ಬೈಯ್ಯಪ್ಪನಹಳ್ಳಿ ಟರ್ಮಿನಲ್ 
ರಾಜ್ಯ

ಬೆಂಗಳೂರು: ದುರಸ್ತಿಗಾಗಿ 4 ವಾರಗಳಿಂದ ಕಾಯುತ್ತಿದೆ ಬೈಯ್ಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್!

ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಬೈಯ್ಯಪ್ಪನಹಳ್ಳಿ  ಸರ್ ಎಂ  ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಒಂದು ಭಾಗದ ಸೀಲಿಂಗ್ ನಲ್ಲಿ ಸೋರಿಕೆ ಉಂಟಾಗಿತ್ತು, ಆದರೆ ಇದುವರೆಗೆ ಅದನ್ನು ದುರಸ್ತಿ ಮಾಡುವ ಯಾವುದೇ ಕೆಲಸಗಳು ನಡೆದಿಲ್ಲ.  

ಬೆಂಗಳೂರು: ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಬೈಯ್ಯಪ್ಪನಹಳ್ಳಿ  ಸರ್ ಎಂ  ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಒಂದು ಭಾಗದ ಸೀಲಿಂಗ್ ನಲ್ಲಿ ಸೋರಿಕೆ ಉಂಟಾಗಿತ್ತು, ಆದರೆ ಇದುವರೆಗೆ ಅದನ್ನು ದುರಸ್ತಿ ಮಾಡುವ ಯಾವುದೇ ಕೆಲಸಗಳು ನಡೆದಿಲ್ಲ.  

ಅದನ್ನು ಸರಿಪಡಿಸುವ ಕೆಲಸದ ಸಂಬಂಧ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾನುವಾರ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ಭೇಟಿ ನೀಡಿತ್ತು. ಈ ವೇಳೆ ಸೀಲಿಂಗ್ ನಲ್ಲಿ ರಂದ್ರಗಳು ಕಂಡು ಬಂದಿವೆ, ಸೀಲಿಂಗ್ ನ ಮುರಿದ ಭಾಗಗಳು ಇನ್ನು ಅದೇ ಸ್ಥಳದಲ್ಲಿವೆ ಬ್ಯಾರಿಕೇಡ್ ವಿಸ್ತರಣೆ ಮಾಡಲಾಗಿದೆ.

ನಿಲ್ದಾಣದ ನಿರ್ಮಾಣದ ಗುತ್ತಿಗೆ ಪಡೆದಿರುವ ಎಂವಿವಿ ಸತ್ಯನಾರಾಯಣ ಅವರಿಗೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಆದರೆ ಯಾವಾಗ ಸಿದ್ಧವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಫಾಲ್ಸ್ ಸೀಲಿಂಗ್‌ಗಾಗಿ ಅಲ್ಯೂಮಿನಿಯಂ ಶೀಟ್‌ಗಳು ಪುಣೆಯಿಂದ ಬರಬೇಕು. ನಮಗೆ 150 ಚದರ ಮೀಟರ್ ಶೀಟ್ ಬೇಕಾಗುತ್ತದೆ. ಇದನ್ನು ಹಾಳೆಗಳಾಗಿ ಕತ್ತರಿಸಲಾಗುತ್ತದೆ, ಪ್ರತಿಯೊಂದೂ 3.5 ಮೀ ಉದ್ದ ಮತ್ತು 184 ಸೆಂ ಅಗಲವನ್ನು ಅಳತೆ ಇರುತ್ತದೆ ಎಂದರು.

 ಇನ್ನೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದ ಅವರು, ಅವಘಡದ ನಂತರ ಸೀಲಿಂಗ್ ಬಲಪಡಿಸುವ ಕೆಲಸ ಕೈಗೊಳ್ಳಲಾಗಿದೆ ಎಂದರು, ನಿರ್ಮಾಣವು ಕಳಪೆಯಾಗಿದೆಯೇ ಎಂದು ಕೇಳಿದಾಗ, ಅದನ್ನು ತಳ್ಳಿಹಾಕಿದರು, ತೀವ್ರ ತರವಾದ ಗಾಳಿ ಬಿಸಿದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ  ಎಂದು ತಿಳಿಸಿದ್ದಾರೆ.

ನೈಋತ್ಯ ರೈಲ್ವೆ ವಲಯ CPRO, ಅನೀಶ್ ಹೆಗ್ಡೆ ಮಾತನಾಡಿ, ಈ ರೀತಿಯ ಅವಘಡಗಳು ಪುನರಾವರ್ತನೆಯಾಗುವುದನ್ನು ತಡೆಗಟ್ಟಲು, ಫಾಲ್ಸ್ ಸೀಲಿಂಗ್  ಸಪೋರ್ಟ್ ಗಾಗಿ ಅಡಿಷನಲ್ ಸಸ್ಪೆಂಡರ್ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ಫಾಲ್ಸ್ ಸೀಲಿಂಗ್‌ನ ಮೂಲೆಗಳಲ್ಲಿ ಹೆಚ್ಚಿನ ಗಾಳಿಯು ಕತ್ತರಿಸುವುದನ್ನು ತಡೆಯಲು ಟ್ವೀಕ್ ಮಾಡಲಾಗುತ್ತಿದೆ. "125 ಕಿಮೀ ವೇಗದ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ಛಾವಣಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಬೆಂಗಳೂರು ಡಿಆರ್‌ಎಂ ಶ್ಯಾಮ್ ಸಿಂಗ್ ಮಾತನಾಡಿ, ಪ್ರಬಲ ಹಾಗೂ ತೀವ್ರ ವೇಗದ ಗಾಳಿ ಬೀಸಿದ್ದು, ಚಂಡಮಾರುತವು ಫಾಲ್ಸ್ ಸೀಲಿಂಗ್‌ನ ಒಂದು ಭಾಗವನ್ನು ಹಾನಿಗೊಳಿಸಿದೆ. ಹಾನಿಗೊಳಗಾದ ಭಾಗವನ್ನು ಬದಲಾಯಿಸಲಾಗುತ್ತಿದೆ ಮತ್ತು ಮರುಸ್ಥಾಪನೆಯನ್ನು ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಅವರು ಹೇಳಿದರು, ನಿರ್ಮಾಣ ಮತ್ತು ಬಳಸಿದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT