ಸಂಗ್ರಹ ಚಿತ್ರ 
ರಾಜ್ಯ

ದೋಷಮುಕ್ತ ಮರಣ ಪ್ರಮಾಣ ಪತ್ರ ವಿತರಿಸಲು ವ್ಯವಸ್ಥೆ ಕಲ್ಪಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಮರಣ ಪ್ರಮಾಣ ಪತ್ರದಲ್ಲಿ ಸಣ್ಣಪುಟ್ಟ ತಿದ್ದುಪಡಿಗಾಗಿ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವಂತೆ ಮಾಡದೆ ದೋಷಮುಕ್ತ ಮರಣ ಪ್ರಮಾಣ ಪತ್ರ ವಿತರಿಸಲು ವ್ಯವಸ್ಥೆ ಕಲ್ಪಿಸಿ ಎಂದು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರು: ಮರಣ ಪ್ರಮಾಣ ಪತ್ರದಲ್ಲಿ ಸಣ್ಣಪುಟ್ಟ ತಿದ್ದುಪಡಿಗಾಗಿ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವಂತೆ ಮಾಡದೆ ದೋಷಮುಕ್ತ ಮರಣ ಪ್ರಮಾಣ ಪತ್ರ ವಿತರಿಸಲು ವ್ಯವಸ್ಥೆ ಕಲ್ಪಿಸಿ ಎಂದು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರಿನ ಸಾಯಿಲಕ್ಷ್ಮೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಮರಣ ಪ್ರಮಾಣಪತ್ರ ವಿತರಣೆಗೆ ಮುನ್ನ ಇ-ಕೆವೈಸಿ ಮಾದರಿ ದತ್ತಾಂಶ ಸಂಗ್ರಹ ಅನುಸರಿಸಿ. ಈ ಪ್ರಕ್ರಿಯೆ ಪ್ರಾರಂಭಿಸಿರುವುದರಿಂದ ಮರಣ ಪ್ರಮಾಣಪತ್ರ ವಿತರಣೆಯಲ್ಲಿ ದೋಷಗಳು ಆಗುವುದು ತಪ್ಪಿಸಬಹುದಾಗಿದೆ. ಮೊದಲು ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟ ಕೂಡಲೇ ಅವರ ವಿವರಗಳನ್ನು ಇ-ಕೆವೈಸಿಯಲ್ಲಿ ಭರ್ತಿ ಮಾಡಬೇಕು. ನಂತರ ಅದನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿ ಮರಣ ಪ್ರಮಾಣಪತ್ರ ವಿತರಿಸಬೇಕು ಎಂದು ಆದೇಶಿಸಿದೆ.

ಯಾವುದೇ ವ್ಯಕ್ತಿಯ ಸಾವು ಸಂಭವಿಸಿದ ಕೂಡಲೇ ಆಸ್ಪತ್ರೆಯ ದಾಖಲೆಗಳಲ್ಲಿ ಅದನ್ನು ನಮೂದಿಸಬೇಕು ಮತ್ತು ಆನಂತರ ಮರಣ ಪ್ರಮಾಣಪತ್ರ ವಿತರಿಸಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಿವೆ ಮತ್ತು ಇದು ದುರ್ಬಳಕೆ ಸಾಧ್ಯತೆಗಳೂ ಸಹ ಹೆಚ್ಚಿರಲಿವೆ.

ಹೀಗಾಗಿ ಆಸ್ಪತ್ರೆಗಳು ಯಾರು ಮೃತಪಟ್ಟಿದ್ದಾರೆ ಎಂಬುದನ್ನು ಗುರುತಿಸಿ, ಮೃತ ವ್ಯಕ್ತಿಯ ಅಗತ್ಯ ದಾಖಲೆಗಳನ್ನು ಪಡೆದು ಆ ವಿವರಗಳನ್ನು ಪ್ರಾಥಮಿಕ ಹಂತದಲ್ಲಿಯೇ ದಾಖಲಿಸಬೇಕು. ಅದನ್ನು ಸಂಬಂಧಿಸಿದ ಪ್ರಾಧಿಕಾರ ಅಥವಾ ಅಧಿಕಾರಿಗಳು ಪರಿಶೀಲಿಸಿ ಆನಂತರ ಮರಣ ಪ್ರಮಾಣಪತ್ರ ವಿತರಿಸಬೇಕು. ಇದರಿಂದ ಬಹುತೇಕ ತಪ್ಪುಗಳಾಗುವುದನ್ನು ತಡೆಯಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಜನನ ಮತ್ತು ಮರಣ ಪ್ರಮಾಣಪತ್ರಗಳಿಗೆ ಅದರದ್ದೇ ಆದ ಮಾನ್ಯತೆ ಇದ್ದು, ಅದನ್ನು ವಿಶ್ವಾಸಾರ್ಹತೆಯಿಂದ ಪರಿಗಣಿಸಲಾಗುತ್ತದೆ ಹಾಗೂ ಅದನ್ನು ಆಧಾರ್‌ನಲ್ಲಿ ಬಳಸುವಂತೆ ಇ-ಕೆವೈಸಿ ಮೂಲಕ ಮೃತ ವ್ಯಕ್ತಿಯನ್ನು ಗುರುತಿಸಿ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆೆ ಜಾರಿಗೊಳಿಸಬೇಕು ಎಂದು ಹೇಳಿದೆ.

ಅಲ್ಲದೆ, ಕರ್ನಾಟಕ ಜನನ ಮತ್ತು ಮರಣ ನೋಂದಣಿ ನಿಯಮ 1999ರ ನಿಯಮ 11ರ ಪ್ರಕಾರ, ನೋಂದಣಾಧಿಕಾರಿಗೆ ಕೆಲವೊಂದು ತಪ್ಪುಗಳು (ಕ್ಲರಿಕಲ್ ಎರರ್) ಆಗಿದ್ದರೆ ಅಂತಹ ಸಂದರ್ಭದಲ್ಲಿ ಅಧಿಕಾರಿಗೆ ತಪ್ಪಾಗಿರುವುದು ಮನವರಿಕೆ ಆದರೆ ಅವರು ಸೆಕ್ಷನ್ 15ರಲ್ಲಿ ಲಭ್ಯವಿರುವ ಅಧಿಕಾರ ಬಳಸಿ ತಪ್ಪುಗಳನ್ನು ಸರಿಪಡಿಸಬಹುದು ಎಂದು ಪೀಠ ತಿಳಿಸಿದೆ. ಅಲ್ಲದೆ, ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಬಿಬಿಎಂಪಿ ಅಧಿಕಾರಿಗಳು 20 ದಿನಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿ, ಹೊಸ ಮರಣ ಪ್ರಮಾಣ ಪತ್ರವನ್ನು ವಿತರಣೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಮರಣ ಪ್ರಮಾಣಪತ್ರ ವಿತರಣೆಗೆ ಪಾಲಿಕೆ ಅನುಸರಿಸುತ್ತಿರುವ ಕ್ರಮದ ಬಗ್ಗೆ ವಿವರಿಸಿ, ಒಂದು ವೇಳೆ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟರೆ ಆಗ ಅದನ್ನು ಆಧರಿಸಿ ಪಾಲಿಕೆ ಮರಣಪ್ರಮಾಣಪತ್ರ ವಿತರಿಸುತ್ತದೆ. ಆದರೆ, ಆಸ್ಪತ್ರೆ ದಾಖಲೆಗಳನ್ನು ಪರಿಶೀಲನೆ ಮಾಡುವ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು.

ಏನಿದು ಪ್ರಕರಣ?
ಅರ್ಜಿದಾರರ ಪತಿ ಎಸ್ ಪಿ ಲಕ್ಷ್ಮೀಕಾಂತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು 2022ರ ನ.22ರಂದು ಮೃತಪಟ್ಟಿದ್ದರು.

ಬಿಬಿಎಂಪಿ ವಿತರಿಸಿದ್ದ ಅವರ ಮರಣ ಪ್ರಮಾಣಪತ್ರದಲ್ಲಿ ಕೆಲವೊಂದು ದೋಷಗಳಿದ್ದವು. ಹಾಗಾಗಿ ಸಾಯಿಲಕ್ಷ್ಮಿ ಅವರು ಬಿಬಿಎಂಪಿಗೆ ಡೆತ್ ಸರ್ಟಿಫಿಕೇಟ್‌ನಲ್ಲಿನ ದೋಷಗಳನ್ನು ಸರಿಪಡಿಸುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಆದರೆ, 2023ರ ಜ.23ರಂದು ಹಿಂಬರಹ ನೀಡಿದ್ದ ಬಿಬಿಎಂಪಿ, ಆಸ್ಪತ್ರೆ ನಮೂದಿಸಿದ್ದ ವಿವರ ಆಧರಿಸಿ ಮರಣ ಪ್ರಮಾಣಪತ್ರ ವಿತರಿಸಲಾಗಿದೆ. ಈಗ ಅದರಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಲಾಗದು. ಹಾಗೆ ತಿದ್ದುಪಡಿ ಮಾಡಬೇಕಾದರೆ ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ ರೂ. 8,500 ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು: ವಾರಸುದಾರರಿಗೆ ಪರಿಹಾರ ವಿತರಣೆ- ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ: ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ, BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT