ರಾಜ್ಯ

ದರೋಡೆ ನಾಟಕ: 1.2 ಕೆಜಿ ಚಿನ್ನ ಕದ್ದಿದ್ದ ಚಿನ್ನದಂಗಡಿ ನೌಕರನ ಬಂಧನ

Manjula VN

ಬೆಂಗಳೂರು: 1.2 ಕೆಜಿ ಚಿನ್ನಾಭರಣ ಕದ್ದು, ದರೋಡೆ ಕಥೆ ಹೆಣೆದಿದ್ದ ಚಿನ್ನದಂಗಡಿ ನೌಕರನನ್ನು ಹಲಸೂರು ಗೇಟ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ರಾಜಸ್ಥಾನ ಮೂಲದ ಲಾಲ್ ಸಿಂಗ್ (23) ಮತ್ತು ಆತನ ಸಹಚರ ರಾಜ್ ಪಾಲ್ (24) ಬಂಧಿತರು. ನಗರ್ತಪೇಟೆ ಜ್ಯುವೆಲ್ಲರಿ ಅಂಗಡಿ ಮಾಲೀಕ ಅಭಿಷೇಕ್ ಜೈನ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ಅಭಿಷೇಕ್ ಜೈನ್ ಬಳಿ ಲಾಲ್ ಸಿಂಗ್ 8 ತಿಂಗಳ ಹಿಂದೆ ಸೇಲ್ಸ್ ಮನ್ ಕೆಲಸಕ್ಕೆ ಸೇರಿಕೊಂಡಿದ್ದ. ಕಡಿಮೆ ಅವಧಿಯಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದ. ಹೀಗಾಗಿ ಮಾಲೀಕ ಅಭಿಷೇಕ್ ಜೈನ್ ಆಂದ್ರಪ್ರದೇಶದ ನೆಲ್ಲೂರಿನ ಮುಖೇಶ್ ಮತ್ತು ಶುಭಂ ಗೋಲ್ಡ್ ಜ್ಯುವೆಲ್ಲರಿ ಅಂಗಡಿಗೆ ಡೆಲಿವರಿ ನೀಡುವತೆ ಲಾಲ್ ಸಿಂಗ್'ಗೆ ಸೆ.28ರಂದು 1.2 ಗ್ರಾಂ ಚಿನ್ನಾಭರಣ ನೀಡಿದ್ದರು.

ನೆಲ್ಲೂರಿನ ಕಾಳಹಸ್ತಿಗೆ ತೆರಳಿದ ಆರೋಪಿ ನಾಲ್ ಸಿಂಗ್, ಮಾಲೀಕ ಅಭಿಷೇಕ್ ಜೈನ್ ಗೆ ಕರೆ ಮಾಡಿ, ಯಾರೋ ದುಷ್ಕರ್ಮಿಗಳು ನನ್ನ ಹಣೆಗೆ ಗನ್ ಇರಿಸಿ ಕೈಗಳಿಗೆ ಚಾಕುವಿನಿಂದ ಹಲ್ಲೆಗೈದು ಚಿನ್ನಾಭರಮವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು ಎಂದು ಹೇಳಿದ್ದಾನೆ. ಬಳಿಕ ಲಾಲ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅನುಮಾನಗೊಂಡ ಪೊಲೀಸರು ಲಾಲ್ ಸಿಂಗ್ ನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವ ವಿಚಾರವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.

SCROLL FOR NEXT