ಟ್ಯಾಂಕ್ ಗಳಿಂದ ನೀರು ಸೋರಿಕೆಯಾಗುತ್ತಿರುವುದು. 
ರಾಜ್ಯ

ಆಲೂರು ಬಿಡಿಎ ಫ್ಲ್ಯಾಟ್​ಗಳ ಕರ್ಮಕಾಂಡ: ನೀರು ಸೋರಿಕೆ, ಬಿರುಕು ಬಿಟ್ಟ ಗೋಡೆಗಳಿಂದ ವಿಲ್ಲಾ ನಿವಾಸಿಗಳು ಕಂಗಾಲು!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿರ್ಮಿತ ಆಲೂರು ವಿಲ್ಲಾ ಫ್ಲ್ಯಾಟ್ಸ್‌ಗಳಲ್ಲಿ ವಾಸಿಸುತ್ತಿರುವ ಜನರು ನೀರು ಸೋರಿಕೆ, ಬಿರುಕು ಬಿಟ್ಟ ಗೋಡೆಗಳಿಂದಾಗಿ ಕಂಗಾಲಾಗಿದ್ದಾರೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿರ್ಮಿತ ಆಲೂರು ವಿಲ್ಲಾ ಫ್ಲ್ಯಾಟ್ಸ್‌ಗಳಲ್ಲಿ ವಾಸಿಸುತ್ತಿರುವ ಜನರು ನೀರು ಸೋರಿಕೆ, ಬಿರುಕು ಬಿಟ್ಟ ಗೋಡೆಗಳಿಂದಾಗಿ ಕಂಗಾಲಾಗಿದ್ದಾರೆ.

ನೀರು ಸೋರಿಗೆ ಹಾಗೂ ಬಿರುಕು ಬಿಟ್ಟ ಗೋಡೆಗಳನ್ನು ಸರಿಪಡಿಸಲು ಫ್ಲ್ಯಾಟ್ ಗಳ ಮಾಲೀಕರು ಕಳೆದ ನಾಲ್ಕು ವರ್ಷಗಳಿಂದ ರೂ.18-80 ಸಾವಿರ ರುಪಾಯಿಗಳನ್ನು ಖರ್ಚು ಮಾಡಿದರೂ, ಸಮಸ್ಯೆಗಳು ಮಾತ್ರ ಮುಂದುವರೆಯುತ್ತಲೇ ಇದೆ. ಇದರಿಂದ ಮಾಲೀಕರು ಬೇಸತ್ತು ಹೋಗಿದ್ದಾರೆ.

ಆಲೂರು ಬಿಡಿಎ ಹಂತ-2 ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಶಶಿಧರ ಗಿರಡ್ಡಿ ಮಾತನಾಡಿ, ಸಮಸ್ಯೆ ಬಗೆಹರುವಂತೆ ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್ ಅವರಿಗೆ ಮನವಿ ಮಾಡಿದ್ದೆವು. ಸಮಸ್ಯೆ ಬಗೆಹರಿಸುವ ಭರವಸೆಯನ್ನು ಅವರು ನೀಡಿದ್ದರು. 400 ವಿಲ್ಲಾಗಳಿಗೆ ವಾಟರ್ ಪ್ರೂಫ್ ಹೊದಿಕೆ ನೀಡುವಂತೆ ಎಂಜಿನಿಯರ್‌ಗಳಿಗೆ ನಿರ್ದೇಶನಗಳನ್ನು ನೀಡಿದ್ದರು. ಆದರೆ, ಎಂಜಿನಿಯರ್ ಗಳಿಗೆ ಈ ಕೆಲಸ ಮಾಡಲು ಮನಸ್ಸಿಲ್ಲ. ವಿಲ್ಲಾಗಳಿಗೆ ವಾಟರ್ ಪ್ರೂಫ್ ಹೊದಿಕೆ ನೀಡಲು ಒಟ್ಟು 2 ಕೋಟಿ ರೂಪಾಯಿ ವೆಚ್ಚವಾಗಬಹುದು. ಹೀಗಾಗಿ ದುಬಾರಿ ನವೀಕರಣದ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆಂದು ಹೇಳಿದ್ದಾರೆ.

ಬಿಡಿಎ ಗುತ್ತಿಗೆದಾರರಾದ ಗೌರಿ ಕನ್‌ಸ್ಟ್ರಕ್ಷನ್ಸ್ ಕಳಪೆ ನಿರ್ಮಾಣ ಸಾಮಗ್ರಿಗಳನ್ನು ಬಳಕೆ ಮಾಡಿದ್ದು, ದುರಸ್ತಿ ಕಾರ್ಯಕ್ಕೆ ಇದೀಗ ಬಿಡಿಎ ಅನುದಾನ ನೀಡಬೇಕಿದೆ. ಡ್ಯೂಪ್ಲೆಕ್ಸ್ ಫ್ಲಾಟ್‌ಗಳಲ್ಲಿ ಬೆಡ್ ರೂಮ್ ಗಳಲ್ಲಿ ನೀರು ಹರಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬ್ಲಾಕ್ 5ರಲ್ಲಿ 3ಬಿಎಚ್ ಕೆ ಮನೆ ಹೊಂದಿರುವ ಶಂಬುಲಿಂಗ ಆಚಾರ್ಯ ಎಂಬುವವರು ಮಾತನಾಡಿ, ರೂಮ್ ನಲ್ಲಿ 24*7 ನೀರು ಸೋರಿಕೆಯಾಗುತ್ತಿತ್ತು. ಸೋರಿಕೆ ಸರಿಪಡಿಸಲು ಮೂರು ದಿನಗಳ ಹಿಂದೆ 25 ಸಾವಿರ ರೂ ಖರ್ಜು ಮಾಡಿದ್ದೆ. ಈ ಮೊದಲೂ ಕೂಡ ರೂ.2000 ಮತ್ತು ರೂ.10,000 ಖರ್ಚು ಮಾಡಿದ್ದೇನೆ. ಫ್ಲ್ಯಾಟ್' ಕೇವಲ ನಾಲ್ಕು ವರ್ಷಗಳಷ್ಟು ಹಳೆಯದಷ್ಟೇ ಈಗಲೇ ಸಮಸ್ಯೆಗಳು ತಲೆದೋರಿದೆ ಎಂದು ಹೇಳಿದ್ದಾರೆ.

ಎಸಿ ಜಗದೀಶ್ ಎಂಬುವವರು ಮಾತನಾಡಿ, 2019ರಲ್ಲಿ ಫ್ಲ್ಯಾಟ್ ಖರೀದಿ ಮಾಡಲಾಗಿತ್ತು. ಮಾಸ್ಟರ್ ಬೆಡ್ ರೂಮ್ ನಲ್ಲಿ ನೀರು ಸೋರಿಕೆಯಾಗುತ್ತಿದೆ, ಗೋಡೆಗಳು ಬಿರುಕು ಬಿಟ್ಟಿವೆ. ಇದನ್ನು ಸರಿಪಡಿಸಲು ಈಗಾಗಲೇ ರೂ.18,000 ಖರ್ಚು ಮಾಡಿದ್ದೇನೆ. ಕೋವಿಡ್ ಆರಂಭವಾಗುವುದಕ್ಕೂ ಮೊದಲು ದುರಸ್ತಿ ಕಾರ್ಯ ನಡೆಸಲಾಗಿತ್ತು. ಆದರೆ, ಮತ್ತೆ ಸಮಸ್ಯೆ ಶುರುವಾಯಿತು. ಸಮಸ್ಯೆಗಳನ್ನು ಸಂಘಕ್ಕೆ ವಹಿಸುವ ಮೂಲಕ ಬಿಡಿಎ ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ದೋಷಪೂರಿತ ನಿರ್ಮಾಣವೇ ಸಮಸ್ಯೆಗೆ ಮೂಲಕ ಕಾರಣ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 2025: ಸೋಲು ಬೆನ್ನಲ್ಲೇ ಟ್ರೋಫಿಯೊಂದಿಗೆ ಮೈದಾನ ತೊರೆದ ಪಾಕ್ ಸಚಿವ; ICCಗೆ ದೂರು ನೀಡಲು BCCI ಮುಂದು..!

Asia Cup 2025: ಪಾಕ್ ಸಚಿವನಿಂದ ಟ್ರೋಫ್ ಸ್ವೀಕರಿಸಲು ಭಾರತ ನಕಾರ; ತಡರಾತ್ರಿ ದುಬೈನಲ್ಲಿ ಹೈಡ್ರಾಮಾ, ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ..!

ಭಾರತದಿಂದ ಔಷಧ ಆಮದಿಗೆ ಶೇ.100 ರಷ್ಟು ಸುಂಕ: US ಅಹಂಕಾರಕ್ಕೆ ಪೆಟ್ಟು; ಭಾರತಕ್ಕೆ ಶೂನ್ಯ ಸುಂಕದೊಂದಿಗೆ ಬಾಗಿಲು ತೆರೆದ ಚೀನಾ!

ಏಷ್ಯಾ ಕಪ್ 2025 ಫೈನಲ್: ಸೋಲಿನ ಹತಾಶೆ, ರನ್ನರ್-ಅಪ್ ಚೆಕ್ ಬಿಸಾಡಿ ಹೋದ ಪಾಕ್ ನಾಯಕ

Asia Cup 2025: champion ತಂಡಕ್ಕೆ ಟ್ರೋಫಿ ಕೊಡದಿದ್ದನ್ನು ಎಂದೂ ನೋಡಿಲ್ಲ, ನನ್ನ ತಂಡವೇ ನನಗೆ ಟ್ರೋಫಿ; ಸೂರ್ಯಕುಮಾರ್ ಯಾದವ್

SCROLL FOR NEXT