ರಾಜ್ಯ

Zika Virus Found In Chikkaballapur: ಮನುಷ್ಯರಿಗೆ ಜಿಕಾ ವೈರಸ್ ಸೋಂಕು ತಗುಲಿಲ್ಲ, ಗರ್ಭಿಣಿಯರು ಎಚ್ಚರಿಕೆಯಿಂದಿರಿ: ದಿನೇಶ್ ಗುಂಡೂರಾವ್

Srinivasamurthy VN

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಜಿಕಾ ವೈರಸ್ ಪತ್ತೆಯಾಗಿದೆಯಾದರೂ, ಮನುಷ್ಯರಲ್ಲಿ ಸೋಂಕು ಕಂಡುಬಂದಿಲ್ಲ.. ಗರ್ಭಿಣಿಯರು ಎಚ್ಚರಿಕೆಯಿಂದಿರಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜಿಕಾ ವೈರಸ್ ಪತ್ತೆಯಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿ ಝೀಕಾ ವೈರಸ್ ಪಾಟಿಸಿವ್ ಆಗಿರುವುದು ಪತ್ತೆಯಾಗಿಲ್ಲ. ಆದರೂ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ಮನುಷ್ಯರಲ್ಲಿ ಝೀಕಾ ಪಾಸಿಟಿವ್ ಬಂದಿಲ್ಲ. ಸೊಳ್ಳೆಗಳಿಗೆ ಬಂದಿದೆ. ಚಿಕ್ಕಬಳ್ಳಾಪುರದ ಹೊಂಡದಲ್ಲಿದ್ದ ಸೊಳ್ಳೆಗಳ ಪೂಲ್ ನಲ್ಲಿ ಜಿಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ 10 ದಿನಗಳ ಹಿಂದೆ ವರದಿ ಬಂದಿದೆ ಎಂದರು.

ಅಂತೆಯೇ, ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಆದರೆ ಝೀಕಾ ಮತ್ತು ನಿಫಾ ವೈರಸ್ ಬೇರೆ ಬೇರೆಯಾಗಿವೆ. ನಿಫಾ ಗಂಭೀರ ಸ್ವರೂಪದ ವೈರಾಣು ಆದರೆ ಝೀಕಾ ಬಗ್ಗೆ ಭಯ ಬೇಡ. ಆದರೂ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಖಾಯಿಲೆ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ.

ಇನ್ನು 3 ದಿನಗಳಲ್ಲಿ ರಿಪೋರ್ಟ್ ಬರುವ ಸಾಧ್ಯತೆ ಇದೆ. ವೈರಲ್ ಆತಂಕದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಸರ್ವಿಲೆನ್ಸ್ ಮಾಡಿರುವುದಕ್ಕೆ ಈಗ ವೈರಸ್ ಪತ್ತೆಯಾಗಿದೆ ಎಂದು ತಿಳಿಸಿದರು.

SCROLL FOR NEXT