ಸಾಂದರ್ಭಿಕ ಚಿತ್ರ 
ರಾಜ್ಯ

ಚಿಕ್ಕಬಳ್ಳಾಪುರ: ಯುವ ವೈದ್ಯೆಯ ‘ಅಶ್ಲೀಲ ಫೋಟೋ’ ತಂದೆಗೆ ಕಳುಹಿಸಿ ಬ್ಲ್ಯಾಕ್ ಮೇಲ್

ಹಣಕ್ಕಾಗಿ ಕಿಡಿಗೇಡಿಯೊಬ್ಬ ವೈದ್ಯೆಯ ಅಶ್ಲೀಲ ಫೋಟೋ ಎಡಿಟ್ ಮಾಡಿ ಆಕೆಯ ತಂದೆಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಹಣಕ್ಕಾಗಿ ಕಿಡಿಗೇಡಿಯೊಬ್ಬ ವೈದ್ಯೆಯ ಅಶ್ಲೀಲ ಫೋಟೋ ಎಡಿಟ್ ಮಾಡಿ ಆಕೆಯ ತಂದೆಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ವೈದ್ಯೆಗೆ ಕರೆ ಮಾಡಿದ ಕಿಡಿಗೇಡಿಯೊಬ್ಬ ನೀವು ಆನ್ ಲೈನ್ ನಲ್ಲಿ 5 ಸಾವಿರ ಸಾಲ ಪಡೆದಿದ್ದೀರಿ…ವಾಪಸ್ ಕಟ್ಟಬೇಕು ಎಂದು ಬೆದರಿಕೆಯೊಡ್ಡಿದ್ದಾನೆ. ಆದರೆ ಯುವತಿ ನಾನು ಸಾಲ ಪಡೆದಿಲ್ಲ, ಹಾಗಾಗಿ ಯಾವುದೇ ಹಣ ಕಟ್ಟಲ್ಲ ಎಂದು ವೈದ್ಯೆ ಹೇಳಿದ್ದರು. ಮತ್ತೆ ಕರೆ ಮಾಡಿದ ಆತ, ಹಣ ನೀಡದಿದ್ದರೇ ಗಂಭೀರ  ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಆಕೆ ಹಣ ಮರಳಿ ಪಾವತಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಇದಾದ ಬಳಿಕ ʻನಿಮ್ಮ ಅಶ್ಲೀಲ ಫೋಟೊ ನಮ್ಮ ಬಳಿ ಇದೆ. ಅದನ್ನು ನಿಮ್ಮ ಮನೆಯವರು, ಸ್ನೇಹಿತರಿಗೆಲ್ಲ ಕಳುಹಿಸುತ್ತೇನೆʼʼ ಎಂದು ಆಕೆಗೆ ತಿಳಿಸಲಾಗಿದೆ. ಆದರೆ, ತಮ್ಮ ಫೋಟೊ ಅವರಿಗೆ ಹೇಗೆ ಸಿಗುತ್ತದೆ, ತಾನು ಆ ರೀತಿ ನಡೆದುಕೊಂಡಿದ್ದೇ ಇಲ್ಲ ಎಂದು ಧೈರ್ಯವಾಗಿದ್ದರು ಈ ವೈದ್ಯೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯು ವೈದ್ಯೆಯ ಅಶ್ಲೀಲ ಫೋಟೋವನ್ನು ಆಕೆಯ ತಂದೆ ಮತ್ತು ಸಂಬಂಧಿಕರಿಗೆ ಕಳುಹಿಸಿದ ನಂತರ ದೂರು ದಾಖಲಿಸಲಾಗಿದೆ.

ಈ ನಡುವೆ, ಈ ವೈದ್ಯೆಯ ಅಸಭ್ಯ ಫೋಟೊ ಒಂದನ್ನು ಯುವತಿಯ ತಂದೆಯ ವಾಟ್ಸಾಪ್‌ಗೆ ಈ ಕಿರಾತಕ ಶೇರ್‌ ಮಾಡಿದ್ದಾನೆ. ಇದು ಅಶ್ಲೀಲವಾಗಿ ಎಡಿಟ್‌ ಮಾಡಿರುವ ಫೋಟೊ ಆಗಿದ್ದು, ಗೊತ್ತೇ ಆಗದಂತೆ ಎಡಿಟ್‌ ಮಾಡಲಾಗಿದೆ ಎನ್ನಲಾಗಿದೆ. ಜತೆಗೆ ಮನೆಯವರು, ಸಂಬಂಧಿಕರಿಗೂ ಈ ಫೋಟೊಗಳನ್ನು ಸೈಬರ್‌ ಕಳ್ಳ ಕಳುಹಿಸಿದ್ದಾನೆ. ಇದೀಗ ಯುವತಿಯ ತಂದೆ ಚಿಕ್ಕಬಳ್ಳಾಪುರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ವೈದ್ಯೆಯ ಫೋಟೋ ತೆಗೆದು ಮಾರ್ಫ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯದ ಹಿಂದೆ ಸಂಘಟಿತ ದರೋಡೆಕೋರರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT