ರಾಜ್ಯ

'ಕರ್ನಾಟಕಕ್ಕೆ ನೀಡಬೇಕಾದ ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡಿ': ಅಧಿಕಾರಿಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

Srinivasamurthy VN

ಬೆಂಗಳೂರು: ಕರ್ನಾಟಕಕ್ಕೆ ನೀಡಬೇಕಾದ ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 52ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆಯಲ್ಲಿ ರಾಜ್ಯಕ್ಕೆ ನೀಡಬೇಕಾದ 2,333 ಕೋಟಿ ರೂಪಾಯಿಗಳ ಜಿಎಸ್‌ಟಿ ಪರಿಹಾರವನ್ನು ಬಿಡುಗಡೆ ಮಾಡುವ ವಿಷಯವನ್ನು ಕರ್ನಾಟಕವು ಮುನ್ನೆಲೆಗೆ ತರಲು ಶನಿವಾರ ಯಶಸ್ವಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿದ್ದ ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆ, ನಿರ್ಮಲಾ ಅವರು ಜಿಎಸ್‌ಟಿ ಪರಿಹಾರದ ಬಾಕಿಯನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

“ನಮ್ಮ ಕೋರಿಕೆಯ ಮೇರೆಗೆ, ಲೇಬಲ್ ಮಾಡದ ರಾಗಿ ಮಿಶ್ರಣಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಲೇಬಲ್ ಮಾಡಿದ ರಾಗಿ ಮಿಶ್ರಣಗಳು 12 ರಿಂದ 18% ರ ಬದಲಿಗೆ 5% ಜಿಎಸ್‌ಟಿ ವಿಧಿಸಲಾಗಿದೆ ಎಂದು ಅವರು ಹೇಳಿದರು. ಅಂತೆಯೇ GST ಕೌನ್ಸಿಲ್ ಪುಡಿ ರೂಪದಲ್ಲಿ ರಾಗಿ ಹಿಟ್ಟಿನ ಆಹಾರ ತಯಾರಿಕೆಗೆ ಶೂನ್ಯ ದರವನ್ನು ಶಿಫಾರಸು ಮಾಡಿದೆ ಮತ್ತು ಸಡಿಲ ರೂಪದಲ್ಲಿ ಮಾರಾಟ ಮಾಡುವಾಗ ತೂಕದಲ್ಲಿ ಕನಿಷ್ಠ 70% ರಾಗಿ ಹೊಂದಿರಬೇಕು ಮತ್ತು ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ರೂಪದಲ್ಲಿ ಮಾರಾಟ ಮಾಡಿದರೆ 5% ಜಿಎಸ್ ಟಿ ಇರಲಿದೆ ಎಂದು ಹೇಳಿದರು.

ರಾಗಿ ಮೇಲಿನ ಜಿಎಸ್‌ಟಿ ವಿನಾಯಿತಿಯನ್ನು ರಾಜ್ಯ ಸರ್ಕಾರವು ಬಹಳ ಸಮಯದಿಂದ ಒತ್ತಾಯಿಸುತ್ತಿದೆ ಮತ್ತು ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪ್ರಧಾನವಾಗಿರುವ ರಾಗಿ ಬೆಳೆಗಾರರಿಗೆ ಸಹಾಯ ಮಾಡುವ ಕ್ರಮವನ್ನು ಕೌನ್ಸಿಲ್ ಅದನ್ನು ರೈತರಿಗೆ ಒಂದು ಪ್ರಗತಿ ಎಂದು ಪರಿಗಣಿಸಿದೆ. ಇನ್ನು ಪರಿಹಾರಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯನವರ ಸಲಹೆಯಂತೆ ಕೃಷ್ಣಬೈರೇ ಗೌಡ ಅವರು ರಾಜ್ಯದ ಪ್ರಕರಣವನ್ನು ಮಂಡಿಸಿದರು ಮತ್ತು ಸಿಎಜಿ ಆಡಿಟ್ ದೃಢೀಕರಿಸಿದರೂ ಬಾಕಿ ಪಾವತಿಸದ ಕಾರಣ ಹಣಕಾಸು ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಎಸ್‌ಟಿ ಕೌನ್ಸಿಲ್ ಸಭೆಗೂ ಮುನ್ನ ಸಚಿವರು ಬುಧವಾರ ನಡೆದ ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಾಜ್ಯದ ಬೇಡಿಕೆಗಳನ್ನು ಕಾರ್ಯಸೂಚಿಯಲ್ಲಿ ತರುವಂತೆ ಜಿಎಸ್‌ಟಿ ಕೌನ್ಸಿಲ್‌ಗೆ ಪತ್ರವನ್ನೂ ಬರೆದಿದ್ದರು ಎಂದು ತಿಳಿದುಬಂದಿದೆ.
 

SCROLL FOR NEXT