ರಾಜ್ಯ

ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತೆಯರ ನೃತ್ಯದ ವಿಡಿಯೋ ತಿರುಚಿದ ದುಷ್ಕರ್ಮಿಗಳು, ಎಫ್‌ಐಆರ್ ದಾಖಲು

Ramyashree GN

ಬೆಳಗಾವಿ: ಕಾಂಗ್ರೆಸ್‌ ಕಾರ್ಯಕರ್ತೆಯರ ಸಂಭ್ರಮಾಚರಣೆ ಮತ್ತು ನೃತ್ಯದ ವಿಡಿಯೋವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಪಕ್ಷದ ಹಿರಿಯ ಕಾರ್ಯಕರ್ತೆ ಆಯೇಷಾ ಸನದಿ ಬೆಳಗಾವಿ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಐದು ತಿಂಗಳ ಹಿಂದಷ್ಟೇ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲವಾಗುವ ಶಕ್ತಿ ಯೋಜನೆಯ ಉದ್ಘಾಟನೆ ಸಮಯದಲ್ಲಿ ಸನದಿ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತೆಯರು ಸರ್ಕಾರಿ ಸ್ವಾಮ್ಯದ ಬಸ್‌ನಲ್ಲಿ ನೃತ್ಯ ಮಾಡಿದ್ದರು.

ಆಗ ವಿಡಿಯೋ ವೈರಲ್ ಆಗಿತ್ತು. ದುಷ್ಕರ್ಮಿಗಳು ಈ ವಿಡಿಯೋವನ್ನು ಅಶ್ಲೀಲ ಅರ್ಥ ನೀಡುವ ರೀತಿಯಲ್ಲಿ ಕನ್ನಡ ಸಿನಿಮಾವೊಂದರ ದೃಶ್ಯವನ್ನು ಸೇರಿಸಿ ಮಾರ್ಫಿಂಗ್ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತೆಯರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.

SCROLL FOR NEXT