ರಾಜ್ಯ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಅಲ್ಪಸಂಖ್ಯಾತ ಆಯೋಗದಿಂದ ಸಭೆ

Srinivas Rao BV

ಬೆಂಗಳೂರು: ಏಕರೂಪ ನಾಗರಿಕ ಸಂಹಿತೆ ( ಯುಸಿಸಿ) ಕುರಿತು ಕಾನೂನು ಆಯೋಗ ಸಾರ್ವಜನಿಕರು ಹಾಗೂ ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸುವುದಕ್ಕೆ ಮುಂದಾಗಿರುವ ಬೆನ್ನಲ್ಲೇ ರಾಜ್ಯ ಅಲ್ಪಸಂಖ್ಯಾತ ಆಯೋಗ (ಕೆಎಸ್ಎಂಸಿ) ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳ ನಾಯಕರ ಸಭೆ ನಡೆಸಿದೆ. 

ಸೋಮವಾರ ಜೂ.27 ರಂದು ಈ ಸಭೆ ನಡೆದಿದ್ದು ಸಮುದಾಯಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಕೆಎಸ್ಎಂಸಿ ಅಧ್ಯಕ್ಷ ಅಬ್ದುಲ್ ಅಜೀಮ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ಮುಸ್ಲಿಂ ಸಮುದಾಯದ 25-30 ನಾಯಕರು ಹಾಗೂ ಕ್ರೈಸ್ತ ಸಮುದಾಯದ 25 ಮಂದಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಜೈನ, ಬುದ್ಧ, ಸಿಖ್, ಪಾರ್ಸಿ ಸಮುದಾಯಗಳ ನಾಯಕರೊಂದಿಗೆ ಮಂಗಳವಾರ ಸಭೆ ನಡೆಯಲಿದೆ. 

ಸಭೆಯಲ್ಲಿ ಯುಸಿಸಿಯ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು,  ನಿಗದಿತ ಪ್ರೋಫಾರ್ಮಾದಲ್ಲಿ ಅವರ ಪ್ರತಿಕ್ರಿಯೆಗಳನ್ನು ಜು.14 ರ ವೇಳೆಗೆ ಸಲ್ಲಿಸುವಂತೆ ಕೆಎಸ್ಎಂಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಈ ಬಳಿಕ ಕೆಎಸ್ಎಂ ಸಿ ಅಧ್ಯಕ್ಷರೂ ಸಹ ರಾಜ್ಯ ಅಲ್ಪಸಂಖ್ಯಾತ ಆಯೋಗ ಸಹ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರ ಅಭಿಪ್ರಾಯವನ್ನು ಕಾನೂನು ಆಯೋಗಕ್ಕೆ ಕಳಿಸಿಕೊಡಲಿದೆ.

SCROLL FOR NEXT