ರಾಜ್ಯ

5 ಗ್ಯಾರಂಟಿ ಜಾರಿಗೆ ಹಣದ ಮೂಲ ತಿಳಿಸಿ: ರಾಜ್ಯ ಕಾಂಗ್ರೆಸ್'ಗೆ ಅಣ್ಣಾಮಲೈ ಆಗ್ರಹ

Manjula VN

ಚೆನ್ನೈ: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಅಭಿನಂದನೆಗಳನ್ನು ತಿಳಿಸಿದ್ದು, 5 ಗ್ಯಾರಂಟಿಗಳ ಜಾರಿಗೆ ಹಣದ ಮೂಲ ತಿಳಿಸುವಂತೆ ಆಗ್ರಹಿಸಿದ್ದಾರೆ.

ಜನಾದೇಶದೊಂದಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ವರ್ಷಕ್ಕೆ ಸುಮಾರು 65,000 ಕೋಟಿ ರೂ.ಗಳ ಅಗತ್ಯವಿರುವ ಐದು ಚುನಾವಣಾ ಗ್ಯಾರಂಟಿಗಳ ಜಾರಿಗೆ ತರಲು ಕಾಂಗ್ರೆಸ್ ಬಳಿ ಹಣವೆಲ್ಲಿದೆ? 2,000 ರೂಪಾಯಿ ನೋಟುಗಳನ್ನು ಚೀಲಗಳಲ್ಲಿ ಕಟ್ಟಲು ಸಾಧ್ಯವಿಲ್ಲ. ಈ ಸೆಪ್ಟೆಂಬರ್ ವೇಳೆಗೆ ಅವುಗಳನ್ನು ಹಿಂಪಡೆಯಲಾಗುವುದು ಎಂದು ಮಾರ್ಮಿಕವಾಗಿ ನುಡಿದರು.

ಇದೇ ವೇಳೆ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಭರವಸೆ ನೀಡಿದ್ದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಅಣ್ಣಾಮಲೈ ಅವರು ಟೀಕಿಸಿದ್ದಾರೆ.

ಹೆಚ್ಚಿನ ಮೌಲ್ಯದ ಕರೆನ್ಸಿ ನೋಟು ಹಿಂಪಡೆಯುವಿಕೆಯು ಸ್ವಚ್ಛ ಆಡಳಿತ, ಸ್ವಚ್ಛ ರಾಜಕೀಯ ಮತ್ತು ಸ್ವಚ್ಛ ನೋಟುಗಳನ್ನು ಖಾತ್ರಿಪಡಿಸುವ ಕೇಂದ್ರ ಸರ್ಕಾರದ ಉಪಕ್ರಮದ ಭಾಗವಾಗಿದೆ. ಇದನ್ನು ನೋಟು ಅಮಾನ್ಯೀಕರಣದೊಂದಿಗೆ ಹೋಲಿಸಿ ಗೊಂದಲಗಳ ಸೃಷ್ಟಿಸಬಾರದು. ರಾಷ್ಟ್ರವು ದೊಡ್ಡ ರೀತಿಯಲ್ಲಿ ಡಿಜಿಟಲ್ ವಹಿವಾಟಿಗೆ ಬದಲಾಗುತ್ತಿದೆ ಎಂದರು.

SCROLL FOR NEXT