ರಾಜ್ಯ

'ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕ್ತಾರೆ’ ಅಂದೋರು ಯಾರು, ಆಗಿದ್ದು ಏನು?

Shilpa D

ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ‌ ಮತದಾನ ಮುಗಿದು ಇನ್ನು ಫಲಿತಾಂಶಕ್ಕಾಗಿ ಕಾಯುವ ಸಮಯ. ಇದರ ನಡುವೆಯೇ ಮತದಾನದ ದಿನ ನಡೆದ ರಾದ್ಧಾಂತಗಳು ಮುಂದುವರಿದಿವೆ.

ಜನರು ಪರಸ್ಪರ ಬೈದಾಡುವುದು, ಜಗಳದ ನಡುವೆಯೇ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಕೂಡಾ ವಿವಾದಕ್ಕೆ ಕಾರಣವಾಗಿದೆ. ಚಿಕ್ಕಮಗಳೂರಿನ ತರೀಕೆರೆಯಲ್ಲಿ ಬಜರಂಗದಳ ಕಾರ್ಯಕರ್ತನೊಬ್ಬ ಹಾಕಿದ ಪೋಸ್ಟ್‌ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ರಂಗೇನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್ ಎಂಬ ಬಜರಂಗದಳದ ಕಾರ್ಯಕರ್ತ ಬೇಡವಾಗಿದ್ದ ಸ್ಟೇಟಸ್​ ಹಾಕಿ ಯಡವಟ್ಟು ಮಾಡಿಕೊಂಡಿದ್ದಾನೆ.  ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿʼ ಎನ್ನುವುದು ಕಾರ್ತಿಕ್‌ ಹಾಕಿದ ಸ್ಟೇಟಸ್‌. ಈ ಸ್ಟೇಟಸ್ ನೋಡಿ ರೊಚ್ಚಿಗೆದ್ದ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಕಾರ್ತಿಕ್ ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಜರಂಗ ದಳ ಕಾರ್ಯಕರ್ತ ಕಾರ್ತಿಕ್‌ ಹಾಕಿದ ವಾಟ್ಸ್‌ ಆಪ್‌ ಸ್ಟೇಟಸ್‌ ಕಾಂಗ್ರೆಸ್‌ ನಾಯಕರನ್ನು, ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ.  ಆಕ್ರೋಶ ತಡೆಯಲಾಗದೇ ಲಕ್ಕವಳ್ಳಿ ಪೊಲೀಸ್ ಠಾಣೆಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಆರೋಪಿ ಕಾರ್ತಿಕ್​​ನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ತಿಕ್‌ ಹಗಲಿನಲ್ಲೇ ಸ್ಟೇಟಸ್‌ ಹಾಕಿದ್ದರೂ ವಿವಾದ ತೆರೆದುಕೊಂಡಿದ್ದು ತಡರಾತ್ರಿ. ಎಲ್ಲರೂ ಮತದಾನ ಮುಗಿಸಿ ಬಂದು ವಿರಮಿಸುತ್ತಿದ್ದಾಗ ಆತನ ಸ್ಟೇಟಸ್‌ ಚರ್ಚೆಗೆ ಕಾರಣವಾಯಿತು. ಆಗಲೇ ಎಲ್ಲರೂ ರೊಚ್ಚಿಗೆದ್ದು ಠಾಣೆಗೆ ಬಂದು ಪ್ರತಿಭಟಿಸಿದ್ದಾರೆ.

SCROLL FOR NEXT