ಪೊಲೀಸ್ ಸಂಸ್ಮರಣಾ ದಿನ ಗೌರವ ವಂದನೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ 
ರಾಜ್ಯ

ರಾಜ್ಯದಲ್ಲಿ 2,400 ಪೊಲೀಸ್ ಪೇದೆಗಳ ನೇಮಕ: ಸಿಎಂ ಸಿದ್ದರಾಮಯ್ಯ

ಐದು ಸಂಚಾರಿ ಮತ್ತು ಆರು ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಲಾಗುವುದು. 2,400 ಪೊಲೀಸ್ ಪೇದೆಗಳನ್ನು ನೇಮಕ ಮಾಡಲಾಗುವುದು. ಗೃಹ 2025 ಯೋಜನೆ ಅಡಿಯಲ್ಲಿ 2,225 ಪೊಲೀಸ್ ವಸತಿಗಾಗಿ 450 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಧಿಕಾರಿ ಕಚೇರಿ, ನಿರ್ವಹಣೆಗೆ ಕೂಡ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ಐದು ಸಂಚಾರಿ ಮತ್ತು ಆರು ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಲಾಗುವುದು. 2,400 ಪೊಲೀಸ್ ಪೇದೆಗಳನ್ನು ನೇಮಕ ಮಾಡಲಾಗುವುದು. ಗೃಹ 2025 ಯೋಜನೆ ಅಡಿಯಲ್ಲಿ 2,225 ಪೊಲೀಸ್ ವಸತಿಗಾಗಿ 450 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಧಿಕಾರಿ ಕಚೇರಿ, ನಿರ್ವಹಣೆಗೆ ಕೂಡ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಶನಿವಾರ ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿದರು. 

ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬಸ್ಥರಿಗಾಗಿ ಆರೋಗ್ಯ ಭಾಗ್ಯ ಯೋಜನೆ ಅಡಿ ನೂರು ಕೋಟಿ ಕೊಡಲಾಗಿದೆ. ನಿವೃತ್ತಿ ಅಧಿಕಾರಿ ಮತ್ತು ಸಿಬ್ಬಂದಿ ಅವರ ಅವಲಂಬಿತ ಪತಿ, ಪತ್ನಿಯರ ಚಿಕಿತ್ಸೆಗಾಗಿ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ರಾಜ್ಯಾದ್ಯಂತ ಪೊಲೀಸ್ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯದ ಏಳು ಸ್ಥಳಗಳಲ್ಲಿ ಪೊಲೀಸ್ ಪಬ್ಲಿಕ್ ಸ್ಕೂಲ್ ತೆರೆಯಲಾಗುವುದು. ಪೊಲೀಸ್ ಕ್ಯಾಂಟೀನ್ ಕಲ್ಪಿಸಲಾಗಿದೆ. ವಿಶೇಷ ಗುಂಪು ಯೋಜನೆಯಡಿ 20 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕರ್ತವ್ಯದಲ್ಲಿ ಇರುವ ವೇಳೆ ಹುತಾತ್ಮರಾದ ಪೊಲೀಸರಿಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಲಾಗುವುದು ಎಂದರು.

ಪೊಲೀಸ್ ಸಂಸ್ಮರಣಾ ದಿನ ಹಿನ್ನೆಲೆ: ಸೈನಿಕರ ಬಲಿದಾನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಿದರೆ ಪೊಲೀಸರ ಪ್ರಾಣತ್ಯಾಗವನ್ನು ಪೊಲೀಸ್ ಸಂಸ್ಮರಣಾ ದಿನವಾಗಿ ಅಚರಿಸುತ್ತೇವೆ. ಇಂದು ಅಕ್ಟೋಬರ್ 21 ಪೊಲೀಸ್ ಸಂಸ್ಮರಣಾ ದಿನ. 64 ವರ್ಷಗಳ ಹಿಂದೆ ಇದೇ ದಿನದಂದು (ಅಕ್ಟೋಬರ್ 21, 1959) ಚೀನಾದೊಂದಿಗಿನ ಭಾರತದ ಗಡಿಭಾಗದಲ್ಲಿ ಕರ್ತವ್ಯನಿರತರಾಗಿದ್ದ ಕೇಂದ್ರ ಸಶಸ್ತ್ರ ಮೀಸಲು (CRPF) ಪಡೆಯ 10 ಪೊಲೀಸರು ಚೀನಾದ ಸೇನೆ ನಡೆಸಿದ ದಾಳಿಗೆ ಬಲಿಯಾಗಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 21 ರಂದು ಪೊಲೀಸ್ ಸಂಸ್ಮರಣಾ ದಿನವನ್ನು ದೇಶದಾದ್ಯಾಂತ ಆಚರಿಸಲಾಗುತ್ತದೆ. 

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಜಾರಿಯಲ್ಲಿರುವ ಪೊಲೀಸ್ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

CWRC ಆದೇಶದ ವಿರುದ್ಧ ಮೇಲ್ಮನವಿ: ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ಅರಿಯಲು ಸಿಎಂ ವಿಜಯ್ ಗೆ ಹೆಲಿಕಾಪ್ಟರ್ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್!

ಕಾವೇರಿ ನೀರು ಬಿಡುಗಡೆ ಸಮಿತಿಯ ಆದೇಶವು 'ಅವೈಜ್ಞಾನಿಕ', ಕರ್ನಾಟಕಕ್ಕೆ 'ಮಾರಕ': ಕೇಂದ್ರ ಸಚಿವ ಕುಮಾರಸ್ವಾಮಿ

ಚೆನ್ನೈ ಮೆಟ್ರೋ ರೈಲಿನಲ್ಲಿ ಸಿಎಂ ವಿಜಯ್ ಪ್ರಯಾಣ: ಜನರೊಂದಿಗೆ ಸಂವಾದ, ಸರಳತೆಗೆ ಫ್ಯಾನ್ಸ್ ಫಿದಾ! Video

Beat the f**king sh*t out: ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ, ಟ್ರಂಪ್ ಆಕ್ರೋಶ!