ರಾಜ್ಯ

ಸಂಡೂರಿನ ದೇವಾಲಯಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಯತ್ನ: ಗ್ರಾಮಸ್ಥರಿಂದ ಸಹಿ ಅಭಿಯಾನ

Sumana Upadhyaya

ಬಳ್ಳಾರಿ: ಗಣಿಗಾರಿಕೆ ಚಟುವಟಿಕೆಗಳಿಂದ ನಲುಗಿ ಹೋಗಿರುವ ಸ್ವಾಮಿಮಲೈ ಬೆಟ್ಟದ 1,200 ವರ್ಷಗಳಷ್ಟು ಹಳೆಯದಾದ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಿ ದೇವಸ್ಥಾನಗಳನ್ನು ಉಳಿಸಲು ಸಂಡೂರು ತಾಲೂಕಿನ ಗ್ರಾಮಸ್ಥರು ಸಹಿ ಅಭಿಯಾನ ಆರಂಭಿಸಿದ್ದಾರೆ. 

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯವನ್ನು ಯುನೆಸ್ಕೊ ಪಟ್ಟಿಗೆ ಒಳಪಡಿಸಲು ಗ್ರಾಮಸ್ಥರು ಜನಸಂಗ್ರಾಮ ಪರಿಷತ್ತಿನ ಸಮಾಜ ಪರಿವರ್ತನಾ ಸಾನುದಯ ಸಮಾಜಮುಖಿ ಸಹಯೋಗದಲ್ಲಿ ಅಭಿಯಾನವನ್ನು ಕೈಗೊಂಡಿದ್ದಾರೆ. 

ಕುಮಾರಸ್ವಾಮಿ ದೇವಸ್ಥಾನವನ್ನು ವಿಜಯನಗರ ಸಾಮ್ರಾಜ್ಯಕ್ಕಿಂತಲೂ ಮೊದಲು ನಿರ್ಮಿಸಲಾಯಿತು. ಕಳೆದ ವರ್ಷ, ದೇವಾಲಯದ ಬಳಿ ತೀವ್ರವಾದ ಗಣಿಗಾರಿಕೆ ಚಟುವಟಿಕೆಗಳಿಂದಾಗಿ ಅದರ ಒಂದು ಕಂಬವು ಕುಸಿದುಹೋಗಿದೆ. ಕೆಲವು ಗ್ರಾಮಸ್ಥರು ಗಣಿ ಕಂಪನಿ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ಈ ಕುರಿತು ಪರಿಶೀಲಿಸಲು ಪರಿಸರ ಮಂಡಳಿಯಿಂದ ಸಮಿತಿಯೊಂದನ್ನು ರಚಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಗ್ರಾಮಸ್ಥರ ತಂಡದ ಮುಖಂಡ ಶ್ರೀಶೈಲ್ ಆಲದಹಳ್ಳಿ, ಕಳೆದ ಎರಡು ದಿನಗಳಿಂದ ಸಂಡೂರಿನ ಸ್ಕಂದ ಜಾತ್ರೆ ನಡೆಯುತ್ತಿದ್ದು, ಜನರ ಬೆಂಬಲ ಬಳಸಿಕೊಂಡು ಕುಮಾರಸ್ವಾಮಿ ದೇವಸ್ಥಾನ ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಮೇಳದಲ್ಲಿ ಎರಡು ದಿನಗಳ ಸಹಿ ಅಭಿಯಾನ ನಡೆಸುತ್ತಿದ್ದೇವೆ. ದೇವಸ್ಥಾನದ ಬಳಿ ಗಣಿಗಾರಿಕೆ ನಡೆಸುವುದನ್ನು ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ, ಕೆಲವು ಗಣಿ ಕಂಪನಿಗಳು ನಿರ್ದೇಶನಗಳನ್ನು ಅನುಸರಿಸುತ್ತಿಲ್ಲ.

ಗಣಿಗಾರಿಕೆ ಸ್ಥಗಿತ: ದೇವಾಲಯವನ್ನು ಯುನೆಸ್ಕೋ ಸಂರಕ್ಷಿತ ತಾಣವೆಂದು ಘೋಷಿಸಿದ ನಂತರ ಯಾವುದೇ ಗಣಿಗಾರಿಕೆ ಅಥವಾ ಅರಣ್ಯೇತರ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು. ನಾವು ಯುನೆಸ್ಕೋ ದೇಶದ ಮುಖ್ಯ ಕಚೇರಿಗೆ ಪತ್ರಗಳನ್ನು ಕಳುಹಿಸಲು ಯೋಜಿಸಿದ್ದೇವೆ. ದೇವಸ್ಥಾನದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ಸಂರಕ್ಷಿತ ಅರಣ್ಯ ಎಂದು ತಕ್ಷಣವೇ ಘೋಷಿಸಲು ನಾವು ರಾಜ್ಯ ಸರ್ಕಾರವನ್ನು ಕೋರುತ್ತೇವೆ ಎಂದರು. 

ಸುಮಾರು 20,000 ಒಪ್ಪಂದ ಪತ್ರಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದಾರೆ. ಒಮ್ಮೆ ಸಹಿ ಹಾಕಿದ ನಂತರ, ಪ್ರತಿಗಳನ್ನು ಯುನೆಸ್ಕೋ ಕೇಂದ್ರ ಕಚೇರಿಗೆ ಮತ್ತು ಇನ್ನೊಂದನ್ನು ಕರ್ನಾಟಕ ಹೈಕೋರ್ಟ್‌ಗೆ ಕಳುಹಿಸಲಾಗುತ್ತದೆ. ಐತಿಹಾಸಿಕ ದೇವಾಲಯವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಏಕೈಕ ಧ್ಯೇಯವಾಗಿದೆ ಎಂದು ಅವರು ಹೇಳಿದರು.

SCROLL FOR NEXT