ರಾಜ್ಯ

ಬೆಂಗಳೂರು: ಫೇಸ್ ಬುಕ್ ನಲ್ಲಿ ಲವ್; ಮಹಿಳೆಗೆ ಬೆತ್ತಲೆ ಫೋಟೋ ಶೇರ್ ಮಾಡಿ ತಗ್ಲಾಕೊಂಡ ಭೂಪ!

Shilpa D

ಬೆಂಗಳೂರು: 23 ವರ್ಷದ ಯುವಕನೊಬ್ಬ ತನ್ನ ಬೆತ್ತಲೆ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಅಪರಿಚಿತ ಮಹಿಳೆಯೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಇಕ್ಕಟ್ಟಿಗೆ ಸಿಲುಕಿದ್ದಾನೆ.

ಸಂತ್ರಸ್ತ ವ್ಯಕ್ತಿ ಮಾಗಡಿ ನಿವಾಸಿ ಎನ್ ಪ್ರದೀಪ್ (ಹೆಸರು ಬದಲಾಯಿಸಲಾಗಿದೆ) ಎಂದು ಹೇಳಲಾಗಿದೆ. ತನ್ನನ್ನು ಎಸ್ ದೀಪಿಕಾ ಎಂದು ಪರಿಚಯಿಸಿಕೊಂಡ ಮಹಿಳೆಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾನೆ. ನಂತರ ಆಕೆ ರಾಮನಗರದವಳು ಎಂದು ಹೇಳಿಕೊಂಡಿದ್ದಾಳೆ.

ಸ್ವಲ್ಪ ಸಮಯದ ನಂತರ ಇಬ್ಬರು ತಮ್ಮ ನಂಬರ್ ಗಳನ್ನು ಬದಲಿಸಿಕೊಂಡಿದ್ದಾರೆ.  ನಂತರ,  ದೀಪಿಕಾ ಪ್ರದೀಪ್ ಅವರ ನಗ್ನ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲು ಒತ್ತಾಯಿಸಿದ್ದಾಳೆ.  ಪ್ರತಿಯಾಗಿ ಆಕೆಯು ತನ್ನದು ಎಂದು ಹೇಳಿಕೊಂಡ  ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾಳೆ.

ಪ್ರದೀಪ್ ಫೋಟೋ ಮತ್ತು ವಿಡಿಯೋ ಕಳುಹಿಸಿದ  ನಂತರ ಆಕೆ ಬ್ಲ್ಯಾಕ್‌ಮೇಲ್ ಆರಂಭಿಸಿದ್ದಾಳೆ. ತನ್ನ ಹಣದ ಬೇಡಿಕೆ ಈಡೇರಿಸದಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ಪ್ರದೀಪ್ ಕಳುಹಿಸಿರುವ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.

ಕೆಲವು ದಿನಗಳ ನಂತರ ಪ್ರದೀಪ್ ಅವರ ಹೆಸರಿನಲ್ಲಿ  ಫೇಸ್ ಬುಕ್ ನಲ್ಲಿ ನಕಲಿ  ಖಾತೆಗಳನ್ನು ರಚಿಸಲಾಗಿದೆ. ಆತನ ಫೋಟೋಗಳನ್ನು ಬಳಸಿಕೊಂಡ ಆರೋಪಿಗಳು ಅಶ್ಲೀಲ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.  ಈ ಸಂಬಂಧ ಪ್ರದೀಪ್ ಭಾನುವಾರ ದೂರು ದಾಖಲಿಸಿದ್ದಾರೆ. ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
 
ಈ ವರ್ಷದ ಏಪ್ರಿಲ್ 23 ರಂದು ತನಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು, ಮೇ 17 ರಂದು ಅವರು ಫೋನ್ ಸಂಖ್ಯೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾಗಿ ಪ್ರದೀಪ್ ಹೇಳಿದರು. ನಂತರ ದೀಪಿಕಾ  ತಾನು  ಪ್ರೀತಿ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಆಕೆಯ ಪ್ರೀತಿಯಲ್ಲಿ ಬಿದ್ದ ಆತ ಮರುದಿನ ತನ್ನ ನಗ್ನಚಿತ್ರಗಳನ್ನು ಹಂಚಿಕೊಂಡಿದ್ದಾನೆ. ಮೇ 26 ರಂದು, ಸಂತ್ರಸ್ತನ ಹೆಸರಿನಲ್ಲಿ ನಾಲ್ಕು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು ಪತ್ತೆಯಾಗಿವೆ ಎಂದು ಹೇಳಿದ್ದಾನೆ.

ಸಂತ್ರಸ್ತ ಪ್ರದೀಪ್ ನನ್ನು ನಿಜವಾಗಿಯೂ ಸುಲಿಗೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವರ ಎಲ್ಲಾ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆಗೆದುಹಾಕುವಂತೆ ಅವರು ನಮಗೆ ವಿನಂತಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುವಾಗ ಎಚ್ಚರಿಕೆ ವಹಿಸುವಂತೆ ಸಿಐಡಿಯ ಸೈಬರ್ ಕ್ರೈಂ ವಿಭಾಗ ಸಾರ್ವಜನಿಕರಿಗೆ ಮನವಿ ಮಾಡಿದೆ.

SCROLL FOR NEXT