ಸಾಂಕೇತಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿ 971 ಅಕ್ರಮ ಭೂ ಮಂಜೂರಾತಿ ರದ್ದುಗೊಳಿಸಿದ ಹಾಸನ ಜಿಲ್ಲಾಡಳಿತ

ಹೇಮಾವತಿ ಪುನರ್ವಸತಿ ಯೋಜನೆಯ ಮೂರು ದಶಕಗಳ ಬಹುಕೋಟಿ ರೂಪಾಯಿ ಭೂ ಹಗರಣ ಕೊನೆಗೂ ತಾರ್ಕಿಕ ಅಂತ್ಯ ಕಾಣುತ್ತಿದೆ. ಯೋಜನೆಯಡಿ ಪುನರ್ವಸತಿ ನೆಪದಲ್ಲಿ ಬೋಗಸ್ ಫಲಾನುಭವಿಗಳಿಗೆ ಹಂಚಲಾಗಿದ್ದ 971 ಅಕ್ರಮ ಭೂ ಮಂಜೂರಾತಿಯನ್ನು ಹಾಸನ ಜಿಲ್ಲಾಡಳಿತ ರದ್ದುಪಡಿಸಿದೆ.

ಹಾಸನ: ಹೇಮಾವತಿ ಪುನರ್ವಸತಿ ಯೋಜನೆಯ ಮೂರು ದಶಕಗಳ ಬಹುಕೋಟಿ ರೂಪಾಯಿ ಭೂ ಹಗರಣ ಕೊನೆಗೂ ತಾರ್ಕಿಕ ಅಂತ್ಯ ಕಾಣುತ್ತಿದೆ. ಯೋಜನೆಯಡಿ ಪುನರ್ವಸತಿ ನೆಪದಲ್ಲಿ ಬೋಗಸ್ ಫಲಾನುಭವಿಗಳಿಗೆ ಹಂಚಲಾಗಿದ್ದ 971 ಅಕ್ರಮ ಭೂ ಮಂಜೂರಾತಿಯನ್ನು ಹಾಸನ ಜಿಲ್ಲಾಡಳಿತ ರದ್ದುಪಡಿಸಿದೆ.

ಅಂದಿನ ಸಹಾಯಕ ಆಯುಕ್ತರಾದ ಕವಿತಾ ರಾಜಾರಾಂ, ಡಾ.ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನೊಳಗೊಂಡ ಸತ್ಯಶೋಧನಾ ಸಮಿತಿಯು ಹಗರಣದ ತನಿಖೆ ನಡೆಸಿ, ಭೂ ಮತ್ತು ದಾಖಲೆಗಳ ನಿರ್ದೇಶಕ ಮೊಹಮ್ಮದ್ ಮೊಹಿಸಿನ್ ಅವರ ನಿರ್ದೇಶನದ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವ ವರದಿಯನ್ನು ಸಲ್ಲಿಸಿದೆ. 

ವರದಿ ಆಧರಿಸಿ ಅಂದಿನ ಜಿಲ್ಲಾಧಿಕಾರಿ ಗಿರೀಶ್ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವಿವರವಾದ ವರದಿ ಸಲ್ಲಿಸಿದ್ದರು. 2005 ರಿಂದ 2019 ರ ನಡುವೆ ಸೇವೆ ಸಲ್ಲಿಸಿದ ನಾಲ್ವರು ಸಹಾಯಕ ಆಯುಕ್ತರು, 38 ತಹಶೀಲ್ದಾರ್‌ಗಳು, ನಾಲ್ವರು ವಿಶೇಷ ಭೂಸ್ವಾಧೀನ ಅಧಿಕಾರಿಗಳು, 21 ಉಪ ತಹಶೀಲ್ದಾರ್‌ಗಳು, 33 ಕಂದಾಯ ನಿರೀಕ್ಷಕರು ಮತ್ತು 26 ಪ್ರಥಮ ವಿಭಾಗದ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳಲ್ಲಿರುವ 210 ಕಂದಾಯ ನೌಕರರಿಗೆ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. 

ಅಧಿಕಾರಿಗಳು ಬೋಗಸ್ ಜಮೀನು ಮಾಲೀಕರು ಮತ್ತು ಮಧ್ಯವರ್ತಿಗಳಿಗೆ ಸಹಕರಿಸಿದ ನಂತರ ಜಮೀನು ಮಂಜೂರು ಮಾಡಿದ್ದಾರೆ ಎಂದು ಸತ್ಯಶೋಧನಾ ವರದಿಯಲ್ಲಿ ತಿಳಿಸಲಾಗಿದೆ. 2 ಸಾವಿರ ಎಕರೆ ಅರಣ್ಯ ಭೂಮಿ ಸೇರಿದಂತೆ 3 ಸಾವಿರ ಎಕರೆಗೂ ಹೆಚ್ಚು ಒತ್ತುವರಿಯನ್ನು ಕಂದಾಯ ಅಧಿಕಾರಿಗಳು ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೀಗ ನಕಲಿ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರಿಗೆ ಹರಸಾಹಸವಾಗಿದೆ. 

ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಜಿಲ್ಲಾಡಳಿತ ನಿರ್ಧರಿಸಿದ್ದು, ಬಹುಕಾಲದಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಹೇಳಿದ್ದಾರೆ.

ಇತ್ತೀಚೆಗೆ ಹಾಸನಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 

ಚಿಕ್ಕಮಗಳೂರು ಜಿಲ್ಲಾಡಳಿತ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಬೋಗಸ್ ದಾಖಲೆ ಆಧರಿಸಿ ಅಕ್ರಮವಾಗಿ ನೀಡಿದ್ದ 6 ಸಾವಿರ ಎಕರೆ ಜಮೀನು ಮಂಜೂರಾತಿ ರದ್ದುಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT