ರಾಜ್ಯ

ಬೆಂಗಳೂರು: ಲಗ್ಗೆರೆಯಲ್ಲಿ ವಾಹನಗಳನ್ನು ಜಖಂಗೊಳಿಸಿದ್ದ ಐವರು ಮುಸುಕುಧಾರಿಗಳ ಬಂಧನ

Lingaraj Badiger

ಬೆಂಗಳೂರು: ನಿವಾಸಿಗಳಲ್ಲಿ ಭಯ ಹುಟ್ಟಿಸಲು ಮತ್ತು ಏರಿಯಾದಲ್ಲಿ ತಮ್ಮ ಹವಾ ಸೃಷ್ಟಿಸಲು ಲಗ್ಗೆರೆಯಲ್ಲಿ 17 ವಾಹನಗಳನ್ನು ಜಖಂಗೊಳಿಸಿದ್ದ ಐವರು ಮುಸುಕುಧಾರಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೂರು ವಾಹನಗಳ ಮಾಲೀಕರು ನೀಡಿದ ದೂರು ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ರಾಜಗೋಪಾಲ್ ನಗರ ಪೊಲೀಸರು, ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದ ಇಬ್ಬರು ಅಪರಾಧಿಗಳು ಸೇರಿದಂತೆ ಐವರು ಪುಡಿ ರೌಡಿಗಳನ್ನು ಬಂಧಿಸಿದ್ದಾರೆ. 

ಆರೋಪಿಗಳನ್ನು ಮಣಿಕಂಠ, ಅಲಿಯಾಸ್ ಕಲ್ಲ ಮಣಿ, ಸೋಮಶೇಖರ್, ಕುಳ್ಳ ಸೋಮ, ನಿತಿನ್ ಡೇನಿಯಲ್, ಲೋಕೇಶ್, ಕಾರ್ತಿಕ್ ಎಂದು ಗುರುತಿಸಲಾಗಿದೆ.

ಮಣಿಕಂಠ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಉತ್ತರ ವಿಭಾಗದಲ್ಲಿ ಹಲವು ಪ್ರಕರಣಗಳಿವೆ. ಸೋಮಶೇಖರ್ ಕೂಡ ಇದೇ ರೀತಿಯ ಅಪರಾಧದಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಆರೋಪಿಗಳು ನಿವಾಸಿಗಳಲ್ಲಿ ಭಯ ಹುಟ್ಟಿಸಲು ಮತ್ತು ಏರಿಯಾದಲ್ಲಿ ತಮ್ಮ ಹವಾ ಸೃಷ್ಟಿಸಲು ವಾಹನಗಳನ್ನು ಹಾನಿಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ನವೆಂಬರ್ 10 ರಂದು ಲಗ್ಗೆರೆ ಸಮೀಪದ ರಾಜೀವ್ ಗಾಂಧಿ ನಗರದಲ್ಲಿ 8-10 ಮುಸುಕುಧಾರಿ ದುಷ್ಕರ್ಮಿಗಳ ತಂಡ, 14 ಕಾರುಗಳು, ಎರಡು ಆಟೋ ರಿಕ್ಷಾಗಳು ಮತ್ತು ಒಂದು ಕ್ಯಾಂಟರ್‌ಗೆ ಕಬ್ಬಿಣದ ರಾಡ್ ಮತ್ತು ಮಚ್ಚಿನಿಂದ ಹಾನಿ ಮಾಡಿದ ಬಗ್ಗೆ ವರದಿಯಾಗಿತ್ತು.

ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ರಾಜಗೋಪಾಲ್ ನಗರ ಪೊಲೀಸರು ಆರೋಪಿಗಳಿಂದ ದ್ವಿಚಕ್ರ ವಾಹನ, ಮಚ್, ಮುಖವಾಡಗಳು ಮತ್ತು ಎರಡು ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT