ಬಿಎಂಟಿಸಿ ಬಸ್‌ನಲ್ಲಿ ಎಸ್‌ಒಎಸ್ ಪ್ಯಾನಿಕ್ ಬಟನ್ ಪರಿಶೀಲಿಸುತ್ತಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ. 
ರಾಜ್ಯ

ಮಹಿಳಾ ಪ್ರಯಾಣಿಕರ ಸುರಕ್ಷತೆ, ಅಪಘಾತ ನಿಯಂತ್ರಣಕ್ಕೆ ಬಿಎಂಟಿಸಿ ಒತ್ತು: ಬಸ್‌ಗಳಲ್ಲಿ ಎಡಿಎಎಸ್‌ ತಂತ್ರಜ್ಞಾನ ಅಳವಡಿಕೆ!

ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗ ಅಪಘಾತ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಿರುವ  ಬಿಎಂಟಿಸಿ, ಬಸ್ಗಳಲ್ಲಿ ಎಡಿಎಎಸ್‌ (ಅಡ್ವಾನ್ಸ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ) ತಂತ್ರಜ್ಞಾನವನ್ನು ಅಳವಡಿಸಿದೆ.

ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗ ಅಪಘಾತ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಿರುವ  ಬಿಎಂಟಿಸಿ, ಬಸ್ಗಳಲ್ಲಿ ಎಡಿಎಎಸ್‌ (ಅಡ್ವಾನ್ಸ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ) ತಂತ್ರಜ್ಞಾನವನ್ನು ಅಳವಡಿಸಿದೆ.

ಸಾರಿಗೆ ಸಚಿವ ಆರ್ ರಾಮಲಿಂಗಾ ರೆಡ್ಡಿ ಮಾತನಾಡಿ, ಬಸ್‌ಗಳಲ್ಲಿ ಅಳವಡಿಸಲಾಗಿರುವ “ಮೊಬೈಲ್ 8 ಕನೆಕ್ಟ್” ಎಂದು ಕರೆಯಲ್ಪಡುವ ಈ ಸಾಧನವು ವಿಷನ್‌ ಸೆನ್ಸಾರ್‌ ಕ್ಯಾಮೆರಾ, ಡಿಎಂಎಸ್‌ (ಚಾಲಕರ ಮೇಲ್ವಿಚಾರಣಾ ವ್ಯವಸ್ಥೆ) ಕ್ಯಾಮೆರಾ, ಜಿಪಿಎಸ್‌ ಮತ್ತು ಐ ವಾಚ್‌ ತಂತ್ರಜ್ಞಾನವನ್ನು ಒಳಗೊಂಡಿದೆ. ಇವೆಲ್ಲವೂ ಬಸ್‌ನ ಮುಂಭಾಗದ ವಿಂಡ್‌ ಶೀಲ್ಡ್‌ ಗಾಜಿನಲ್ಲಿ ಜೋಡಿಸಲ್ಪಟ್ಟಿದ್ದು, ಒಂದಕ್ಕೊಂದು ಪರಸ್ಪರ ಸಂಪರ್ಕ ಹೊಂದಿವೆ ಎಂದು ಹೇಳಿದ್ದಾರೆ.

ವಿಷನ್‌ ಸೆನ್ಸಾರ್‌ ಕ್ಯಾಮೆರಾದ ಮೂಲಕ ಬಸ್‌ ಮುಂಬದಿಯಲ್ಲಿ ಚಲಿಸುವ ವಾಹನಗಳನ್ನು ಗುರುತಿಸಬಹುದಾಗಿದೆ. ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು, ವಾಹನ ಮುಂಭಾಗ ಆಕಸ್ಮಿಕವಾಗಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು, ಪಾದಚಾರಿಗಳು ಡಿಕ್ಕಿ ಹೊಡೆಯುವುದು ಹಾಗೂ ವೇಗ ಮಿತಿ ಎಚ್ಚರಿಕೆ ನೀಡಲು ನೆರವಾಗಲಿದೆ.

ಐ ವಾಚ್‌ ತಂತ್ರಜ್ಞಾನವು ಆಡಿಯೊ ಮತ್ತು ವಿಡಿಯೊ ತುಣುಕುಗಳನ್ನು ಸೆರೆ ಹಿಡಿದು ಎಚ್ಚರಿಕೆಯ ಸಂದೇಶವನ್ನು ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ಅಲ್ಲದೆ, ಚಾಲಕನಿಗೆ ನಾನಾ ರೀತಿಯ ಅಲಾರಾಂ, ಎಚ್ಚರಿಕೆ ಗಂಟೆಯ ಮೂಲಕ ಎಚ್ಚರಿಕೆ ನೀಡುತ್ತದೆ. ಈ ಸಾಧನವನ್ನು ಚಾಲಕನ ಮುಂಬದಿಯ ಬಲ ಭಾಗದಲ್ಲಿಅಳವಡಿಸಲಾಗಿದೆ ಎಂದು ತಿಳಿಸಿದರು.

ಇದಲ್ಲದೆ, ಪ್ಯಾನಿಕ್ ಬಟನ್'ನ್ನೂ ಕೂಡ ಅಳವಡಿಸಲಾಗುತ್ತಿದ್ದು, ನಿರ್ಭಯ ಯೋಜನೆ ಮತ್ತು ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ಬಿಎಂಟಿಸಿಯ 5,000 ಬಸ್‌ಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎಲ್ಲಾ ಡಿಪೋಗಳು ಕ್ರಮೇಣ ಈ ವ್ಯವಸ್ಥೆಯನ್ನು ಬಳಸಲು ಪ್ರಾರಂಭಿಸುತ್ತವೆ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಮಹಿಳಾ ಪ್ರಯಾಣಿಕರು ಯಾವುದೇ ತೊಂದರೆ ಅಥವಾ ಸಮಸ್ಯೆ ಎದುರಿಸಿದರೆ ಪ್ಯಾನಿಕ್ ಬಟನ್ ಮತ್ತು ಆಪ್ ಆಧಾರಿತ ಎಸ್‌ಒಎಸ್ ಬಟನ್ ಅನ್ನು ಒತ್ತಬಹುದು ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT