೆ ಈ ಸಾಧನೆಗೈದಿರುವುದು ಬೆಂಗಳೂರು ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ವಿಷಯ. ಈ ಮೂಲಕ ವಿಶ್ವವಿದ್ಯಾಲಯವು ಸಂಪೂರ್ಣ ಸ್ವಾಯತ್ತತೆಯನ್ನು ಪ‍ಡೆಯುವ ಅವಕಾಶ ಪಡೆದುಕೊಂಡಿದೆ’ ಎಂದು ತಿಳಿಸಿದರು.

ಅಂತೆಯೇ ‘ನ್ಯಾಕ್‌ ನಿಗದಿಪಡಿಸಿದ ಮಾನದಂಡಗಳಾದ ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆ, ಸಾಂಸ್ಥಿಕ ಮೌಲ್ಯಗಳಲ್ಲಿ ವಿಶ್ವವಿದ್ಯಾಲಯವು ಗರಿಷ್ಠ 4 ಅಂಕಗಳಲ್ಲಿ 3.75 ಅಂಕಗಳನ್ನು ಪಡೆದುಕೊಂಡಿದೆ. ಐದು ವರ್ಷಗಳವರೆಗೆ ಈ ಮಾನ್ಯತೆ ಇರಲಿದೆ. ನ್ಯಾಕ್‌ ತಂಡವು ಮೇ 17ರಿಂದ 19ರವರೆಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿನ ಸೌಕರ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು’ ಎಂದು ಅವರು ತಿಳಿಸಿದರು.

‘ಕಳೆದ ಐದು ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳ ಮೂಲಕ ವಿವಿಯು ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ 3.16 ಸಿಜಿಪಿಎಯೊಂದಿಗೆ ನ್ಯಾಕ್‌ನಿಂದ ಎ ಶ್ರೇಣಿ ಪಡೆದಿತ್ತು. ಹಲವು ಆಯಾಮಗಳಲ್ಲಿ ವಿವಿಯು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡ ಪರಿಣಾಮ ಎ ಪ್ಲಸ್‌ ಪ್ಲಸ್‌ ಶ್ರೇಣಿ ಪಡೆಯಲು ಸಾಧ್ಯವಾಗಿದೆ’ ಎಂದು ಡಾ. ಎಸ್.ಎಂ. ಜಯಕರ್ ತಿಳಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

SCROLL FOR NEXT