ರಾಜ್ಯ

ಬೆಂಗಳೂರು: ಸ್ಮಶಾನ ವಿಚಾರವಾಗಿ ಲೋಕಾಯುಕ್ತರ ಭೇಟಿ ಮಾಡಿದ ಹಿಂದೂಪರ ಹೋರಾಟಗಾರರು!

Shilpa D

ಬೆಂಗಳೂರು: ಬಿಬಿಎಂಪಿಯ ಹಿಂದೂ -ತಮಿಳು ಸ್ಮಶಾನ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಸನಾತನ ಪರಿಷತ್ ಮುಖಂಡ ಎಸ್ ಭಾಸ್ಕರನ್ ಮತ್ತು ಶ್ರೀರಾಮ ಸೇನೆ ಸದಸ್ಯರು ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರನ್ನು ಭೇಟಿಯಾದರು.

ಸ್ಮಶಾನ, ಆಸ್ತಿ ಗುರುತಿನ ಸಂಖ್ಯೆ (ಪಿನ್) 136-10034-115 ಮತ್ತು ಈಗ ಪಿನ್ 136-10034-117 ರಲ್ಲಿ ಬಿಬಿಎಂಪಿ ಕಚೇರಿ ಮತ್ತು ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲು 1 ಕೋಟಿ ರೂ. ವ್ಯಯಿಸಲಾಗಿದೆ.

ನ್ಯಾಯಮೂರ್ತಿ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ಪಶ್ಚಿಮ ಜಂಟಿ ಆಯುಕ್ತರ ನಡುವೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕಾರ್ಯಕರ್ತರು ಹೇಳಿದರು.

ಸ್ಮಶಾನದಲ್ಲಿ ಬಿಬಿಎಂಪಿ ಕಚೇರಿ ನಿರ್ಮಿಸಿದ್ದು, ಕ್ರೀಡಾಂಗಣವನ್ನೂ ನಿರ್ಮಿಸಲಾಗುತ್ತಿದೆ. ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಅವರ ಗ್ಯಾಂಗ್ ಸ್ಮಶಾನವನ್ನು ನಾಶಮಾಡಿದ್ದಾರೆ. ಇದೀಗ ಲೋಕಾಯುಕ್ತ ಸ್ಥಳಕ್ಕಾಗಮಿಸಿ ವರದಿ ಬಂದರೆ ಶಾಸಕರ ವಂಚನೆ ಬಯಲಾಗಲಿದೆ. ಬಿಬಿಎಂಪಿ ಕಚೇರಿ ಮತ್ತು ಕ್ರೀಡಾಂಗಣಕ್ಕಾಗಿ ಸಾವಿರಾರು ಅಸ್ಥಿಪಂಜರ ಮತ್ತು ಮೃತದೇಹಗಳು ನಾಪತ್ತೆಯಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರಿಗಳು ಭೇಟಿ ನೀಡಿ ವಾದ ಮಂಡಿಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಕಾರ್ಯಕರ್ತರು ತಿಳಿಸಿದರು.

SCROLL FOR NEXT