ವಿಶ್ವಕಪ್ ಟ್ರೋಫಿಯೊಂದಿಗೆ ಉರ್ಮಿಳಾ 
ರಾಜ್ಯ

ಆಸ್ಟ್ರೇಲಿಯಾದ 2023 ಕ್ರಿಕೆಟ್ ವಿಶ್ವಕಪ್ ಯಶಸ್ಸಿನ ಹಿಂದೆ ಮಂಗಳೂರಿನ ಯುವತಿ!

'ಆಸ್ಟ್ರೇಲಿಯಾದ 2023 ಕ್ರಿಕೆಟ್ ವಿಶ್ವಕಪ್ ಯಶಸ್ಸಿನ ಹಿಂದೆ ಭಾರತೀಯರ ಪಾಲಿದೆ. ಆಸೀಸ್ ಭರ್ಜರಿ ಗೆಲುವಿನಲ್ಲಿ ಭಾರತ ವಿಶೇಷವಾಗಿ ಮಂಗಳೂರಿನ ಯುವತಿಯ ಪಾಲೂ ಇದೆ. ಹೌದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಂಡದ ಮ್ಯಾನೇಜರ್ ಊರ್ಮಿಳಾ ರೊಸಾರಿಯೊ ಅವರಿಗೆ ಕರಾವಳಿಯೊಂದಿಗೆ ನಿಕಟ ಸಂಪರ್ಕವಿದೆ.

ಮಂಗಳೂರು: 'ಆಸ್ಟ್ರೇಲಿಯಾದ 2023 ಕ್ರಿಕೆಟ್ ವಿಶ್ವಕಪ್ ಯಶಸ್ಸಿನ ಹಿಂದೆ ಭಾರತೀಯರ ಪಾಲಿದೆ. ಆಸೀಸ್ ಭರ್ಜರಿ ಗೆಲುವಿನಲ್ಲಿ ಭಾರತ ವಿಶೇಷವಾಗಿ ಮಂಗಳೂರಿನ ಯುವತಿಯ ಪಾಲೂ ಇದೆ. ಹೌದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಂಡದ ಮ್ಯಾನೇಜರ್ ಊರ್ಮಿಳಾ ರೊಸಾರಿಯೊ ಅವರಿಗೆ ಕರಾವಳಿಯೊಂದಿಗೆ ನಿಕಟ ಸಂಪರ್ಕವಿದೆ.

34 ವರ್ಷದ ಊರ್ಮಿಳಾ ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಆಕೆಯ ಪೋಷಕರು ಕತಾರ್‌ನ ದೋಹಾದಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಜನಿಸಿದರು. ಆಕೆಯ ಪೋಷಕರು ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು, ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಖರೀದಿಸಿ ಅಲ್ಲಿಯೇ ನೆಲೆಸಿದರು. 

ಈ ಮಧ್ಯೆ, ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವೀಧರರಾದ ಊರ್ಮಿಳಾ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು. ಆ ಹೊತ್ತಿಗೆ ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಊರ್ಮಿಳಾ ಕತಾರ್ ಟೆನಿಸ್ ಫೆಡರೇಶನ್‌ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆಸ್ಟ್ರೇಲಿಯಾದಲ್ಲಿ ಮೊದಲು ಅವರು ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ ನಂತರ ತಂಡದ ಮ್ಯಾನೇಜರ್ ಆಗಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಸ್ಥಳಾಂತರಗೊಂಡರು. 

ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್‌ನಿಂದ ವಿರಾಮ ಪಡೆದ ಅವರು ನಾಲ್ಕು ತಿಂಗಳ ಕಾಲ ಕತಾರ್‌ನಲ್ಲಿ ಫುಟ್‌ಬಾಲ್ ಕ್ರೀಡಾಂಗಣವನ್ನು ನಿರ್ವಹಿಸಿದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕತಾರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ನಂತರ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಂಡದ ಮ್ಯಾನೇಜರ್ ಆಗಿ ನೇಮಿಸಲಾಗಿತ್ತು. 

ಮಹಿಳಾ ತಂಡಕ್ಕೆ ಮರಳುವ ಉರ್ಮಿಳಾ: ವಿಶ್ವಕಪ್ ನಿರ್ವಹಣೆಗಾಗಿ ಪುರುಷರ ತಂಡದೊಂದಿಗೆ ಉರ್ಮಿಳಾ ಭಾರತಕ್ಕೆ ಹೋಗಿದ್ದರು. ಶೀಘ್ರದಲ್ಲೇ ಅವರು ಮಹಿಳಾ ಕ್ರಿಕೆಟ್ ತಂಡವನ್ನು ಸೇರಲಿದ್ದು, ಅವರೊಂದಿಗೆ ಡಿಸೆಂಬರ್ ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಊರ್ಮಿಳಾ ಅವರ ಪ್ರಯಾಣ ತುಂಬಾ ಆಸಕ್ತಿದಾಯಕವಾಗಿದೆ. ವಿದ್ಯಾರ್ಥಿನಿಯಾಗಿ, ಬಾಸ್ಕೆಟ್‌ಬಾಲ್, ಟೆನಿಸ್, ರೋಯಿಂಗ್ ಮತ್ತು ಬಂಗೀ ಜಂಪಿಂಗ್‌ನತ್ತ ಗಮನ ಹರಿಸಿದ್ದ ಆಕೆ ಕ್ರಿಕೆಟ್‌ನೊಂದಿಗೆ ತುಂಬಾ ನಿಕಟ ಸಂಬಂಧ ಹೊಂದುತ್ತಾಳೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಅವರ ತಂದೆ ವ್ಯಾಲೆಂಟೈನ್ ಹೇಳಿದರು.

ತಂಡದ ಓಡಾಟ ವ್ಯವಸ್ಥೆ ಮತ್ತು ವಸತಿ ಸೇರಿದಂತೆ ಎಲ್ಲವನ್ನೂ ಉರ್ಮಿಳಾ ನಿರ್ವಹಿಸುತ್ತಾರೆ. ಆಕೆಯ ಕೆಳಗಡೆ ಅನೇಕ ಮಂದಿ ಕೆಲಸ ಮಾಡುತ್ತಿದ್ದು, ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ ಎಂದು ಅವರ ತಾಯಿ ಐವಿ ತಿಳಿಸಿದರು. 

ಉರ್ಮಿಳಾ ಆಸ್ಟ್ರೇಲಿಯಾ ಪ್ರಜೆ ಅಲ್ಲದಿದ್ದರೂ ಮತ್ತು ಆ ಸಮಯದಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ, ಸುಮಾರು ನಾಲ್ಕು ವರ್ಷಗಳ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ಅವರನ್ನು ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ನಿಯೋಜನೆ ಮಾಡಿದ್ದದ್ದು ತುಂಬಾ ಆಶ್ಚರ್ಯಕರ ಎಂದು ಹೇಳುವ ವ್ಯಾಲೆಂಟೈನ್, ಆಕೆಗೆ ಭಾರತದ ಬಗ್ಗೆ ಮತ್ತು ಇಲ್ಲಿನ ಭಾಷೆಗಳು ಗೊತ್ತಿರುವುದರಿಂದ ಯಶಸ್ವಿಯಾಗಿ ಮಹಿಳಾ ತಂಡವನ್ನು ನಿಭಾಯಿಸುತ್ತಾರೆ. ಹಿಂದಿ, ಕನ್ನಡ ಹಾಗೂ ಕೊಂಕಣಿಯನ್ನು ಆಕೆ ಮಾತನಾಡಬಲ್ಲರು ಎಂದು ತಿಳಿಸಿದರು. 

ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಆಸ್ಟ್ರೇಲಿಯಾದ ಪಂದ್ಯಗಳನ್ನು ಉರ್ಮಿಳಾ ಪೋಷಕರು ವೀಕ್ಷಿಸಿದ್ದರು. ಫೈನಲ್‌ ಪಂದ್ಯ ವೀಕ್ಷಿಸಲು ಬಯಸಿದ್ದೇವು. ಆದರೆ ದುರದೃಷ್ಟವಶಾತ್ ಎಸ್ಟೇಟ್ ಬಿಟ್ಟುಬರಲು ಸಾಧ್ಯವಾಗಲಿಲ್ಲ ಎಂದು ಐವಿ ಹೇಳಿದರು. ಈ ವರ್ಷದ ಮಾರ್ಚ್‌ನಲ್ಲಿ ಊರ್ಮಿಳಾ ತನ್ನ ಪೋಷಕರನ್ನು ಭೇಟಿ ಮಾಡಿದ್ದರು. ಎಸ್ಟೇಟ್‌ನಲ್ಲಿ ತನ್ನ ತಂದೆಯೊಂದಿಗೆ ಕೆಲಸ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT