ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ) 
ರಾಜ್ಯ

ಆಸ್ತಿ ದಾಖಲೆ ಡಿಜಿಟಲೀಕರಣ: BWSSB, ಬೆಸ್ಕಾಂ ವಿವರ ಕೇಳಿ ಬಿಬಿಎಂಪಿಯಿಂದ SMS

ತೆರಿಗೆ ಸಂಗ್ರಹದ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ  ಮಾಡುತ್ತಿದೆ. ಈ ಸಂಬಂಧ ಆಸ್ತಿ ಮಾಲೀಕರಿಗೆ...

ಬೆಂಗಳೂರು: ತೆರಿಗೆ ಸಂಗ್ರಹದ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ  ಮಾಡುತ್ತಿದೆ. ಈ ಸಂಬಂಧ ಆಸ್ತಿ ಮಾಲೀಕರಿಗೆ ತಮ್ಮ BWSSB ಮತ್ತು ಬೆಸ್ಕಾಂ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ SMS ಕಳುಹಿಸುತ್ತಿದೆ.

ಕಂದಾಯ ಅಧಿಕಾರಿಗಳು ಖಾತಾ ಸಂಖ್ಯೆ, ಆಸ್ತಿ ತೆರಿಗೆ ರಶೀದಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ(BWSSB)ಯ ದಾಖಲೆ ಸಂಖ್ಯೆ ಸೇರಿದಂತೆ ಮುಂತಾದ ವಿವರಗಳನ್ನು ಸಂಗ್ರಹಿಸುತ್ತಾರೆ ಮತ್ತು ಆಸ್ತಿಯ ಫೋಟೋಗಳನ್ನು ಕ್ಲಿಕ್ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಪ್ರಾಪರ್ಟಿಗಳನ್ನು ಮ್ಯಾಪ್ ಮಾಡಲಾಗುತ್ತದೆ ಮತ್ತು ಡಿಜಿಟೈಸ್ ಮಾಡಲಾಗುತ್ತದೆ. RR ಸಂಖ್ಯೆಗಳು ಮತ್ತು ಆಸ್ತಿ ದಾಖಲೆಗಳ ಏಕೀಕರಣವು ಆಸ್ತಿಯನ್ನು ಮಾರಾಟ ಮಾಡುವಾಗ ಇತರ ಮಹಾನಗರ ಪಾಲಿಕೆಯ ಇತರೆ ಕಚೇರಿಗಳ ಗೊಂದಲವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆಸ್ತಿ ಮಾರಾಟವಾದಾಗ ಮತ್ತು ಮಾಲೀಕರ ಹೆಸರು ಬದಲಾದಾಗ ಆಟೋ ಟ್ರಿಗ್ಗರ್‌ಗಳನ್ನು ಬೆಸ್ಕಾಂ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಕಳುಹಿಸಲಾಗುವುದು ”ಎಂದು ಅವರು ಹೇಳಿದ್ದಾರೆ.

ಆಸ್ತಿ ವಿವರಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಈ ಉಪಕ್ರಮವು ಸುಮಾರು 30-40 ಲಕ್ಷ ಆಸ್ತಿಗಳನ್ನು ಬಿಬಿಎಂಪಿ ತೆರಿಗೆ ವ್ಯಾಪ್ತಿಯಲ್ಲಿ ತರುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲಾಗುತ್ತಿದೆ.

ಬೆಂಗಳೂರಿನಿಂದ ಹೊರಗಿರುವ ಮಾಲೀಕರನ್ನು ನಂತರ ಸಂಪರ್ಕಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಆಸ್ತಿ ಹೊಂದಿರುವ ಆದರೆ ಪ್ರಸ್ತುತ ಹೊರಗೆ ವಾಸಿಸುವ ಜನರ ಬಗ್ಗೆ ನಂತರ ಮಾಹಿತಿ ಸಂಗ್ರಹಿಸಲಾಗುವುದು. ಮೊದಲು ನಗರದಲ್ಲಿ ಲಭ್ಯವಿರುವವರ ವಿವಿರ ಸಂಗ್ರಹಿಸುತ್ತೇವೆ. ನಂತರ ನಗರದಿಂದ ಹೊರಗೆ ಇರುವವರನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ‘ನನ್ನ ಸ್ವತ್ತು’(ನನ್ನ ಆಸ್ತಿ) ಉಪಕ್ರಮದ ಭಾಗವಾಗಿದೆ. ಎರಡು ತಿಂಗಳ ಹಿಂದೆ ಸಿ.ವಿ.ರಾಮನ್ ನಗರ, ಕೊಡಿಗೇಹಳ್ಳಿ, ಹೊರಮಾವು, ಅರಕೆರೆ ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಜನವರಿಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ ಎಂದರು.

ಆಸ್ತಿ ತೆರಿಗೆ ಪಾವತಿಸಲು ವೆಬ್‌ಸೈಟ್
https://bbmptax.karnataka.gov.in ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಅಥವಾ ವಿವರಗಳನ್ನು ಪಡೆಯಲು ಟೋಲ್ ಫ್ರೀ ಸಂಖ್ಯೆ 1533 ಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿಸಬಹುದು. ಕಳೆದ ವರ್ಷ ಬಿಬಿಎಂಪಿ ಆಸ್ತಿ ತೆರಿಗೆ ಮೂಲಕ 3,332.72 ಕೋಟಿ ರೂ. ಸಂಗ್ರಹಿಸಿದ್ದು, ಈ ವರ್ಷ 4,189 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT