ರಾಜ್ಯ

ಹುಣ್ಣಿಗೆರೆಯಲ್ಲಿ ಬಿಡಿಎ ವಸತಿ ಯೋಜನೆ ಪೂರ್ಣ; 2 ತಿಂಗಳಲ್ಲಿ ವಿಲ್ಲಾಗಳ ಮಾರಾಟ

Manjula VN

ಬೆಂಗಳೂರು: ದಾಸನಾಪುರ ಹೋಬಳಿಯ ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವಿನ ಹುಣ್ಣಿಗೆರೆ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಕೊನೆಗೂ ಪೂರ್ಣಗೊಂಡಿದ್ದು, 2 ತಿಂಗಳೊಳಗೆ ಮಾರಾಟಕ್ಕೆ ಮುಕ್ತವಾಗಲಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಲ್ಲಾಗಳಲ್ಲಿನ ಪ್ರತಿಯೊಂದು ಘಟಕದಲ್ಲಿಯೂ ಪಾರ್ಕಿಂಗ್ ಸ್ಥಳದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯ, 27 ಉದ್ಯಾನವನಗಳು, ಎರಡು ರೆಸ್ಟೋರೆಂಟ್‌ಗಳು ಮತ್ತು ಅದರ ಆವರಣದಲ್ಲಿ ಮನರಂಜನಾ ಕೇಂದ್ರಗಳಿವೆ.

ಹೊಸ ಸರ್ಕಾರ ರಚನೆಗೊಂಡ ಬಳಿಕ ಒಪ್ಪಿದೆ ಪಡೆದು ವಿಲ್ಲಾ ಹಾಗೂ ಫ್ಲ್ಯಾಟ್ ಗಳ ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿನ್ನೆಯಷ್ಟೇ ಸ್ಥಳಕ್ಕೆ ಬಿಡಿಎ ಆಯುಕ್ತ ಜಿ ಕುಮಾರ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ, ಪರಿಶೀಲನೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದರು.

170 4 ಬಿಹೆಚ್'ಕೆ ವಿಲ್ಲಾಗಳು, 152 3ಬಿಹೆಚ್'ಕೆ ವಿಲ್ಲಾಗಳು ಮತ್ತು 320 1ಬಿಹೆಚ್'ಕೆ ಫ್ಲಾಟ್‌ಗಳು ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.

4ಬಿಹೆಚ್'ಕೆ ಮನೆಗಳಿಗೆ 1.1 ಕೋಟಿ ರೂಪಾಯಿ, 3ಬಿಹೆಚ್'ಕೆ 75 ಲಕ್ಷ ರೂಪಾಯಿ ಮತ್ತು 1ಬಿಹೆಚ್'ಕೆ ಫ್ಲಾಟ್‌ಗಳಿಗೆ 13.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ಇವು ಅಂದಾಜು ದರಗಳಾಗಿವೆ. ತೆರಿಗೆಗಳು ಮತ್ತು ಇತರ ಶುಲ್ಕಗಳನ್ನು ಒಳಗೊಂಡಿಲ್ಲ. ಡ್ಯುಯಲ್ ಪೈಪ್‌ಲೈನ್ ವ್ಯವಸ್ಥೆ ಯೋಜನೆಯ ವಿಶೇಷತೆಯಾಗಿದೆ. ಯೋಜನೆಯಲ್ಲಿ ಪ್ರತಿ ಬ್ಲಾಕ್‌'ನ ಗೇಟ್‌ನೊಂದಿಗೆ 2.1-ಮೀಟರ್ ಕಾಂಪೌಂಡ್ ಗೋಡೆಗಳಿರಲಿವೆ ಎಂದು ಬಿಡಿಎ ಮಾಹಿತಿ ನೀಡಿದೆ.

SCROLL FOR NEXT