ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ದೇಣಿಗೆ ಕೇಳುತ್ತಿದ್ದ ಮಹಿಳೆ ವಿರುದ್ಧ ಪ್ರಕರಣ ದಾಖಲು

ಪ್ರಯಾಣಕ್ಕೆ ಹೊರತುಪಡಿಸಿ ನಮ್ಮ ಮೆಟ್ರೊ ರೈಲುಗಳನ್ನು ಇತರೆ ಕಾರಣಗಳಿಗೆ ದುರ್ಬಳಕೆಯಾಗುತ್ತಿರುವುದು ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಪರ್ಪಲ್ ಲೈನ್ ಮಾರ್ಗದ ನಮ್ಮ ಮೆಟ್ರೋ ರೈಲಿನಲ್ಲಿ ದೇಣಿಗೆ ಕೇಳುತ್ತಿದ್ದ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಪ್ರಯಾಣಕ್ಕೆ ಹೊರತುಪಡಿಸಿ ನಮ್ಮ ಮೆಟ್ರೊ ರೈಲುಗಳನ್ನು ಇತರೆ ಕಾರಣಗಳಿಗೆ ದುರ್ಬಳಕೆಯಾಗುತ್ತಿರುವುದು ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಪರ್ಪಲ್ ಲೈನ್ ಮಾರ್ಗದ ನಮ್ಮ ಮೆಟ್ರೋ ರೈಲಿನಲ್ಲಿ ದೇಣಿಗೆ ಕೇಳುತ್ತಿದ್ದ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರವಾಣಿ ನಗರದಲ್ಲಿರುವ ಸಮಾಜ ಸೇವೆ ಸಂಸ್ಥೆಯೊಂದರ ಹೆಸರು ಹೇಳಿಕೊಂಡು ನಮ್ಮ ಮೆಟ್ರೋ ರೈಲಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ದೇಣಿಗೆ ಕೇಳುವ ಮೂಲಕ ಇತರೆ ಪ್ರಯಾಣಿಕರಿಗೆ ಸಮಸ್ಯೆ ನೀಡಿದ್ದಕ್ಕಾಗಿ ಜ್ಞಾನ ಜ್ಯೋತಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಎಂದು ಗುರುತಿಸಿಕೊಂಡಿರುವ ಭಾಗ್ಯ ಎಂಬುವವರ ವಿರುದ್ಧ ಮೆಟ್ರೋ ಕಾಯಿದೆಯ ಸೆಕ್ಷನ್ 59 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ 500 ರೂಪಾಯಿ ದಂಡ ಕಟ್ಟಿದ್ದು, ಕ್ಷಮಾಪಣೆ ಪತ್ರವನ್ನು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

“ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಬೆಳಿಗ್ಗೆ 10.45ರ ಸುಮಾರಿಗೆ ಬೈಯಪ್ಪನಹಳ್ಳಿ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿ ನಗದು ಸಂಗ್ರಹಿಸಲು ದೇಣಿಗೆ ಪೆಟ್ಟಿಗೆಯೊಂದಿಗೆ ಮಹಿಳೆ ರೈಲು ಹತ್ತಿದ್ದಾರೆ. ಆನ್‌ಲೈನ್ ಪಾವತಿಗಳನ್ನು ಸ್ವೀಕರಿಸಲು ಕ್ಯೂಆರ್ ಕೋಡ್ ಕೂಡ ತಮ್ಮ ಬಳಿ ಇರಿಸಿಕೊಂಡಿದ್ದರು. ಈ ವೇಳೆ ಸಹಾಯಕ ಭದ್ರತಾ ಅಧಿಕಾರಿ ಮೈಲ್ವಾಗನನ್ ಅವರು ಇದನ್ನು ಗಮನಿಸಿದ್ದಾರೆ. ಈ ವೇಳೆ ಮಹಿಳೆಯನ್ನು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇಳಿಸಿ ನಿಯಂತ್ರಣ ಕೊಠಡಿಗೆ ಕರೆದೊಯ್ದಿದ್ದಾರೆ. ಬಳಿಕ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲು ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ದೇಣಿಕೆ ಸಂಗ್ರಹಿಸಲು ಗುರುವಾರ ನಮ್ಮ ಮೆಟ್ರೋ ರೈಲಿನ ಒಳಗೆ ಹೋಗಲಾಗಿತ್ತು. ಸುಮಾರು 20 ಮಂದಿ ದೇಣಿಗೆ ನೀಡಿದ್ದರು. ಬಹುತೇಕ ಮಂದಿ 10 ರೂ ದೇಣಿಗೆ ನೀಡಿದ್ದರು. ಶುಕ್ರವಾರ ಯಾವುದೇ ದೇಣಿಕೆ ಸಿಕ್ಕಿರಲಿಲ್ಲ. ಆದರೆ, ಅಧಿಕಾರಿಗಳು ನನ್ನನ್ನು ಕೆಳಗೆ ಇಳಿಸಿದ್ದರು ಎಂದು ಭಾಗ್ಯ ಅವರು ಹೇಳಿದ್ದಾರೆ.

ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೂ ದಂಡ:

‘ನಮ್ಮ ಮೆಟ್ರೊ’ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನಿಗೆ ಬಿಎಂಆರ್‌ಸಿಎಲ್‌ ಭದ್ರತಾ ಸಿಬ್ಬಂದಿ ₹500 ದಂಡ ವಿಧಿಸಿದ್ದಾರೆ. ಶ್ರವಣದೋಷವುಳ್ಳ ಕೊಪ್ಪಳದ 20 ವರ್ಷದ ಮಲ್ಲಿಕಾರ್ಜುನ್‌ ಯಶವಂತಪುರ ಮೆಟ್ರೋ ಹತ್ತಿ ಕೋಚ್‌ನಿಂದ ಕೋಚ್‌ಗೆ ಭೇಟಿ ನೀಡಿ ಭಿಕ್ಷೆ ಬೇಡಿದ್ದರು. ಈ ಘಟನೆ ಬಗ್ಗೆ ಮೆಟ್ರೊ ಸಿಬ್ಬಂದಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಮೆಟ್ರೊ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ್ದಕ್ಕಾಗಿ (ಸೆಕ್ಷನ್‌ 59) ₹ 500 ದಂಡ ವಿಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT