ರಾಜ್ಯ

ಸಂಚಾರ ದಟ್ಟಣೆಯ ಜಂಕ್ಷನ್‌ಗಳ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮೆರಾಗಳ ಬಳಸಲು ಟ್ರಾಫಿಕ್ ಪೊಲೀಸರು ಮುಂದು!

Ramyashree GN

ಬೆಂಗಳೂರು: ಸಿಲಿಕಾನ್ ಸಿಟಿ, ಗಾರ್ಡೆನ್ ಸಿಟಿ ಎಂದು ಹೆಸರಾಗಿದ್ದ ಬೆಂಗಳೂರು ಇತ್ತೀಚೆಗೆ ಟ್ರಾಫಿಕ್‌ನಿಂದಾಗಿಯೂ ಗಮನ ಸೆಳೆಯುತ್ತಿದೆ. ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಸಂಚಾರ ದಟ್ಟಣೆ ಮೇಲೆ ಕಣ್ಣಿಡಲು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಸೋಮವಾರ ಹೆಬ್ಬಾಳ ಜಂಕ್ಷನ್‌ನಲ್ಲಿ ಡ್ರೋನ್ ಕ್ಯಾಮೆರಾ ಕಣ್ಗಾವಲು ಪ್ರಯೋಗವನ್ನು ನಡೆಸಿದರು.

ಮಂಗಳವಾರ ಮಾರತ್ತಹಳ್ಳಿ ಜಂಕ್ಷನ್‌ನಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಪರೀಕ್ಷಿಸಲು ಅವರು ಯೋಜಿಸಿದ್ದಾರೆ. ಸದ್ಯ, ಟ್ರಾಫಿಕ್ ಪೊಲೀಸರು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ಎರಡು ಡ್ರೋನ್ ಕ್ಯಾಮೆರಾಗಳನ್ನು ಹೊಂದಿದ್ದಾರೆ. 

ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಮಾತನಾಡಿ, 'ಟ್ರಾಫಿಕ್ ಆವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತಂತ್ರಜ್ಞಾನಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ನಾವು ಇಂದು ಪ್ರಯೋಗಗಳನ್ನು ನಡೆಸಿದ್ದೇವೆ ಮತ್ತು ವ್ಯವಸ್ಥೆಯೊಂದಿಗೆ ಪರಿಣಿತಿ ಪಡೆಯಲು ಮುಂದಿನ ವಾರ ಅದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದರು.

ಟ್ರಾಫಿಕ್ ಪೊಲೀಸರು ನಗರದಲ್ಲಿ ಹೆಚ್ಚು ಜನದಟ್ಟಣೆ ಇರುವ ಎಂಟು ಜಂಕ್ಷನ್‌ಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ವಾಹನಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿರುವೆಡೆ ದಟ್ಟಣೆಯನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.

SCROLL FOR NEXT