ರಾಜ್ಯ

ಖಾತೆಯಲ್ಲಿ ಹಣ ಕಡಿತಗೊಳ್ಳದಂತೆ ಎಟಿಎಂನಿಂದ ಹಣ ಡ್ರಾ: ಖತರ್ನಾಕ್ ಕಳ್ಳರ ತಂತ್ರಕ್ಕೆ ಬ್ಯಾಂಕ್ ಅಧಿಕಾರಿಗಳೇ ದಿಗ್ಭ್ರಾಂತ!

Manjula VN

ಬೆಂಗಳೂರು: ಖಾತೆಯಲ್ಲಿ ಹಣ ಕಡಿತಗೊಳ್ಳದಂತೆ ಕಳ್ಳರು ಎಟಿಎಂನಿಂದ ಹಣ ಡ್ರಾ ಮಾಡಿದ್ದು, ಇವರ ತಂತ್ರಕ್ಕೆ ಬ್ಯಾಂಕ್ ಅಧಿಕಾರಿಗಳೇ ದಿಗ್ಭ್ರಾಂತರಾದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ.

ಟಿ ದಾಸರಹಳ್ಳಿಯ ತುಮಕೂರು ಮುಖ್ಯರಸ್ತೆಯಲ್ಲಿರುವ ಸಹಕಾರಿ ಬ್ಯಾಂಕ್ ಎಟಿಎನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಎಟಿಎಂನಲ್ಲಿ ಹಣ ಡ್ರಾ ಮಾಡಲು ಆರೋಪಿಗಳು ಎಲ್ಲಾ ಕ್ರಮಗಳನ್ನು ಅನುಸರಿಸಿದ್ದು, ನೈಜ ಸಮಯದಲ್ಲಿ ಎಟಿಎಂ ಯಂತ್ರದ ವೈರ್ ಗಳನ್ನು ಅನ್ ಪ್ಲಗ್ ಮಾಡಿದ್ದಾರೆ. ಇದರಿಂದ ಬ್ಯಾಂಕ್ ಖಾತೆಯಲ್ಲಿ ಹಣ ಕಡಿತಗೊಳ್ಳದೆ, ಎಟಿಎಂನಲ್ಲಿದ್ದ ಹಣ ಮಾತ್ರ ಹೊರ ಬಂದಿದೆ.

ಹಣವು ವಾಲ್ಟ್‌ನಿಂದ ಡಿಸ್ಪೆನ್ಸರ್‌ಗೆ ಉರುಳಲು ಪ್ರಾರಂಭಿಸಿದಾಗ ಎಟಿಎಂ ಯಂತ್ರದ ವೈರ್‌ಗಳನ್ನು ಅನ್‌ಪ್ಲಗ್ ಮಾಡಲಾಗಿದೆ.

ಅಕ್ಟೋಬರ್ 4 ರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಅಕ್ಟೋಬರ್ 12 ರಂದು ಮ್ಯಾನೇಜರ್ ದೂರು ದಾಖಲಿಸಿದ್ದಾರೆ.

ಎಟಿಎಂನ ಭದ್ರತಾ ಸಿಬ್ಬಂದಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ವಿಡಿಯೋ ಎಟಿಎಂ ಕಿಯೋಸ್ಕ್ ನ ಸಿಸಿಟಿವಿಯಲ್ಲಿ  ಸೆರೆಯಾಗಿದೆ. ಬಾಗಲಗುಂಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಈ ರೀತಿ ಹಣ ಡ್ರಾ ಮಾಡಿರುವುದು ಇದು ಮೊದಲೇನಲ್ಲ. ಫೆಬ್ರವರಿಯಲ್ಲಿಯೂ ಇದೇ ರೀತಿ ಹಣ ಡ್ರಾ ಮಾಡಲಾಗಿದೆ. ಇತರ ಹಿಂದೆ ತಾಂತ್ರಿಕವಾಗಿ ಯಾರೋ ಇದ್ದಾರೆ. ಆರೋಪಿಗಳು ಇದೇ ರೀತಿ ಎರಡು ಬಾರಿ ವಹಿವಾಟು ನಡೆಸಿದ್ದಾರೆ. ಕಳೆದ ಬಾರಿ 19,000 ರೂ. ಡ್ರಾ ಮಾಡಿದ್ದಾರೆ. ಖಾಸಗಿ ಎಂಎನ್‌ಸಿ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿದ್ದಾರೆ.

ಎಟಿಎಂ ಯಂತ್ರಗಳನ್ನು ಅಳವಡಿಸುವವರಿಗೆ ಅಥವಾ ರಿಪೇರಿ ಮಾಡುವವರಿಗೆ ಇದರ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರುವುದಿಲ್ಲ. ಯಂತ್ರದ ಪ್ರೋಗ್ರಾಮಿಂಗ್ ತಿಳಿದಿರುವವರಿಗೆ ಈ ಬಗ್ಗೆ ತಿಳಿದಿರುತ್ತದೆ.

ರೋಲರ್ ಕಾರ್ಯವಿಧಾನದ ಮೂಲಕ ವಿತರಕಕ್ಕೆ ನಗದು ಚಲಿಸಿದಾಗ ವೈಯರ್'ನ್ನು ಅನ್ ಪ್ಲಗ್ ಮಾಡಲಾಗಿದೆ. ಇದರ ಬಗ್ಗೆ ಅವರಿಗೆ ನಿಖರವಾಗಿ ತಿಳಿದಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕರು ಹೇಳಿದ್ದಾರೆ.

ಯಾವ ಸಮಯದಲ್ಲಿ ತಂತಿಯನ್ನು ಅನ್‌ಪ್ಲಗ್ ಮಾಡಬೇಕೆಂದು ಆರೋಪಿಗೆ ನಿಖರವಾಗಿ ತಿಳಿದಿದೆ, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT