ರಾಜ್ಯ

ಕರ್ನಾಟಕ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್‌‌ಗೆ ಹೆಚ್ಚು ಸೀಟ್, ಅತಂತ್ರ ವಿಧಾನಸಭೆ ಸುಳಿವು

Ramyashree GN

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ.

ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್‌ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ.

ಸಮೀಕ್ಷೆಬಿಜೆಪಿಕಾಂಗ್ರೆಸ್ಜೆಡಿಎಸ್ಇತರರು
ಸಿ ವೋಟರ್ (C-Voter)83-95100-11221-2902-06
ರಿಪಬ್ಲಿಕ್ (Republic)85-10094-10824-3202-06
ಜೀ ನ್ಯೂಸ್  (Zee News)79-94103-11825-3302-05
ನ್ಯೂಸ್ ನೇಷನ್ಸ್-ಸಿಜಿಎಸ್114862103
ಪೋಲ್ ಸ್ಟಾರ್ಟ್88-9899-10921-2602-04
ನವಭಾರತ್ (Navbharath)78-92106-12020-2602-04
ಟೈಮ್ಸ್ ನೌ (Times Now)851132303
ಸುವರ್ಣ ನ್ಯೂಸ್- ಜನ್ ಕೀ ಬಾತ್ 94-11791-10614-242-6
Polls Of Polls911092202
ಟುಡೇಸ್ ಚಾಣಕ್ಯ921201203
     
     
SCROLL FOR NEXT