ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ‘ಕಾರ್ ಪೂಲಿಂಗ್ ಬೇಡ’ ಎಂಬ ಪೋಸ್ಟರ್ ಹಾಕಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ

ಕಾರ್​ ಪೂಲಿಂಗ್‌ಗೆ ಸಂಸದರ ಬೆಂಬಲ ವಿರೋಧಿಸಿ ಪೋಸ್ಟರ್​ ಅಂಟಿಸುತ್ತಿದ್ದ ಆಟೋ ಚಾಲಕನನ್ನು ತಡೆದು ಬೆದರಿಕೆ ಹಾಕಿರುವ ಆರೋಪದಡಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು: ಕಾರ್​ ಪೂಲಿಂಗ್‌ಗೆ ಸಂಸದರ ಬೆಂಬಲ ವಿರೋಧಿಸಿ ಪೋಸ್ಟರ್​ ಅಂಟಿಸುತ್ತಿದ್ದ ಆಟೋ ಚಾಲಕನನ್ನು ತಡೆದು ಬೆದರಿಕೆ ಹಾಕಿರುವ ಆರೋಪದಡಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆಟೋ ಚಾಲಕ ಮನೋಜ್ ಕುಮಾರ್ ಎಂಬುವವರು ನೀಡಿರುವ ದೂರಿನನ್ವಯ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ಮನೋಜ್ ಕುಮಾರ್ ನವೆಂಬರ್ 17ರಂದು‌ ಶಂಕರ್ ನಾಗ್ ಸರ್ಕಲ್ ಬಳಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಅಡ್ಡಿಪಡಿಸಿ ಸಂಗಾತಿ ವೆಂಕಟೇಶ್ ಮತ್ತವರ ಕಡೆಯವರು ತಡೆದಿದ್ದಾರೆ.

ಈ ವೇಳೆ ಮನೋಜ್ ಕುಮಾರ್ ಹಾಗೂ ಇತರ ಕೆಲ ಚಾಲಕರು ತಮ್ಮ ಆಟೋ ಹಿಂದೆ ಹಾಕಲಾಗಿದ್ದ ''ಕಾರ್ ಪೂಲಿಂಗ್ ವ್ಯವಸ್ಥೆಗೆ ಬೆಂಬಲ ನೀಡಿರುವ ತೇಜಸ್ವಿ ಸೂರ್ಯಗೆ ಧಿಕ್ಕಾರ'' ಎಂಬ ಪೋಸ್ಟರ್ ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ಸಂದರ್ಭದಲ್ಲಿ 'ಮತ್ತೊಮ್ಮೆ ಏರಿಯಾಗೆ ಬಂದರೆ ಕತ್ತರಿಸಿಬಿಡುವುದಾಗಿ' ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಮೇರೆಗೆ ಆಟೋ ಚಾಲಕನ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಸಂಗಾತಿ ವೆಂಕಟೇಶ್ ಮತ್ತವರ ಬೆಂಬಲಿಗರ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದಿ ನ್ಯೂ ಇಂಡಿಯನ್ ಎತ್ಸ್ ಪ್ರೆಸ್ ಜೊತೆ ಮಾತನಾಡಿದ ಕುಮಾರ್, “ನಾನು ಬನಶಂಕರಿ ಮೊದಲ ಹಂತದಲ್ಲಿರುವ ಸ್ನೇಹಿತನನ್ನು ನೋಡಲು ಹೋಗಿದ್ದೆ. ಬೆಳಗ್ಗೆ 8.30ಕ್ಕೆ ಶಂಕರನಾಗ್ ವೃತ್ತದ ಕೆಂಪೇಗೌಡ ಆಟದ ಮೈದಾನದ ಬಳಿ ನನ್ನ ಇಬ್ಬರು ಸ್ನೇಹಿತರೊಂದಿಗೆ ಚಹಾ ಸೇವಿಸುತ್ತಿದ್ದಾಗ ಈ ಘಟನೆ ನಡೆದಿದೆ. ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ನನ್ನ ಆಟೋದಲ್ಲಿದ್ದ ‘ಕಾರ್ ಪೂಲಿಂಗ್ ಬೇಡ’ ಎಂಬ ಪೋಸ್ಟರ್ ಬಗ್ಗೆ ಕೇಳಿದರು. ಕಾರ್‌ಪೂಲಿಂಗ್ ನಮ್ಮ ವ್ಯವಹಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಾನು ಅವರಿಗೆ ಹೇಳಿದ್ದೇನೆ ಆದ್ದರಿಂದ ನಾನು ನನ್ನ ನಿಲುವನ್ನು ವ್ಯಕ್ತಪಡಿಸುವ ಪೋಸ್ಟರ್ ಅನ್ನು ಹಾಕಿದ್ದೇನೆ ಎಂದು ಹೇಳಿದ್ದಾರೆ.

ಪ್ರತಿನಿತ್ಯ ತಮ್ಮ ಕೆಲಸಗಳಿಗೆ ತೆರಳುವವರು‌ ಒಂದೊಂದು ಕಾರಿನಲ್ಲಿ ತೆರಳುವ ಬದಲು ಅದೇ ಮಾರ್ಗದಲ್ಲಿ ತೆರಳುವವರನ್ನ ಜೊತೆಗೆ ಕರೆದೊಯ್ಯಬಹುದು. ಇದೇ ರೀತಿ ಹೊಂದಾಣಿಕೆಯಲ್ಲಿ ನಿತ್ಯ ಒಬ್ಬೊಬ್ಬರು ತಮ್ಮ ಕಾರುಗಳನ್ನು ಬಳಸಿಕೊಳ್ಳಬಹುದು. ಇದರಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel