ರಾಜ್ಯ

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿಗೆ ಕಂಬಳಿ ಉಡುಗೊರೆ ನೀಡಿದ ಸವದಿ ಬೆಂಬಲಿಗರು!

Shilpa D

ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡ ನಂತರ ಅವರ ಅಭಿಮಾನಿಗಳ ವಿಜಯೋತ್ಸವ ಆಚರಿಸಿದರು.

ಅಥಣಿಯ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಉಡುಗೊರೆಯಾಗಿ ತೋರಿಸಿ ಮುಂದಿನ ಐದು ವರ್ಷ ತಮ್ಮ ಮನೆಯಲ್ಲೇ ಮಲಗುವಂತೆ ಕಂಬಳಿ ತೋರಿಸಿ ಸಂಭ್ರಮಿಸಿದರು.

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳ ಹಲವಾರು ಅಡೆತಡೆಗಳ ನಡುವೆಯೂ ಗೆಲುವು ಸಾಧಿಸಿದ ಸವದಿ ಪರ ಘೋಷಣೆಗಳನ್ನು ಕೂಗಿದರು. ಮುಖಂಡರಾದ ಪ್ರದೀಪ ಕರಡಿ ಮಾತನಾಡಿ, ‘ಈ ಬಾರಿಯ ಚುನಾವಣೆಯಲ್ಲಿ ಸವದಿ ಅವರನ್ನು ಸೋಲಿಸಿ ಮುಂದಿನ ಐದು ವರ್ಷ ನಿದ್ದೆಗೆಡಿಸುವುದಾಗಿ ಹೇಳಿದ್ದ ಜಾರಕಿಹೊಳಿ ಹಾಗೂ ಕುಮಠಳ್ಳಿ ಅವರಿಗೆ ಈ ಕಂಬಳಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ, ಇದು ನಮ್ಮ ಉತ್ತರ ಅವರಿಗೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಹಾದೇವ ಆಲಬಾಳ್, ಜಿನ್ನು ದುರ್ಗಣ್ಣನವರ್, ಜಯಣ್ಣ ಪೂಜಾರಿ, ರಮೇಶ ವಡೆಯರ್, ಭೀಮಣ್ಣ ಜನಗೌಡ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT