ಸಾಂದರ್ಭಿಕ ಚಿತ್ರ 
ರಾಜ್ಯ

ಕೊಪ್ಪಳ: ಗಂಟಲಿನಲ್ಲಿ ಆಹಾರ ಸಿಲುಕಿ 14 ವರ್ಷದ ವಿಕಲಚೇತನ ಬಾಲಕ ಸಾವು!

ದುರಂತ ಘಟನೆಯೊಂದರಲ್ಲಿ, ಕೊಪ್ಪಳದಲ್ಲಿ ಗಂಟಲಿನಲ್ಲಿ ಆಹಾರ ಸಿಲುಕಿದ ಪರಿಣಾಮ ಉಸಿರುಗಟ್ಟಿ ವಿಕಲಚೇತನ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ. ಮೃತ ಬಾಲಕನನ್ನು 14 ವರ್ಷದ ಆಂಜನೇಯ ಎಂದು ಗುರುತಿಸಲಾಗಿದೆ.

ಕೊಪ್ಪಳ: ದುರಂತ ಘಟನೆಯೊಂದರಲ್ಲಿ, ಕೊಪ್ಪಳದಲ್ಲಿ ಗಂಟಲಿನಲ್ಲಿ ಆಹಾರ ಸಿಲುಕಿದ ಪರಿಣಾಮ ಉಸಿರುಗಟ್ಟಿ ವಿಕಲಚೇತನ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.

ಮೃತ ಬಾಲಕನನ್ನು 14 ವರ್ಷದ ಆಂಜನೇಯ ಎಂದು ಗುರುತಿಸಲಾಗಿದೆ.

ಬಾಲಕ ಮೃತಪಟ್ಟ ಎರಡು ಗಂಟೆಗಳ ನಂತರ ಆತನ ಪೋಷಕರಿಗೆ ಈ ವಿಚಾರ ತಿಳಿದಿದೆ. 

ಪೊಲೀಸರ ಪ್ರಕಾರ, ಬಾಲಕನ ತಾಯಿ ಪ್ರತಿದಿನದಂತೆ ಆತನಿಗೆ ಊಟ ಬಡಿಸಿ, ಜಮೀನಿನಲ್ಲಿ ಕೆಲಸ ಮಾಡಲು ಹೊರಗೆ ಹೋಗಿದ್ದರು.

ಊಟ ಮಾಡುವಾಗ ಗಂಟಲಲ್ಲಿ ಆಹಾರ ಸಿಕ್ಕಿಹಾಕಿಕೊಂಡಿದ್ದು, ನೀರು ಕುಡಿಯಬೇಕು ಎಂದು ಅರಿಯದ ಬಾಲಕ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ.

ಘಟನೆ ಸಂಬಂಧ ಕನಕಗಿರಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಿತ್ರ..., My Friend... ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ!; US ಸೇನೆ ಜೊತೆ ನಂಟು ಹೊಂದಿದ್ದ ವ್ಯಕ್ತಿ ಈಶಾನ್ಯ ರಾಜ್ಯದಲ್ಲಿ; ದೇಶದ ವಿರುದ್ಧ ಸಂಚು!

ರಾಜ್ಯಾದ್ಯಂತ ಮಳೆ ಆರ್ಭಟ: ಬೆಂಗಳೂರು ಹೈರಾಣ, ಇನ್ನೂ 3 ದಿನ ಮಳೆ ಸಾಧ್ಯತೆ!

'ಭಾರತ ಆಪ್ತ ಸ್ನೆಹಿತ', 'ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ': ಆಫ್ಘನ್ ಕ್ರಿಕೆಟಿಗ Allah Ghazanfar ಎಚ್ಚರಿಕೆ

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

'ಅಶ್ಲೀಲ ಅಲ್ಲ, ಹಾಡನ್ನು Rewrite ಮಾಡ್ತೇನೆ': ನಿರ್ದೇಶಕ Prem ಕ್ಷಮೆಯಾಚನೆ! ನಟಿ ನೋರಾ, ಸಾಹಿತಿ ಅಲಂ ಬಗ್ಗೆಯೂ ಕಿಡಿ! Video

SCROLL FOR NEXT