ಸಾಂದರ್ಭಿಕ ಚಿತ್ರ 
ರಾಜ್ಯ

ಕೋರಮಂಗಲದಲ್ಲಿ 15 ಸಾವಿರ ರು. ಮೌಲ್ಯದ ಪರ್ಷಿಯನ್ ಬೆಕ್ಕು ಕಳ್ಳತನ: ದೂರು ದಾಖಲು

ಸ್ಕೂಟರ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೋರಮಂಗಲ 8ನೇ ಬ್ಲಾಕ್‌ನಲ್ಲಿದ್ದ ಬಿಳಿ ಬಣ್ಣದ ಆರು ವರ್ಷದ ಪರ್ಷಿಯನ್ ಪಂಚ್ ಫೇಸ್ ಬೆಕ್ಕನ್ನು ಕದ್ದೊಯ್ದಿದ್ದಾರೆ. ಆರೋಪಿಗಳು ಕಟ್ಟಡಕ್ಕೆ ನುಗ್ಗಿ ಬನ್ನಿ ಎಂಬ ಹೆಸರಿನ ಬೆಕ್ಕು ಕದ್ದಿದ್ದಾರೆ ಮಾಲೀಕರು ದೂರು ನೀಡಿದ್ದಾರೆ.

ಬೆಂಗಳೂರು:ಸ್ಕೂಟರ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೋರಮಂಗಲ 8ನೇ ಬ್ಲಾಕ್‌ನಲ್ಲಿದ್ದ ಬಿಳಿ ಬಣ್ಣದ ಆರು ವರ್ಷದ ಪರ್ಷಿಯನ್ ಪಂಚ್ ಫೇಸ್ ಬೆಕ್ಕನ್ನು ಕದ್ದೊಯ್ದಿದ್ದಾರೆ. ಆರೋಪಿಗಳು ಕಟ್ಟಡಕ್ಕೆ ನುಗ್ಗಿ ಬನ್ನಿ ಎಂಬ ಹೆಸರಿನ ಬೆಕ್ಕು ಕದ್ದಿದ್ದಾರೆ ಮಾಲೀಕರು ದೂರು ನೀಡಿದ್ದಾರೆ.

ಎದುರಿನ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನೋಡಿದಾಗ ಬೆಕ್ಕು ಕಳ್ಳತನವಾಗಿರುವುದು ತಿಳಿದಿದೆ. ಬೆಕ್ಕಿನ ಬೆಲೆ ಸುಮಾರು 15 ಸಾವಿರ ರೂಪಾಯಿ ಎಂದು ಮಾಲೀಕ ಅಶ್ವಿನಿ ಶಂಕರ್ ಪೂಜಾರಿ ಗುರುವಾರ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ 9.30ರ ಸುಮಾರಿಗೆ ಬೆಕ್ಕು ಕಳ್ಳತನವಾಗಿದೆ ಎಂದು ಕೋರಮಂಗಲದ ಯೂನಿಯನ್ ಬ್ಯಾಂಕ್ ಎದುರು ವಾಸವಾಗಿರುವ ಅಶ್ವಿನಿ ತಿಳಿಸಿದ್ದಾರೆ. ತನ್ನ ಸಹೋದರ ಈ ಬೆಕ್ಕನ್ನು ನನಗೆ ಉಡುಗೊರೆಯಾಗಿ ನೀಡಿದ್ದರು ಎಂದು ಬ್ಯಾಂಕ್ ಉದ್ಯೋಗಿ ಅಶ್ವಿನಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ನಾನು ಕೋಣೆಯೊಳಗೆ ಕೆಲಸ ಮಾಡುತ್ತಿದ್ದೆ. ಸ್ವಲ್ಪ ಸಮಯದ ನಂತರ, ನಾನು ಹಾಲ್ ಗೆ ಬಂದಾಗ, ನಾನು ಬನ್ನಿಯನ್ನು (ಬೆಕ್ಕು) ನೋಡಲಿಲ್ಲ. ನಂತರ ನಾನು ಇಡೀ ಮನೆಯನ್ನು ಹುಡುಕಿದೆ ಮತ್ತು ಅವಳು ಪತ್ತೆಯಾಗಲಿಲ್ಲ. ನಾವು ಕಟ್ಟಡದ ಎರಡನೇ ಮಹಡಿಯಲ್ಲಿ ಉಳಿದುಕೊಂಡಿದ್ದೇವೆ.  ಏನೋ ನಡೆದಿರುವುದು ಎಂದು ಶಂಕಿಸಿ, ನಾನು ಪಕ್ಕದ ಕಟ್ಟಡದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇನೆ ಮತ್ತು ಇಬ್ಬರು ಆರೋಪಿಗಳು ನಮ್ಮ ಕಟ್ಟಡಕ್ಕೆ ಪ್ರವೇಶಿಸಿ ನನ್ನ ಬೆಕ್ಕನ್ನು ತೆಗೆದುಕೊಂಡು ಹೋಗುವುದನ್ನು ನೋಡಿದೆ ಎಂದು ಅವರು ಹೇಳಿದರು.

ಆರೋಪಿಗಳಿಬ್ಬರೂ ಹೆಲ್ಮೆಟ್ ಧರಿಸಿದ್ದರು. ಅವರ ಬಳಿ ಬ್ಯಾಕ್ ಪ್ಯಾಕ್  ಮತ್ತು ಬಾಕ್ಸ್ ಇತ್ತು, ಬೆಕ್ಕನ್ನು ಕದ್ದ ನಂತರ ಅದನ್ನು ಚೀಲದಲ್ಲಿ ಹಾಕಿಕೊಂಡು ವೇಗವಾಗಿ ಓಡಿ ಹೋಗಿದ್ದಾರೆ. ಇಬ್ಬರು ಬೆಕ್ಕನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸಿದ್ದೇವೆ. ಬೆಕ್ಕಿನ ಚಿತ್ರವನ್ನು ಅವರ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಲು ನಾವು ಕೆಲವು ಪ್ರಾಣಿ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!