ಡಿಕೆ.ಶಿವಕುಮಾರ್ 
ರಾಜ್ಯ

ಭ್ರಷ್ಟಾಚಾರದ ಕೂಪವೆಂಬ ಕುಖ್ಯಾತಿಯನ್ನು ತೊಡೆದುಹಾಕಿ: ಬಿಡಿಎ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್

‘ಬ್ರೋಕರ್‌ಗಳ ದಂಧೆ, ಮಧ್ಯಸ್ಥರು, ಭ್ರಷ್ಟಾಚಾರದ ಕೂಪವೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ದೂಷಿಸಲಾಗುತ್ತಿದೆ. ಇದನ್ನು ಇಲ್ಲಿನ ಸಿಬ್ಬಂದಿ ತೊಡೆದುಹಾಕಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬುಧವಾರ ಹೇಳಿದರು.

ಬೆಂಗಳೂರು: ‘ಬ್ರೋಕರ್‌ಗಳ ದಂಧೆ, ಮಧ್ಯಸ್ಥರು, ಭ್ರಷ್ಟಾಚಾರದ ಕೂಪವೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ದೂಷಿಸಲಾಗುತ್ತಿದೆ. ಇದನ್ನು ಇಲ್ಲಿನ ಸಿಬ್ಬಂದಿ ತೊಡೆದುಹಾಕಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬುಧವಾರ ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕನ್ನಡ ರಾಜ್ಯೋತ್ಸವ ಸಮಿತಿಯ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿ, ನ್ಯಾಯ ಕೇಳಲು ಕಚೇರಿಗೆ ಬರುವ ಯಾವುದೇ ವ್ಯಕ್ತಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.

‘ನಾಗರಿಕರಿಗೆ ಬದುಕಿನಲ್ಲಿ ಒಂದು ಮನೆ ಕಟ್ಟಬೇಕೆಂಬ ಆಸೆ ಇರುತ್ತದೆ. ನಿವೇಶನ ಪಡೆಯಲು ಅಂತಹವರು ಬಿಡಿಎಗೆ ಬರುತ್ತಾರೆ. ಅವರೊಂದಿಗೆ ಸಮಾಧಾನದೊಂದಿಗೆ ಮಾತುಕತೆ ನಡೆಸಿ, ಕಾನೂನು ರೀತಿಯಲ್ಲಿ ಕೆಲಸ ಮಾಡಿಕೊಡಿ’ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರ ಕನಸು ಮನೆ. ಕೈಗೆಟುಕುವ ಬೆಲೆಯಲ್ಲಿ ಆಶ್ರಯ ನೀಡುವ ಸಂಸ್ಥೆ ಬಿಡಿಎ, ‘ಬಿಡಿಎಗೆ ಖಾಸಗಿ ಡೆವಲಪರ್ಸ್‌ಗಳು ಸ್ಪರ್ಧೆ ನೀಡುತ್ತಿವೆ. ಬಿಡಿಎ ಎಂದರೆ ಕಳಪೆ ಮಟ್ಟದ ಕೆಲಸ ಎಂಬ ಭಾವನೆ ಇದೆ. ಅದನ್ನು ನಿವಾರಿಸಿಕೊಂಡು, ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಬೇಕು. ಇದು ಒಂದೇ ದಿನ ಸಾಧ್ಯವಾಗುವುದಿಲ್ಲ. ಆದರೆ, ಅದನ್ನು ಅಳವಡಿಸಿಕೊಂಡು, ನಿಮಗಿರುವ ಅವಕಾಶದಲ್ಲಿ ಜನರ ಮನ ಗೆಲ್ಲಬೇಕು.

‘ಬಿಡಿಎ ಗೌರವ ಕಾಪಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನಿಮಗೆ ಯಾವುದೇ ರೀತಿಯ ಸಹಾಯವನ್ನು ನಾನು ಮತ್ತು ಅಧಿಕಾರಿಗಳು ನೀಡುತ್ತೇವೆ’ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!