ರಾಜ್ಯ

ಆಗಿದ್ದು ಆಗಲಿ, ಕೆಜಿಎಫ್ ಬಾಬುಗೆ ಚೆಕ್ ಹಿಂತಿರುಗಿಸಬೇಡಿ: ಮಸೀದಿಗಳಿಗೆ ಉದಯ ಗರುಡಾಚಾರ್ ಸೂಚನೆ!

Shilpa D

ಬೆಂಗಳೂರು: ಚಿಕ್ಕಪೇಟೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ತಾನು ಕೊಟ್ಟ ಚೆಕ್ ಗಳನ್ನು ವಾಪಸ್ ಕೊಡಬೇಕೆಂದು ಪಕ್ಷೇತರ ಅಭ್ಯರ್ಥಿ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಮನವಿ ಮಾಡಿದ್ದರು.

ಈ ಸಂಬಂಧ ಪ್ರತ್ರಿಕ್ರಿಯಿಸಿರುವ ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಚೆಕ್ ಗಳನ್ನು ವಾಪಸ್ ನೀಡದಂತೆ ಮಸೀದಿ ಸಮಿತಿಗಳಿಗೆ ಸೂಚಿಸಿದ್ದಾರೆ.

ಸಮಿತಿಗಳು ಚೆಕ್ ಗಳನ್ನು ತಮ್ಮ ತಮ್ಮ ಬ್ಯಾಂಕ್ ಗಳಲ್ಲಿ ಹಾಜರುಪಡಿಸಬೇಕು. ಚೆಕ್ ಬೌನ್ಸ್ ಆಗಿದ್ದರೆ ಸಮಿತಿಗಳು ಬಾಬು ವಿರುದ್ಧ ವಂಚನೆ ಪ್ರಕರಣ ದಾಖಲಿಸಬೇಕು. ಈ ನಿಟ್ಟಿನಲ್ಲಿ ನಾನು ಸಮಿತಿಗಳ ಪರವಾಗಿ ನಿಲ್ಲುತ್ತೇನೆ ಎಂದು ಉದಯ್ ಗರುಡಾಚಾರ್ ಹೇಳಿದ್ದಾರೆ.

ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ನೀಡಿದ ದೇಣಿಗೆಯನ್ನು ವಾಪಸ್ ನೀಡುವಂತೆ  ಕೇಳಲಾಗುವುದಿಲ್ಲ. ಚಿಕ್ಕಪೇಟೆಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಬಾಬು 64 ಮಸೀದಿಗಳಿಗೆ ಚೆಕ್ ನೀಡಿದ್ದರು. ಅವರ ಸೋಲಿನ ನಂತರ, ಅವರು ಚೆಕ್‌ಗಳನ್ನು ಹಿಂದಿರುಗಿಸುವಂತೆ ಮಸೀದಿಗಳಿಗೆ ಕೇಳಿದ್ದಾರೆ ಎಂದು ವರದಿಯಾಗಿದೆ. ಅವುಗಳನ್ನು ಹಿಂದಿರುಗಿಸುವ ಅಗತ್ಯವಿಲ್ಲ' ಎಂದು ಗರುಡಾಚಾರ್ ಹೇಳಿದರು.

ಬಾಬು ಅವರು ಮಸೀದಿಗಳಿಗೆ 25 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣದ ಚೆಕ್ ನೀಡಿದ್ದಾರೆ.  ಮೇ 16 ರ ನಂತರ ವಾಪಸ್ ನೀಡುವಂತೆ ಕೇಳಿದ್ದಾರೆ. ನಾವು ಬಾಬು ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇವೆ ಮತ್ತು ಶನಿವಾರ ಎಲ್ಲಾ ಮಸೀದಿ ಸಮಿತಿಗಳ ಸಭೆ ನಡೆಸಲಿದ್ದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಸೀದಿ ಸಮಿತಿಗಳ ಅಧ್ಯಕ್ಷ ಖುದ್ದೂಸ್ ತಿಳಿಸಿದ್ದಾರೆ.

ನಾನು ಕೊಟ್ಟ ಹಣ ಹರಾಮ್ ಆಗಿದ್ದು ಅದನ್ನು ಖರ್ಚು ಮಾಡಬೇಡಿ, ಸಾಧ್ಯವಾದಷ್ಟೂ ಬೇಗ ಅದನ್ನು ವಾಪಸ್ ಕೊಡಿ ಎಂದು ಹೇಳಿದ್ದಾರೆ. ದಾರುಲ್ ಉಲೂಮ್ ನ ಫತ್ವಾವನ್ನು ಉಲ್ಲೇಖಿಸಿರುವ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಇಂತಹ ದೇಣಿಗೆಗಳನ್ನು ಪಡೆಯುವುದು ಹರಾಮ್ ಆಗಿದೆ ಎಂದು  ಹೀಗಾಗಿ ಬಾಬು ತಮ್ಮ ಚೆಕ್‌ಗಳನ್ನು ಹಿಂದಿರುಗಿಸುವಂತೆ  ಸಮಿತಿಗಳಿಗೆ ಹೇಳಿದ್ದಾರೆ. ಅವರು ಈ ಮನವಿ ಮಾಡಿದ್ದು, ಈ ಸಂಬಂಧ ಅವರು ಉರ್ದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ.

SCROLL FOR NEXT