ರಾಜ್ಯ

ಹಾಸನ: ಕೃಷ್ಣೇಗೌಡ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ 

Srinivas Rao BV

ಹಾಸನ: ಗ್ರಾನೈಟ್ ಉದ್ಯಮಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಪ್ತ ಕೃಷ್ಣೇಗೌಡ ಹತ್ಯೆ ಪ್ರಕರಣವನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಸಿಐಡಿಗೆ ವಹಿಸಿದ್ದಾರೆ.

ತನಿಖಾ ವರದಿಗೆ ಸಂಬಂಧಪಟ್ಟಾ ಎಲ್ಲಾ ಕಡತಗಳನ್ನು, ಮುಂದಿನ ಹಂತದ ತನಿಖೆಗಾಗಿ ಸಿಐಡಿಗೆ ವರ್ಗಾವಣೆ ಮಾಡುವಂತೆ ಎಡಿಜಿಪಿ ಹಾಸನ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಹತ್ಯೆ ಪ್ರಕರಣದ ಸಂಬಂಧ ಈ ವರೆಗೂ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಮುಖ್ಯ ಆರೋಪಿ ಯೋಗಾನಂದ ಘಟನೆ ನಡೆದಾಗಿನಿಂದ ಕಣ್ಮರೆಯಾಗಿದ್ದಾನೆ. 

ಆಗಸ್ಟ್ 9 ರಂದು ಹಗಲಿನಲ್ಲಿ ಹಾಸನದ ಹೊರವಲಯದಲ್ಲಿರುವ ಗ್ರಾನೈಟ್ ಕಾರ್ಖಾನೆಯ ಮುಂದೆ ಹಣಕಾಸು ಮತ್ತು ವ್ಯವಹಾರದ ವಿಚಾರವಾಗಿ ಕೃಷ್ಣೇಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

SCROLL FOR NEXT