ಟಿ.ಎಂ. ವಿಜಯ ಭಾಸ್ಕರ್‌ 
ರಾಜ್ಯ

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರಿಂದ ಸರ್ಕಾರಕ್ಕೆ 6ನೇ ವರದಿ ಸಲ್ಲಿಕೆ

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ತಿಳಿದುಕೊಂಡು ಆಡಳಿತವನ್ನು ಸುಧಾರಣೆ ಮಾಡಲು ಬೇಕಿರುವ ಅಗತ್ಯತೆಗಳ ಬಗ್ಗೆ ಸರ್ಕಾರಕ್ಕೆ 6ನೇ ವರದಿಯನ್ನು ಶನಿವಾರ ಸಲ್ಲಿಸಿದೆ.

ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ತಿಳಿದುಕೊಂಡು ಆಡಳಿತವನ್ನು ಸುಧಾರಣೆ ಮಾಡಲು ಬೇಕಿರುವ ಅಗತ್ಯತೆಗಳ ಬಗ್ಗೆ ಸರ್ಕಾರಕ್ಕೆ 6ನೇ ವರದಿಯನ್ನು ಶನಿವಾರ ಸಲ್ಲಿಸಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ನೇತೃತ್ವದ ಎರಡನೇ ಆಡಳಿತ ಸುಧಾರಣಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಆರನೇ ವರದಿಯನ್ನು ಸಲ್ಲಿಸಿತು. ವರದಿಯಲ್ಲಿ ಹಲವು ಪ್ರಮುಖ ಇಲಾಖೆಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ನೀಡಲಾಗಿದೆ.

ಎಚ್​ಆರ್​ಎಂಎಸ್, ಖಜಾನೆ-2, ಇ-ಅಫೀಸ್, ಇ-ಪಿಎಆರ್ ಮತ್ತು ಇ-ಸೇವಾವಹಿಗಳನ್ನು ಅಳವಡಿಸಿಕೊಂಡಿರುವುದರಿಂದ ಲಿಪಿಕ ಕೆಲಸವು ಗಣನೀಯವಾಗಿ ತಗ್ಗಿದೆ. ಹೆಚ್ಚಿನ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಮುಂದುವರಿಸುವ ಅಗತ್ಯವಿಲ್ಲ. ಪ್ರತಿ ಇಲಾಖೆಯಲ್ಲಿ ಈ ಹುದ್ದೆಗಳನ್ನು ಪರಿಶೀಲಿಸಿ ಮರುವ್ಯವಸ್ಥೆ ಮಾಡುವುದು ಇಲ್ಲವೇ ತಾಂತ್ರಿಕ ಹುದ್ದೆಗಳನ್ನಾಗಿ ಪರಿವರ್ತಿಸುವಂತೆ ವರದಿಯಲ್ಲಿ ಶಿಫಾರಸು ಮಾಡಿದೆ.

1960 ಹಾಗೂ ನಂತರದ ದಶಕಗಳಲ್ಲಿ ಅನೇಕ ಕಾಯ್ದೆ, ನಿಯಮಗಳು ಜಾರಿಯಾಗಿವೆ. ಆದರೆ, ಶಿಕ್ಷೆ, ದಂಡ ಹಾಗೂ ಶಿಕ್ಷೆಯ ಉಪಬಂಧ ಪರಿಷ್ಕರಣೆಯಾಗಿಲ್ಲ. ಉದಾಹರಣೆಗೆ ಅರಣ್ಯ ಉತ್ಪನ್ನಗಳ ಸಾಗಣೆಗೆ ದಂಡ 500 ರೂ. ಗಳಿದ್ದು, ಇದನ್ನು 1964ರಲ್ಲಿ ನಿಗದಿಪಡಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಪ್ರಕರಣಗಳಲ್ಲಿ ದಂಡದ ಮೊತ್ತಕ್ಕಿಂತ ದಾವೆಯ ವೆಚ್ಚವೇ ಅನೇಕ ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದಂಡ, ಶಿಕ್ಷೆಯ ಉಪಬಂಧ ಪರಿಣಾಮಕಾರಿಯಾಗಿಸಲು ಹಣದುಬ್ಬರ ಸೂಚ್ಯಂಕದ ಹೆಚ್ಚಳವನ್ನು ಆಧರಿಸಿ ಪರಿಷ್ಕರಿಸುವ ಅಗತ್ಯವಿದೆ.

ಕಾನೂನು ಇಲಾಖೆ- ಇ-ಆಡಳಿತ ಇಲಾಖೆಯಿಂದ ಪ್ರತಿ ಇಲಾಖೆಗೆ ವಕೀಲರ ಶುಲ್ಕ ಪಾವತಿಸಲು ಏಕೀಕೃತ ಪೋರ್ಟಲ್ ಅಭಿವೃದ್ಧಿಪಡಿಸುವುದು. ಸರ್ಕಾರಿ ಮತ್ತು ಪ್ಯಾನಲ್ ವಕೀಲರು ತಮ್ಮ ವೃತ್ತಿಪರ ಶುಲ್ಕ ಬಿಲ್​ಗಳನ್ನು ನೇರವಾಗಿ ಆನ್​ಲೈನ್​ನಲ್ಲಿ ಸಲ್ಲಿಸಲು ಸಾಧ್ಯವಾಗಲಿದೆ.

ಇ-ಪ್ರೊಕ್ಯೂರ್​ವೆುಂಟ್ ಪೋರ್ಟಲ್​ನಲ್ಲಿ ಲಭ್ಯ ಎಲ್ಲ ದಾಖಲೆಗಳನ್ನು ಸಾರ್ವಜನಿಕ ಡೊಮೈನ್​ಗೆ ಅಪ್​ಲೋಡ್ ಮಾಡಬೇಕು. ಇದರಿಂದ ಆರ್​ಟಿಐ ಅರ್ಜಿದಾರರು ಅಗತ್ಯ ಶುಲ್ಕ ಪಾವತಿಸಿ, ಬೇಕಾದ ದಾಖಲೆಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು ಎಂದು ಆಯೋಗ ತಿಳಿಸಿದೆ.

ಆಯೋಗವು ಕಾಲ್ ಸೆಂಟರ್ ಮೂಲಕ 23 ಇಲಾಖೆಗಳ 138 ನಾಗರಿಕ ಸೇವೆಗಳ ಬಗ್ಗೆ ಕರೆ ಮಾಡಿದ 74,108 ಬಳಕೆದಾರರ ಪೈಕಿ 25,522 ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರು ವ್ಯಕ್ತಪಡಿಸಿದ ಪ್ರಮುಖ ಬೇಡಿಕೆಗಳೆಂದರೆ ಸಕಾಲದಲ್ಲಿ ಸೇವೆಗಳನ್ನು ಒದಗಿಸುವುದು. ಬಳಕೆದಾರರಿಗೆ ಅನುಕೂಲವಾಗುವಂತೆ ಮಾಡುವುದು. ಅರ್ಜಿದಾರರಿಗೆ ಮಾಹಿತಿ ಒದಗಿಸುವುದು. ಕಚೇರಿಗಳಲ್ಲಿ ಉತ್ತಮಗುಣಮಟ್ಟದ ಸಂವಹನ ಖಚಿತಪಡಿಸಿಕೊಳ್ಳುವುದು. ಬಳಕೆದಾರಸ್ನೇಹಿ ವೆಬ್​ಸೈಟ್ ಮತ್ತು ತಂತ್ರಜ್ಞಾನ. ಕಚೇರಿಗಳನ್ನು ದಲ್ಲಾಳಿ ಮುಕ್ತಗೊಳಿಸುವುದು.

ರಾಜ್ಯದ 74 ಸಕ್ಕರೆ ಕಾರ್ಖಾನೆಗಳ ಪೈಕಿ ಕೇವಲ 14 ಸಹಕಾರಿ, ಉಳಿದವು ಖಾಸಗಿ ಒಡೆತನದಲ್ಲಿವೆ. ಇದರಿಂದಾಗಿ ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಸಹಕಾರಿ ಅಧಿಕಾರಿಗಳ ಅಗತ್ಯವಿಲ್ಲ. ನಿರ್ದೇಶನಾಲಯ ದಲ್ಲಿರುವ ಸಹಕಾರಿ ಇಲಾಖೆಯ ಹುದ್ದೆಗಳನ್ನು ರದ್ದುಪಡಿಸಬಹುದು ಎಂದು ಆರನೇ ವರದಿಯಲ್ಲಿ ಆಯೋಗ ಶಿಫಾರಸು ಮಾಡಿದೆ.

ಆಯೋಗವು ಈಗಾಗಲೇ ಸರ್ಕಾರಕ್ಕೆ ಐದು ವರದಿಗಳನ್ನು ಸಲ್ಲಿಸಿದೆ. 23 ಇಲಾಖೆಗಳಿಗೆ ಸಂಬಂಧಿಸಿದ 3,630 ಶಿಫಾರಸುಗಳನ್ನು ಮಾಡಿದೆ. ಈ ಪೈಕಿ 66 ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದಿದ್ದರೆ, 13 ಒಪ್ಪಿಲ್ಲ. 284 ಕ್ರಮಕೈಗೊಳ್ಳುವ ಹಂತದಲ್ಲಿದ್ದರೆ, 90 ಶಿಫಾರಸುಗಳು ಪರಿಶೀಲನೆಯಲ್ಲಿವೆ. ಆರನೇ ವರದಿಯಲ್ಲಿ ಏಳು ಇಲಾಖೆಗಳಿಗೆ ಸಂಬಂಧಿಸಿದಂತೆ 882 ಶಿಫಾರಸುಗಳನ್ನು ಮಾಡಿದೆ.

ಇತರ ಪ್ರಮುಖ ಶಿಫಾರಸುಗಳು ಇಂತಿವೆ...

  • ಕಟ್ಟಡ ಅನುಮೋದನೆ, ಅಭಿವೃದ್ಧಿ, ರಸ್ತೆ ಅಗೆತ ಮತ್ತು ಸಾಮಗ್ರಿ ಶುಲ್ಕಗಳ ಒಟ್ಟಾರೆ ಮೊತ್ತದ ಬದಲಾಗಿ ಕಟ್ಟಡ ಅಂದಾಜು ವೆಚ್ಚ ಅಥವಾ ನಿವೇಶನದ ಮಾರ್ಗಸೂಚಿ ದರದ ಶೇಕಡಾವಾರು ನಿಗದಿಗೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ
  • ದೀರ್ಘಕಾಲದವರೆಗೆ ನಿವೇಶನ ಖಾಲಿಯಿಟ್ಟ ಮಾಲೀಕರಿಗೆ ದಂಡ ವಿಧಿಸುವುದು. ಗೃಹಮಂಡಳಿಯ ಖಾಲಿ ನಿವೇಶನ ಗಳ ಶುದ್ಧ ಕ್ರಯಪತ್ರ ನೋಂದಣಿಗೆ ನಿವೇಶದನ ಪ್ರಸ್ತುತ ಮಾರ್ಗಸೂಚಿ ದರದ ಶೇ.25 ದಂಡದ ಮೊತ್ತ ನಿಗದಿ.
  • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಹಂಚಿಕೆಯಾಗದೆ ಉಳಿದ 300 ವಿಶ್ವ ವರ್ಕ್​ಶೆಡ್​ಗಳು, ಆಸ್ತಿ ಹಕ್ಕುಗಳನ್ನು ವರ್ಗಾಯಿಸದೆ ಸಾರ್ವಜನಿಕ ಉದ್ದೇಶಿಗಳಿಗಾಗಿ ಬಳಸಲು ಗ್ರಾ.ಪಂ. ಮತ್ತು ಪುರಸಭೆಗಳಿಗೆ ಹಸ್ತಾಂತರ
  • ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಗಳಿಗೆ ಅವಧಿ ಮುಗಿದ ನಂತರವೂ ಕೈಗಾರಿಕೆಗಳನ್ನು ಸ್ಥಾಪಿಸದ ಕೆಐಎಡಿಬಿ ಮತ್ತು ಕೆಎಸ್​ಎಸ್​ಐಡಿಸಿ ಕೈಗಾರಿಕೆ ನಿವೇಶನ ಗುರುತಿಸುವ ಅಭಿಯಾನ ಕೈಗೆತ್ತಿಕೊಳ್ಳಲು ಸೂಚನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT