ರಾಜ್ಯ

ಮೈಸೂರು ದಸರಾ ಗೋಲ್ಡ್ ಕಾರ್ಡ್ 2023: ಬಿಡುಗಡೆಯಾದ 20 ನಿಮಿಷಗಳಲ್ಲೇ ಸೋಲ್ಡ್‌ ಔಟ್!

Manjula VN

ಮೈಸೂರು: ಮೈಸೂರು ದಸರಾ 2023ರ ಗೋಲ್ಡ್ ಕಾರ್ಡ್ ಬುಧವಾರ ಬಿಡುಗಡೆಯಾಗಿದ್ದು, ಬಿಡುಗಡೆಯಾದ 20 ನಿಮಿಷಗಳಲ್ಲೇ ಸೋಲ್ಡ್‌ ಔಟ್ ಆಗಿ ಹಲವರ ಅಚ್ಚರಿಗೆ ಕಾರಣವಾಗಿದೆ. ಇದರಿಂದ ಗೋಲ್ಡ್ ಕಾರ್ಡ್‌ ಟಿಕೆಟ್‌ ಖರೀದಿಯ ನಿರೀಕ್ಷೆಯಲ್ಲಿದ್ದ ಬಹುತೇಕರಿಗೆ ನಿರಾಸೆಯಾಗಿದೆ.

ಮೈಸೂರು ದಸರಾ 2023ರ ಆನ್‌ಲೈನ್ ಪ್ಲಾಟ್‌ಫಾರಂನಲ್ಲೂ ಗೋಲ್ಡ್ ಕಾರ್ಡ್ ಸೋಲ್ಡ್‌ಔಟ್ ಆಗಿರುವ ಸಂದೇಶವಿದೆ.

ಈ ಮೊದಲೇ ಘೋಷಿಸಿದ ಪ್ರಕಾರ ಬುಧವಾರ ಬೆಳಿಗ್ಗೆ 10 ಗಂಟೆಯ ಬದಲು 11 ಗಂಟೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಟಿಕೆಟ್‌ ಮಾರಾಟ ವಿಂಡೋ ಓಪನ್ ಆದ 20 ನಿಮಿಷದಲ್ಲಿ ಎಲ್ಲಾ ಗೋಲ್ಡ್ ಕಾರ್ಟಡ್ ಮತ್ತು ಟಿಕೆಟ್‌ಗಳು ಖರೀದಿಯಾಗಿವೆ.

ಜಂಬೂಸವಾರಿ ವೀಕ್ಷಣೆಯ ಗೋಲ್ಡ್ ಕಾರ್ಡ್‌ಗೆ 6,000 ರೂ., ಅರಮನೆ ಆವರಣದಲ್ಲಿನ ಟಿಕೆಟ್‌ಗಳಿಗೆ ಎ ಕೆಟಗರಿಗೆ 3,000 ರೂ, ಅರಮನೆ ಆವರಣದಲ್ಲಿನ B ಕೆಟಗರಿ ಟಿಕೆಟ್‌ಗೆ 2,000 ರೂ, ಪಂಜಿನ ಕವಾಯತು ವೀಕ್ಷಣೆಗೆ- 500 ರೂ ಹಣ ನಿಗದಿ ಮಾಡಲಾಗಿತ್ತು.

ಹಣ ದುಬಾರಿಯಾದರೂ ಕೂಡ ಕೇವಲ 20 ನಿಮಿಷದಲ್ಲಿ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿರುವುದು ಅಚ್ಚರಿ ಮೂಡಿಸಿದೆ.

ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ​​ಸಂಸ್ಥಾಪಕ ಬಿ ಎಸ್ ಪ್ರಶಾಂತ್ ಮಾತನಾಡಿ, ದಸರಾ ಸಮಿತಿಯು ಕನಿಷ್ಠ 2,500 ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡಿದೆ. ದೇಶಾದ್ಯಂತ ಹಲವರು ಗೋಲ್ಡ್ ಕಾರ್ಡ್ ಕುರಿತು ವಿಚಾರಿಸುತ್ತಿದ್ದು, ಇನ್ನೂ ಸಾವಿರ ಕಾರ್ಡ್ ಗಳನ್ನು ವಿತರಿಸಬೇಕೆಂದು ಒತ್ತಾಯಿಸಿದ್ದಾರೆ.

ಟ್ರಾವೆಲ್ ಏಜೆಂಟ್‌ಗಳ ಕಚೇರಿಗಳಿಗೆ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿದ್ದುಸ ಟಿಕೆಟ್‌ಗಳ ಕುರಿತು ವಿಚಾರಿಸುತ್ತಿದ್ದಾರೆ. ಸರ್ಕಾರ ಮತ್ತಷ್ಟು ಕಾರ್ಡ್ ಗಳನ್ನು ಮಾರಾಟ ಮಾಡಬೇಕು. ಇದರಿಂದ ದೇಶಾದ್ಯಂತದ ಹೆಚ್ಚಿನ ವಿದೇಶಿ ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ಆಕರ್ಷಿಸಬಹುದು ಎಂದು ತಿಳಿಸಿದ್ದಾರೆ.

ವಿಐಪಿಗಳಿಗೆ ಗೋಲ್ಡ್ ಕಾರ್ಡ್‌ಗಳನ್ನು ತಡೆಹಿಡಿಯುವುದನ್ನು ನಾವು ವಿರೋಧಿಸುವುದಿಲ್ಲ. ಇನ್ನಾದರೂ ಅಧಿಕಾರಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಡ್ ಗಳ ಸಂಖ್ಯೆ ಹೆಚ್ಚಿಸಬೇಕು ಟೆಕ್ಕಿ ಮುಕುಂದ್ ಅವರು ಹೇಳಿದ್ದಾರೆ.

ಪ್ರತಿವರ್ಷ ದಸರಾ ಜಂಬೂ ಸವಾರಿ ವೀಕ್ಷಣೆಗೆ ರಾಜ್ಯ, ದೇಶದ ಬೇರೆ ಬೇರೆ ಭಾಗಗಳಿಂದಲೂ ಸಹ ಪ್ರವಾಸಿಗರು ದಸರಾ ಜಂಬೂಸವಾರಿ ನೋಡಲು ಆಗಮಿಸುತ್ತಾರೆ. ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅಭಿಮನ್ಯು ಸಾಥ್ ನೀಡುವ ದಸರಾ ಗಜಪಡೆಯ ಆನೆಗಳು, ಸ್ತಬ್ದಚಿತ್ರಗಳು ಕಲಾತಂಡಗಳ ಪ್ರದರ್ಶನ ಎಲ್ಲವನ್ನೂ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಆಗಮಿಸುತ್ತಾರೆ.

SCROLL FOR NEXT