ಮೈಸೂರು: ಎಚ್.ಡಿ ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಮೃತನನ್ನು ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ 45 ವರ್ಷದ ಬಾಲಾಜಿ ನಾಯಕ್ ಎಂದು ಗುರುತಿಸಲಾಗಿದೆ. ಹೊಲಕ್ಕೆ ಹೋಗಿದ್ದ ಬಾಲಾಜಿ ನಾಯ್ಕ ಮೇಲೆ ಹುಲಿ ದಾಳಿ ಮಾಡಿ ಎಳೆದೊಯ್ಯುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಗಾಡಿದ್ದಾರೆ.
ಇದನ್ನೂ ಓದಿ: Tiger Attack in Mysuru: ಮೈಸೂರಿನಲ್ಲಿ ಹುಲಿ ದಾಳಿ: ರೈತ ಗಂಭೀರ, ಅರಣ್ಯ ಸಿಬ್ಬಂದಿ ಮೇಲೆ ಸ್ಥಳೀಯರಿಂದ ಹಲ್ಲೆ
ಇದರಿಂದಾಗಿ ಬೆದರಿದ ಹುಲಿ ಬಾಲಾಜಿ ನಾಯಕ್ ಮೃತದೇಹವನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದೆ. ಹುಲಿ ದಾಳಿಯಿಂದ ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.