ಆರೋಪಿ ಬಂಧನ (ಸಾಂದರ್ಭಿಕ ಚಿತ್ರ) 
ರಾಜ್ಯ

ಸಾಮಾಜಿಕ ಜಾಲತಾಣಗಳಲ್ಲಿ ಲಿನ್ ಇನ್ ಗೆಳತಿಯ ಖಾಸಗಿ ಫೋಟೋ ಅಪ್ಲೋಡ್ ಮಾಡಿದ ವ್ಯಕ್ತಿ ಬಂಧನ

ಲಿವ್ ಇನ್ ಗೆಳತಿಯ ತಿರುಚಿದ ಅಶ್ಲೀಲ ಫೋಟೋಗಳನ್ನು ಹಲವು ಸಾಮಾಜಿಕ ಜಾಲತಣಾಗಳಲ್ಲಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಲಿವ್ ಇನ್ ಗೆಳತಿಯ ತಿರುಚಿದ ಅಶ್ಲೀಲ ಫೋಟೋಗಳನ್ನು ಹಲವು ಸಾಮಾಜಿಕ ಜಾಲತಣಾಗಳಲ್ಲಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸಂಜಯ್ ಕುಮಾರ್ (26)  24 ವರ್ಷದ ಯುವತಿಯ ಜೊತೆ ಕೆಲವು ಸಮಯದಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ.
 
ಇಬ್ಬರೂ ತಮಿಳುನಾಡಿನ ವೆಲ್ಲೂರಿನ ಮೂಲದವರಾಗಿದ್ದು, 10 ನೇ ತರಗತಿಯಿಂದಲೂ ಪರಸ್ಪರ ಪರಿಚಯದವರಾಗಿದ್ದಾರೆ. ಈ ಜೋಡಿ ವಿವಾಹವಾಗಲು ಯೋಜಿಸುತ್ತಿದ್ದರು. ತನ್ನ ಗೆಳತಿಯ, ತಿರುಚಲಾದ ಅಶ್ಲೀಲ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದ ಕಾಮೆಂಟ್ ಗಳನ್ನು ನೋಡಿ ಆತ ವಿಕೃತ ಆನಂದ ಪಡೆಯುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಅರಿಯದ ಯುವತಿ ತನ್ನ ಗೆಳೆಯ ಸಂಜಯ್ ಕುಮಾರ್ ಜೊತೆಗೆ ತೆರಳಿ, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ತಿರುಚಲಾದ, ಖಾಸಗಿ ಫೋಟೋಗಳನ್ನು ಯಾರೋ ಅಪ್ಲೋಡ್ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. 

ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿರುವ ಫೋಟೋಗಳನ್ನು ತೆಗೆದು ಹಾಕುವಂತೆ ಹಾಗೂ ಯಾವ ಖಾತೆಯಿಂದ ಅಪ್ಲೋಡ್ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದರು

ತನಿಖೆಯಲ್ಲಿ ಯುವತಿಯ ಗೆಳೆಯನೇ ಈ ಫೋಟೋಗಳನ್ನು ಅಪ್ಲೋಡ್ ಮಾಡಿರುವ ಸತ್ಯ ಬಹಿರಂಗವಾಗಿದ್ದು, ಆತ ಗೆಳತಿಯದ್ದಷ್ಟೇ ಅಲ್ಲದೇ ಸ್ನೇಹಿತರದ್ದು ಹಾಗೂ ಸಂಬಂಧಿಕರ ಫೋಟೋಗಳನ್ನೂ ತಿರುಚಿ ಇದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?