ರಾಜ್ಯ

ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ಕುರಿತು ಡಿಸಿಎಂಗೆ ನಿರ್ದೇಶಕ ಶಶಾಂಕ್ ಬಹಿರಂಗ ಪತ್ರ

Sumana Upadhyaya

ಬೆಂಗಳೂರು: ರಾಜಧಾನಿ ಬೆಂಗಳೂರು ಮಳೆಗಾಲದಲ್ಲಿ ಪ್ರವಾಹ, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದು, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದಿರುವುದು, ವರ್ಷಪೂರ್ತಿ ಸಂಚಾರ ದಟ್ಟಣೆ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳಿಂದ ನಲುಗಿ ಹೋಗುತ್ತಿದೆ.

ಈ ನಿಟ್ಟಿನಲ್ಲಿ ಬೆಂಗಳೂರಿಗೆ ತುರ್ತು ಆಗಬೇಕಾದ ಎರಡು ಯೋಜನೆಗಳನ್ನು ಶೀಘ್ರ ನೆರವೇರಿಸಿದರೆ ಬಹುತೇಕ ಕನ್ನಡಿಗರಿಗೆ ಅನುಕೂಲವಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಗಮನಕ್ಕೆ ತಂದಿದ್ದಾರೆ ಕನ್ನಡದ ನಿರ್ದೇಶಕ ಶಶಾಂಕ್.

ನೆಲಮಂಗಲ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಹೋಗಲು ಹೆಬ್ಬಾಗಿಲು. ಇಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು ಇದಕ್ಕೆ ಪರಿಹಾರ ಕಲ್ಪಿಸಬೇಕು. ಎರಡನೆಯದಾಗಿ ನೆಲಮಂಗಲ ಫ್ಲೈ ಓವರ್ ಮೇಲಿನ ಹೊರೆತಗ್ಗಿಸಲು ಅಭಿವೃದ್ಧಿಪಡಿಸಲಾಗುತ್ತಿರುವ ಮಾಗಡಿ ರಸ್ತೆ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತಗೊಂಡರೆ ಗೊರಗುಂಟೆ ಪಾಳ್ಯ ಜಂಕ್ಷನ್ ನಂತೆ ಸುಂಕದಕಟ್ಟೆ ಆಗಿ ಅಲ್ಲಿ ಕೂಡ ಸಂಚಾರ ದಟ್ಟಣೆಯಾಗುವುದು ಖಂಡಿತ. ಅದಕ್ಕೆ ಈಗಲೇ  ಪರಿಹಾರ ಕಂಡುಕೊಳ್ಳಬೇಕು ಎಂದು ಡಿಸಿಎಂನ್ನು ಒತ್ತಾಯಿಸಿದ್ದಾರೆ.

ಬೆಂಗಳೂರನ್ನು ಕರ್ನಾಟಕದ ಬಹುತೇಕ ಭಾಗಗಳಿಗೆ ಸಂಪರ್ಕಿಸುವ ಮತ್ತು ಅತಿ ಹೆಚ್ಚು ಕನ್ನಡಿಗರು ವಾಸಿಸುವ ಈ ಭಾಗ ಸಮಸ್ಯೆಯನ್ನು ಬಗೆಹರಿಸಿದರೆ ಕನ್ನಡಿಗರಿಗೆ ಸರ್ಕಾರದ ಬಹುದೊಡ್ಡ ಕೊಡುಗೆಯಾಗುತ್ತದೆ ಮಾತ್ರವಲ್ಲದೆ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡಿದಂತಾಗುತ್ತದೆ ಎಂದು ಪತ್ರದ ಮೂಲಕ ತಮ್ಮ ಅಭಿಪ್ರಾಯವನ್ನು ನಿರ್ದೇಶಕರು ಹೊರಹಾಕಿದ್ದಾರೆ.

SCROLL FOR NEXT