ರಾಜ್ಯ

ಪ್ರೊ. ನರೇಂದ್ರ ನಾಯ್ಕ್ ಗೆ ನೀಡಿದ್ದ ಪೊಲೀಸ್ ಭದ್ರತೆ ಹಿಂಪಡೆದ ಸರ್ಕಾರ 

Srinivas Rao BV

ಮಂಗಳೂರು: ಸಾಮಾಜಿಕ ಕಾರ್ಯಕರ್ತರೂ ಆಗಿರುವ ಪ್ರೊ. ನರೇಂದ್ರ ನಾಯ್ಕ್ ಅವರಿಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
 
ನರೇಂದ್ರ ನಾಯ್ಕ್ ಅವರು ವಿಚಾರವಾದಿ ಸಂಘಗಳು (FIRA). ಅಧ್ಯಕ್ಷರಾಗಿದ್ದು, ನರೇಂದ್ರ ಧಾಬೋಲ್ಕರ್, ಗೋವಿಂದ್ ಪನ್ಸಾರೆ, ಎಂಎಂ ಕಲಬುರಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.  ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ ಐಟಿಗೆ ಆರೋಪಿಗಳ ಹಿಟ್ ಲಿಸ್ಟ್ ನಲ್ಲಿ ಪ್ರೊ. ನರೇಂದ್ರ ನಾಯ್ಕ್ ಹೆಸರು ಇದ್ದದ್ದು ಬೆಳಕಿಗೆ ಬಂದಿತ್ತು. 

ತಮಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯ ಬಗ್ಗೆ ಹೇಳಿಕೆ ನೀಡಿರುವ ನರೇಂದ್ರ ನಾಯ್ಕ್, ನನಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಇಂದು ಬೆಳಿಗ್ಗೆ ಏಕಾ ಏಕಿ ಹಿಂಪಡೆಯಲಾಗಿದೆ. ಹಿಂಪಡೆದ ಬಳಿಕ ಈ ಮಾಹಿತಿಯನ್ನು ತಮಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಮಾರ್ಚ್ ನ ಮೊದಲ ವಾರದಲ್ಲಿ ರಾಜ್ಯ ಸರ್ಕಾರದ ಸಲಹೆಯನ್ನು ಉಲ್ಲೇಖಿಸಿದ್ದ ಪತ್ರವೊಂದು ಡಿಸಿಪಿ (ಕಾನೂನು ಸುವ್ಯವಸ್ಥೆ) ಅವರಿಂದ ಬಂದಿತ್ತು. ಇದರಲ್ಲಿ ನಾನು ನನ್ನ ಭದ್ರತೆಗಾಗಿ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ನಾನು ಯಾವುದೇ ಭದ್ರತೆಗೂ ಕೇಳಿರಲಿಲ್ಲ ಹಾಗೂ ನನ್ನ ಸ್ವಂತ ರಕ್ಷಣೆಗಾಗಿ ಪಾವತಿ ಮಾಡುವಷ್ಟು ಶ್ರೀಮಂತ ವ್ಯಕ್ತಿ ಅಲ್ಲ. ಸಂಬಂಧಪಟ್ಟ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ ಇವೆಲ್ಲವನ್ನೂ ವಿವರಿಸಿ, ಪತ್ರವನ್ನೂ ನೀಡಿದ್ದೆ ಎಂದು ನರೇಂದ್ರ ನಾಯ್ಕ್ ಹೇಳಿದ್ದಾರೆ.

SCROLL FOR NEXT