ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳೊಂದಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ 
ರಾಜ್ಯ

ರಾಕ್‌ಲೈನ್ ವೆಂಕಟೇಶ್ ಸೋದರನ ಮನೆಯಲ್ಲಿ ಕಳ್ಳತನ; 7 ನೇಪಾಳಿ ಪ್ರಜೆಗಳ ಬಂಧನ, 3 ಕೆಜಿ ಚಿನ್ನ ವಶ

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಕಳ್ಳತನವಾದ ಒಂದು ತಿಂಗಳ ನಂತರ, ಪೊಲೀಸರು ಏಳು ನೇಪಾಳಿಗರ ತಂಡವನ್ನು ಬಂಧಿಸಿದ್ದಾರೆ ಮತ್ತು ಬಂಧಿತರಿಂದ 3 ಕೆಜಿ ಚಿನ್ನ ಸೇರಿದಂತೆ 1.53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರು: ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಕಳ್ಳತನವಾದ ಒಂದು ತಿಂಗಳ ನಂತರ, ಪೊಲೀಸರು ಏಳು ನೇಪಾಳಿಗರ ತಂಡವನ್ನು ಬಂಧಿಸಿದ್ದಾರೆ ಮತ್ತು ಬಂಧಿತರಿಂದ 3 ಕೆಜಿ ಚಿನ್ನ ಸೇರಿದಂತೆ 1.53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತರನ್ನು ಉಪೇಂದ್ರ, ನಾರಾ ಬಹದ್ದೂರ್, ಖಕೇಂದ್ರ ಶಾಹಿ, ಕೋಮಲ್, ಸ್ವಸ್ತಿಕಾ, ಪಾರ್ವತಿ ಮತ್ತು ಶಾದಲಾ ಎಂದು ಗುರುತಿಸಲಾಗಿದೆ.

ಆರೋಪಿಗಳು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ನಿವಾಸದಿಂದ ಸುಮಾರು ಐದು ಕೆಜಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದರು. ಅಕ್ಟೋಬರ್ 21 ಮತ್ತು 29ರ ನಡುವೆ 58 ವರ್ಷದ ಟಿಎನ್ ಬ್ರಮರೇಶ್ ಅವರ ನಿವಾಸದಲ್ಲಿ ಅವರು ಮತ್ತು ಅವರ ಕುಟುಂಬ ಗ್ರೀಸ್‌ಗೆ ತೆರಳಿದ್ದಾಗ ಕಳ್ಳತನ ನಡೆದಿತ್ತು. ಪ್ರವಾಸದಿಂದ ಮರಳಿದ ಬಳಿಕ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು.

ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳು

ಚಿನ್ನಾಭರಣ ಸೇರಿ 6.1 ಲಕ್ಷ ರೂ. ನಗದನ್ನು ಆರೋಪಿಗಳು ಕಳವು ಮಾಡಿದ್ದರು. ಆರೋಪಿಗಳು ದರೋಡೆಗಾಗಿ ಅಲ್ಮೇರಾಗಳನ್ನು ಒಡೆದಿದ್ದಾರೆ.

'ಆರೋಪಿಗಳ ಪೈಕಿ ಒಬ್ಬಾತ ನಿವಾಸದ ಪಕ್ಕದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದನು. ಒಂದು ತಿಂಗಳಿನಿಂದ ನಿವಾಸದಲ್ಲಿನವರ ಚಲನವಲನಗಳನ್ನು ತಂಡವು ಗಮನಿಸಿತ್ತು. ಕುಟುಂಬಸ್ಥರು ಪ್ರವಾಸಕ್ಕೆ ತೆರಳಿದ ನಂತರ, ಕಳ್ಳತನ ಮಾಡಲಾಗಿತ್ತು. ಪ್ರಮುಖ ಆರೋಪಿ ಉಪೇಂದ್ರ ಇಂತದ್ದೇ ಕೃತ್ಯಗಳಲ್ಲಿ ನಿತ್ಯ ತೊಡಗಿಕೊಂಡಿದ್ದು, ಆತನ ವಿರುದ್ಧ ನಗರ ಠಾಣೆಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳಿವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಂಧಿತರ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಸಾರ್ವಜನಿಕರು ದೀರ್ಘಾವಧಿಯವರೆಗೆ ಹೊರಗೆ ಹೋಗುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT