ವಿಜಯನಗರ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಬೀಗ ಹಾಕಲಾಗಿದ್ದು, ಜನರು ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗಿದ್ದಾರೆ. 
ರಾಜ್ಯ

ವಿಜಯನಗರ ಜಿಲ್ಲೆಯಲ್ಲಿ ತೀವ್ರ ಬರಗಾಲ: ಕೆಲಸ ಹುಡುಕಿಕೊಂಡು ಬೇರೆಡೆಗೆ ತಾಂಡಾ ನಿವಾಸಿಗಳ ವಲಸೆ!

ವಿಜಯನಗರ ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಬರಗಾಲ ಇಲ್ಲಿನ ತಾಂಡಾ ನಿವಾಸಿಗಳು ಉದ್ಯೋಗ ಹುಡುಕಿಕೊಂಡು ಬೇರೆ ನಗರಗಳಿಗೆ ಒತ್ತಾಯಪೂರ್ವಕವಾಗಿ ವಲಸೆ ಹೋಗುವಂತೆ ಮಾಡಿದೆ. 

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಬರಗಾಲ ಇಲ್ಲಿನ ತಾಂಡಾ ನಿವಾಸಿಗಳು ಉದ್ಯೋಗ ಹುಡುಕಿಕೊಂಡು ಬೇರೆ ನಗರಗಳಿಗೆ ಒತ್ತಾಯಪೂರ್ವಕವಾಗಿ ವಲಸೆ ಹೋಗುವಂತೆ ಮಾಡಿದೆ. 

ಇಲ್ಲಿನ ತಾಂಡಾ ಸಮುದಾಯದ ಹಲವರ ಗುಡಿಸಲುಗಳ ಬಾಗಿಲು ಕೀಲಿಹಾಕಿದ್ದು ಇಲ್ಲಿನ ಗ್ರಾಮಸ್ಥರು ಕೆಲಸ ಹುಡುಕಿಕೊಂಡು ಉತ್ತಮ ಪ್ರದೇಶಗಳು, ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅಧಿಕಾರಕ್ಕೆ ಬರುವ ಸರ್ಕಾರಗಳು ತಾಂಡಾ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಪ್ರತಿಬಾರಿ ಭರವಸೆ ನೀಡಿದರೂ ವಲಸೆ ಹೋಗುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.

ಸಾಮಾನ್ಯವಾಗಿ, ತಾಂಡಾಗಳಲ್ಲಿ ವಾಸಿಸುವ ಲಂಬಾಣಿ ಸಮುದಾಯದ ಜನರು ವಿವಿಧ ಕಾರಣಗಳಿಗಾಗಿ ಇತರ ನಗರಗಳಿಗೆ ವಲಸೆ ಹೋಗುತ್ತಾರೆ. ಕಳೆದ ವರ್ಷ ವಿಜಯನಗರ ಮೂಲದ ಒಂದೇ ಕುಟುಂಬದ ನಾಲ್ವರು ಮಕ್ಕಳು ಉದ್ಯೋಗ ಅರಸಿ ಮಂಡ್ಯಕ್ಕೆ ವಲಸೆ ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದರು. ಅನಾವೃಷ್ಟಿ ಮತ್ತು ಅತಿವೃಷ್ಟಿಯಂತಹ ಸಂದರ್ಭಗಳಲ್ಲಿ, ಸಮುದಾಯದ ಜನರು ಉದ್ಯೋಗವನ್ನು ಹುಡುಕಿಕೊಂಡು ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಹಾರಾಷ್ಟ್ರ ಮತ್ತು ಗೋವಾದಂತಹ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಸ್ಥಳೀಯ ಉದ್ಯೋಗ ಸೃಷ್ಟಿಗೆ ಸರಕಾರ ಒತ್ತು ನೀಡಬೇಕು ಎಂದು ಇಲ್ಲಿನವರು ಮನವಿ ಮಾಡುತ್ತಾರೆ. 

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರದ ಶಾಸಕ ಕೃಷ್ಣಾನಾಯ್ಕ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಮುದಾಯದಲ್ಲಿ ವಲಸೆ ಪ್ರಮುಖ ಸಮಸ್ಯೆಯಾಗಿದೆ. “ಸಾಮಾನ್ಯವಾಗಿ ನಮ್ಮ ಸಮುದಾಯದಲ್ಲಿ, ಕೆಲವು ಜನರು ಕೃಷಿ ಭೂಮಿಯನ್ನು ಹೊಂದಿದ್ದಾರೆ. ಅನೇಕರು ಇತರ ಜನರ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಮೂಲಕ ದೈನಂದಿನ ಕೂಲಿಯನ್ನು ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಜೋಳ ಪ್ರಮುಖ ಬೆಳೆಯಾಗಿದ್ದು, ಈ ವರ್ಷ ಅತಿವೃಷ್ಟಿಯಿಂದಾಗಿ ಇಳುವರಿ ಹಾಳಾಗಿದೆ. ಹಾಳಾದ ಮೆಕ್ಕೆಜೋಳ ಹಾಗೂ ಇತರೆ ಬೆಳೆಗೆ ಅರ್ಧದಷ್ಟು ದರವನ್ನಾದರೂ ನೀಡುವಂತೆ ಸರಕಾರವನ್ನು ಕೋರುತ್ತೇನೆ. ಅಲ್ಲದೆ, ತಾಂಡಾ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಿಸುವಂತೆ ಸರಕಾರವನ್ನು ಕೋರುತ್ತೇನೆ ಎಂದರು.

ಬಂಜಾರ ಸಮುದಾಯದ ಮುಖಂಡ ಮತ್ತು ಮಾನವ ಹಕ್ಕುಗಳ ಪೀಪಲ್ ಕೌನ್ಸಿಲ್‌ ಕಾನೂನು ಸಲಹೆಗಾರ ಅನಿಲ್ ವಕ್ಡೋತ್, ರಾಜ್ಯದಲ್ಲಿ 3,384 ತಾಂಡಾ ಜನರಿದ್ದು, 93 ಮಂದಿ ವಿಜಯನಗರ ಜಿಲ್ಲೆಯಲ್ಲಿದ್ದಾರೆ. ಬಂಜಾರ ಅಥವಾ ಲಂಬಾಣಿ ಸಮುದಾಯದ ಬಹುತೇಕ ಜನರು ಬೇರೆಡೆಗೆ ವಲಸೆ ಹೋಗಿದ್ದಾರೆ.

ಇಲ್ಲಿಯವರೆಗೂ ಕಂದಾಯ ಭೂಮಿ ಹಕ್ಕು ಪತ್ರವನ್ನು ಸಮುದಾಯಗಳು ಹೊಂದಿಲ್ಲ. ಅಧಿಕಾರಕ್ಕೆ ಬರುವ ವೇಳೆ ಸರ್ಕಾರಗಳು ಭರವಸೆ ನೀಡುತ್ತವೆ. ಆದರೆ ಸ್ಥಳೀಯ ಉದ್ಯೋಗದ ಮೇಲೆ ಕೇಂದ್ರೀಕರಿಸದೆ, ವಲಸೆಯನ್ನು ತಡೆಯುವುದು ಕಷ್ಟ ಎಂದು ಅವರು ಹೇಳಿದರು. ಎಷ್ಟು ಜನ ವಲಸೆ ಹೋಗಿದ್ದಾರೆ ಎಂಬ ಸಮೀಕ್ಷೆಯನ್ನು ಸರ್ಕಾರ ಮೊದಲು ಮಾಡಬೇಕು. ಭರವಸೆಗಳ ಬದಲಿಗೆ, ನಾವು ಶಾಶ್ವತ ಪರಿಹಾರವನ್ನು ಬಯಸುತ್ತೇವೆ ಎಂದರು.

ಗ್ರಾಮಸ್ಥ ಮಾಲತೇಶ್ ಲಮಾಣಿ, ನಮ್ಮ ಇಡೀ ತಾಂಡಾದ ಜನರು ಈಗಾಗಲೇ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಈ ವರ್ಷ ನಮ್ಮ ಗ್ರಾಮ ತೀವ್ರ ಸಂಕಷ್ಟ ಎದುರಿಸುತ್ತಿದೆ. ದಸರಾ ನಂತರ ನನ್ನ ಇಡೀ ಕುಟುಂಬ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಲಿದೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ; ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

IPL 2026 Qualifier 1: ಐಪಿಎಲ್ ಇತಿಹಾಸದ ಅತ್ಯಪರೂಪದ ದಾಖಲೆ ಬರೆದ Virat Kohli; ಡಬಲ್ ಆಘಾತ ಕೊಟ್ಟ Holder

ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆ; ಜೂನ್ 18 ರಂದು ಮತದಾನ

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು ಮೆಟ್ರೋ ಸಂಚಾರ ವ್ಯತ್ಯಯ!

SCROLL FOR NEXT