ರಾಜ್ಯ

ಸಂತ ಶಿಶುನಾಳ ಶರೀಫರ ತತ್ವಪದ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ: ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಹಾವೇರಿ: ಸುಕ್ಷೇತ್ರ ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಶಿಗ್ಗಾವಿ ತಾಲೂಕಿನ ಶಿಶುವಿನಾಳ ಗ್ರಾಮದ ಸಂತ ಶರೀಫ ಶಿವಯೋಗಿ ಮತ್ತು ಗೋವಿಂದಭಟ್ಟರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಶುವಿನಾಳದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಈಗಗಾಗಲೇ ರೂ. 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ ಎಂದರು. 

ಶರೀಫರ ತತ್ವಪದಗಳ ಭಾವಾರ್ಥದ  ಮೂಜಿಯಂ ಮಾಡುತ್ತಿದ್ದೇವೆ. ಶರೀಫರು ನಡೆದಾಡಿ ಹೋಗಿರುವ ಘಟನೆಗಳನ್ನು ಚಿತ್ರೀಕರಿಸುತ್ತೇವೆ. ಶರೀಪರ ಜೀವನ ಮೌಲ್ಯಗಳನ್ನ  ಸಾಮಾನ್ಯರೂ ತಿಳಿಯುವಂತಾಗ ಬೇಕು, ಶರೀಫರ ವಿಚಾರ ಧರ್ಮದ ಚೌಕಟ್ಟು ಮೀರಿದಂತಹದು. ಇವರು ವಿಸ್ಮಯವಾಗಿರುವ ಕವಿ, ಅವರನ್ನು ಅರ್ಥಮಾಡಿಕೊಂಡವರಿಗೆ ಅವರ ವಿಚಾರಗಳು ಗೊತ್ತಾಗುವುದು. ಶರೀಫರು ಜೀವನದ ಮೌಲ್ಯ, ಮಾನವೀಯ ಸಂಬಂಧದ ಬಗ್ಗೆ ಹೇಳಿದ್ದಾರೆ ಎಂದರು. 

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಮಾತನಾಡಿ, ನಮ್ಮ ದೊಡ್ಡ ಹೊಟ್ಟೆಪಾಡು ಶರೀಫರ ಹಾಡುಗಳಿಂದ ನಡೆದಿದೆ. 'ಸೋರುತಿಹದು ಮನೆಯ ಮಾಳಿಗೆ' ಎಂಬ ಹಾಡನ್ನು 32 ದೇಶಗಳಲ್ಲಿ ಹಾಡಿದ್ದೇನೆ ಎಂದರು.

SCROLL FOR NEXT