ರಾಜ್ಯ

2023-24ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಆರಂಭ: ಬಜೆಟ್ ಮಂಡಿಸುತ್ತಿರುವ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ

Manjula VN

ಬೆಂಗಳೂರು: 2023-2024ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಗುರುವಾರ ಮಂಡನೆಯಾಗುತ್ತಿದೆ.

ಕಸ ಸಮಸ್ಯೆ, ರಸ್ತೆ ಗುಂಡಿ, ಸಂಚಾರ ದಟ್ಟಣೆ ಸೇರಿದಂತೆ ಸಾಲು ಸಾಲು ಸವಾಲುಗಳ ನಡುವಲ್ಲೇ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ಅವರು ಇಂದು ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ನ್ನು ಮಂಡನೆ ಮಾಡುತ್ತಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲ. ಆದ್ದರಿಂದ ಕಳೆದ ಎರಡು ವರ್ಷವೂ ಅಧಿಕಾರಿಗಳೇ ಆಯ-ವ್ಯಯ ಮಂಡಿಸಿದ್ದರು. ಈ ವರ್ಷವೂ ಅದೇ ಸಂಪ್ರದಾಯ ಮುಂದುವರಿದಿದೆ.

ಆನ್‌ಲೈನ್‌ನಲ್ಲಿ ಬಜೆಟ್ ವೀಕ್ಷಿಸಬಹುದು...
ಪುರಭವನದಲ್ಲಿ ಇಂದು ಮಂಡನೆಯಾಗುತ್ತಿರುವ ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯವನ್ನು ಆನ್'ಲೈನ್  ನಲ್ಲಿ ವೀಕ್ಷಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಿಬಿಎಂಪಿಯ ಅಧಿಕೃತ ವೆಬ್ ಸೈಟ್  https://bbmp.gov.in ಜೊತೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರ ಫೇಸ್'ಬುಕ್, ಟ್ವಿಟರ್ ಮತ್ತು ಯೂಟ್ಯೂಬ್ https://www.youtube.com/watch?v=HyYKHmwOU6s ನಲ್ಲಿ ಸಾರ್ವಜನಿಕರು ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಬಿಬಿಎಂಪಿ ಬಜೆಟ್ ಲೈವ್ ಇಲ್ಲಿ ವೀಕ್ಷಿಸಿ...

SCROLL FOR NEXT