ಸಾಂದರ್ಭಿಕ ಚಿತ್ರ 
ರಾಜ್ಯ

'ನಮ್ಮ ಮೆಟ್ರೊ'ದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿ: ಟ್ವಿಟ್ಟರ್ ನಲ್ಲಿ ಚರ್ಚೆ ಹುಟ್ಟುಹಾಕಿದ ವೈದ್ಯರ ಟ್ವೀಟ್

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ ಕುರಿತು ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ಹಿರಿಯ ವೈದ್ಯರೊಬ್ಬರು ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ ಕುರಿತು ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ಹಿರಿಯ ವೈದ್ಯರೊಬ್ಬರು ನಮ್ಮ ಮೆಟ್ರೋದಲ್ಲಿ(Namma metro) ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅವರು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆ ನಡೆಯುತ್ತಿದೆ.

ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ದೀಪಕ್ ಕೃಷ್ಣಮೂರ್ತಿ ಅವರು ಆರು ಸರಳ ಪದಗಳನ್ನು ಟ್ವೀಟ್ ಮಾಡಿದ್ದರು. "ಮೆಟ್ರೋ ಮಹಿಳೆಯರಿಗೆ ಉಚಿತವಾಗಿರಬೇಕು ಎಂದು. ಅದಕ್ಕೆ ವಂಶಿ ಎನ್ನುವವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ "ವೈದ್ಯರು ಎಲ್ಲಾ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಬೇಕು." ಎಂದು ಬರೆದಿದ್ದಾರೆ. 

ಮತ್ತೊಬ್ಬ ವೈದ್ಯರಾದ ಡಾ.ಫಿಲೋಮತ್ ಎನ್ನುವವರು ಇದಕ್ಕೆ  ಹೆಣ್ಣು ಎಂಬ ಕಾರಣಕ್ಕೆ ಯಾವುದನ್ನೂ ಉಚಿತವಾಗಿ ನೀಡಬಾರದು ಎಂದಿದ್ದಾರೆ. ಅದಕ್ಕೆ ತಮಾಷೆಯೆಂಬಂತೆ ಉದ್ಯಮಿ ಎ ಜಿ ಎಂ ಸ್ವಾಮಿ ಟ್ವೀಟ್ ಮಾಡಿ ಮಹಿಳೆಯರಿಗೆ ವಿಮಾನ ಪ್ರಯಾಣ ಕೂಡ ಉಚಿತವಾಗಿ ನೀಡಬೇಕು ಎಂದಿದ್ದಾರೆ. 

ಕನಕಪುರ, ಮಾಗಡಿ ಮತ್ತು ತುಮಕೂರಿನಿಂದ ತಮ್ಮ ಕೆಲಸದ ಸ್ಥಳಗಳಿಗೆ ದೂರ ಪ್ರಯಾಣಿಸುವ ಗಾರ್ಮೆಂಟ್ಸ್ ಕಾರ್ಮಿಕರಿಗೆ ಇದರಿಂದ ಸಹಾಯವಾಗುತ್ತದೆ ಎಂದು ಮೈಸೂರಿನ ಅನಿಲ್ ರಾಜೇ ಅರಸ್ ಹೇಳುತ್ತಾರೆ. ಟೆಕ್ ಕೆಲಸಗಾರರಿಗೆ ರಿಯಾಯಿತಿಗಳನ್ನು ನೀಡಬೇಕು ಆದರೆ ಉಚಿತ ನೀಡಬಾರದು ಎನ್ನುತ್ತಾರೆ. 

ಸಾರ್ವಜನಿಕ ಸಾರಿಗೆ ಕಾರ್ಯಕರ್ತ, ಶ್ರೀನಿವಾಸ್ ಅಲವಿಲ್ಲಿ,  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿ, ಉಚಿತ ಅಥವಾ ಸಬ್ಸಿಡಿ ಸಾರ್ವಜನಿಕ ಸಾರಿಗೆಯ ಪ್ರತಿಪಾದಕನಾಗಿ, ನಾನು ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಬೇಕೆಂದು ಹೇಳುವುದಿಲ್ಲ. ಒಳ್ಳೆಯ ಕಾರಣಕ್ಕಾಗಿ ಎಸಿ ವಜ್ರ, ಏರ್‌ಪೋರ್ಟ್ ಗೆ ಹೋಗುವ ವಾಯುವಜ್ರ ಬಸ್‌ಗಳು ಮತ್ತು ದೂರದ ಎಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎನ್ನುತ್ತಾರೆ.

ಮೆಟ್ರೋ ಸಾಮಾನ್ಯವಾಗಿ ಕಡಿಮೆ-ದೂರ ಪ್ರಯಾಣಕ್ಕೆ ಆದ್ಯತೆಯ ಸಾರಿಗೆ ವಿಧಾನವಲ್ಲ. ಮೆಟ್ರೋದಲ್ಲಿ ದೂರದ ಪ್ರಯಾಣ ಮಾಡುವವರು ಪ್ರಯಾಣದ ವೆಚ್ಚವನ್ನು ಪಡೆಯಲು ಸಮರ್ಥರಾಗಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಬಳಸಲು ಹೆಚ್ಚಿನ ಜನರನ್ನು ಪ್ರಲೋಭಿಸಲು ಪುರುಷರನ್ನೂ ಒಳಗೊಂಡಂತೆ ಎಲ್ಲಾ ಬಸ್ ಪ್ರಯಾಣಕ್ಕೆ ಸಬ್ಸಿಡಿ ನೀಡುವುದು ಉತ್ತಮ ವಿಧಾನವಾಗಿದೆ ಎನ್ನುತ್ತಾರೆ ಅವರು. 

ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಕೇಳಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT