ಮಕ್ಕಳೊಂದಿಗೆ ಮಾತನಾಡುತ್ತಿರುವ ಪ್ರಧಾನಿ ಮೋದಿ. 
ರಾಜ್ಯ

ಮಕ್ಕಳೊಂದಿಗೆ ಮಗುವಾದ ಮೋದಿ: ನೀವೂ ಪ್ರಧಾನಿಯಾಗುತ್ತೀರಾ... ಚಿಣ್ಣರೊಂದಿಗೆ ಅಕ್ಕರೆಯ ಮಾತು!

ಮಕ್ಕಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಬಾಂಧ್ಯವವನ್ನು ಹೊಂದಿದ್ದು, ಅದನ್ನು ಹಲವು ಬಾರಿ ತೋರ್ಪಡಿಸಿದ್ದಾರೆ.

ಕಲಬುರಗಿ: ಮಕ್ಕಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಬಾಂಧ್ಯವವನ್ನು ಹೊಂದಿದ್ದು, ಅದನ್ನು ಹಲವು ಬಾರಿ ತೋರ್ಪಡಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಿನ್ನೆಯಷ್ಟೇ ಪ್ರಧಾನಿ ಮೋದಿಯವರು ಕಲಬುರಗಿಗೆ ಭೇಟಿ ನೀಡಿ ಮತಬೇಟೆ ನಡೆಸಿದರು.

ಭೇಟಿ ವೇಳೆ ತಮ್ಮನ್ನು ನೋಡಲು ಬಂದಿದ್ದ ಪುಟಾಣೆ ಮಕ್ಕಳೊಂದಿಗೆ ಅಕ್ಕರೆಯ ಮಾತುಗಳನ್ನಾಗಿಡ ಪ್ರಸಂಗ ನಡೆಯಿತು.

ಭದ್ರತೆಯನ್ನು ಲೆಕ್ಕಿಸದೆ ಮಕ್ಕಳ ಬಳಿಗೆ ತೆರಳಿದ ಮೋದಿಯವರು, ಅವರೊಂದಿಗೆ ಕೂಡ ತಾವೂ ಕೂಡ ಮಗುವಾದರು. ಮಕ್ಕಳೊಂದಿಗೆ ಮಾತನಾಡುತ್ತಾ ಅವರಿಗೆ ಹಸ್ತ ಯೋಗ ಮಾಡುವುದನ್ನು ಹೇಳಿಕೊಟ್ಟರು. ಯಾವ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದೀರಿ? ನೀವು ದೊಡ್ಡವರಾದ ಮೇಲೆ ಏನಾಗಲು ಬಯಸುತ್ತೀರಿ ಎಂದು ಒಬ್ಬೊಬ್ಬರನ್ನೇ ಕೇಳಿದರು. ಈ ವೇಳೆ ಮಕ್ಕಳು ಪೊಲೀಸ್, ಡಾಕ್ಟರ್ ಆಗುತ್ತೇನೆ ಎಂದು ಹೇಳಿದರು.

ಇದೇ ವೇಳೆ, ಓರ್ವ ಬಾಲಕ ತಾನು ನಿಮ್ಮ ಕಾರ್ಯದರ್ಶಿಯಾಗುತ್ತೇನೆ ಎಂದು ಹೇಳಿದ್ದು, ಈ ಮಾತಿಗೆ ಫಿದಾ ಆದ ಮೋದಿಯವರು, ಆತನಿಗೆ ಮತ್ತೊಂದು ಪ್ರಶ್ನೆ ಕೇಳಿದರು.

ಹೌದಾ, ಯಾಕಪ್ಪ ಪ್ರಧಾನಿ ಆಗುವುದಿಲ್ಲವೇ? ನೀವ್ಯಾರೂ ಪ್ರಧಾನಿ ಆಗಲು ಬಯಸುವುದಿಲ್ಲವೇ ಎಂದು ಎಲ್ಲಾ ಮಕ್ಕಳನ್ನು ಪ್ರಶ್ನಿಸಿದರು.

ಮೋದಿಯವರ ಈ ಮಾತಿಗೆ ಮಕ್ಕಳೆಲ್ಲರೂ ನಕ್ಕರು. ಈ ವೇಳೆ ಬಾಲಕನಿಗೆ ನೀನು ಪ್ರಧಾನಿಯಾಗು ಎಂದು ಹರಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!