ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿ ತೀವ್ರ ಬರ: ಸಂಕಷ್ಟದಿಂದ ರೈತರು ವಲಸೆ ಹೋಗದಂತೆ ತಡೆಯಲು ಮನ್ರೇಗಾ ಅನುಷ್ಠಾನಕ್ಕಾಗಿ ಸರ್ಕಾರ ಮುಂದು!

ಸರ್ಕಾರದ ಐದು ಖಾತರಿ ಯೋಜನೆಗಳು ಕೃಷಿ ಬಿಕ್ಕಟ್ಟಿನಿಂದ ಸ್ವಲ್ಪ ಮಟ್ಟಿಗೆ ರೈತರ ಸಮಸ್ಯೆ ಕಡಿಮೆ ಮಾಡಿದೆ, ಆದರೆ ಹೆಚ್ಚುತ್ತಿರುವ ಬರ ಪರಿಸ್ಥಿತಿಯಿಂದಾಗಿ ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗವನ್ನು ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗಿದೆ.

ಬೆಳಗಾವಿ: ಸರ್ಕಾರದ ಐದು ಖಾತರಿ ಯೋಜನೆಗಳು ಕೃಷಿ ಬಿಕ್ಕಟ್ಟಿನಿಂದ ಸ್ವಲ್ಪ ಮಟ್ಟಿಗೆ ರೈತರ ಸಮಸ್ಯೆ ಕಡಿಮೆ ಮಾಡಿದೆ, ಆದರೆ ಹೆಚ್ಚುತ್ತಿರುವ ಬರ ಪರಿಸ್ಥಿತಿಯಿಂದಾಗಿ ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗವನ್ನು ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗಿದೆ.

ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹೆಣಗಾಡುತ್ತಿರುವಾಗ, ರೈತರು ಎದುರಿಸುತ್ತಿರುವ ಕಳಪೆ ಮುಂಗಾರು ಮತ್ತು ಬೆಳೆ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸನ್ನಿಹಿತ ಬಿಕ್ಕಟ್ಟಿನ ಬಗ್ಗೆ ಚಿಂತಿತರಾಗಿದ್ದಾರೆ.

ಈಗಾಗಲೇ ಹಲವು ಕೇಂದ್ರ ತಂಡಗಳು ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ ಬೆಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಮಾನದಂಡಗಳ ಪ್ರಕಾರ, 236 ತಾಲ್ಲೂಕುಗಳಲ್ಲಿ 195 ಬರಪೀಡಿತ ಎಂದು ಘೋಷಿಸಲಾಗಿದೆ. 195 ತಾಲ್ಲೂಕುಗಳಲ್ಲಿ 161 ‘ತೀವ್ರ’ ಬರಪೀಡಿತವಾಗಿದ್ದರೆ 34 ತಾಲ್ಲೂಕುಗಳು ‘ಸಾಧಾರಣ’ ಬರ ಪೀಡಿತವಾಗಿವೆ.

ನಡೆಯುತ್ತಿರುವ ಸಮೀಕ್ಷೆಗಳು ಮುಗಿದ ನಂತರವೇ ನಿಜವಾದ ಬೆಳೆ ನಷ್ಟ ಕಂಡುಹಿಡಿಯಬಹುದು, ಆದರೆ ಭಾರೀ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ, ಮಳೆಯು ಅತ್ಯಂತ ಕಡಿಮೆ ಮತ್ತು ಶುಷ್ಕ ಭೂಮಿಯಿಂದ ಹೆಚ್ಚಿನ ಪ್ರಮುಖ ಬೆಳೆ ಹಾನಿಗೊಳಗಾಗಿವೆ.

ಬರಪೀಡಿತ ಕಲಬುರಗಿ ಪ್ರದೇಶವೊಂದರಿಂದಲೇ ಈಗಾಗಲೇ 10,000ಕ್ಕೂ ಹೆಚ್ಚು ಮಂದಿ ಉದ್ಯೋಗ ಅರಸಿ ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿಗೆ ವಲಸೆ ಹೋಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಕರ್ನಾಟಕದಲ್ಲಿ ಹದಗೆಡುತ್ತಿರುವ ಬರ ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರವು ಗಂಭೀರ ಕಳವಳ ವ್ಯಕ್ತಪಡಿಸಿದೆ.

ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳನ್ನು ತಲುಪುವುದನ್ನು ತಡೆಯಲು MG-NREGA ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವತ್ತ ಗಮನಹರಿಸುತ್ತಿದೆ. “ಬರಗಾಲ ಮುಂದುವರಿದರೆ ದೈನಂದಿನ ಕೂಲಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಯೋಜನೆಯಡಿ ತೆಗೆದುಕೊಳ್ಳುವ ಕೆಲಸವನ್ನು ಅವಲಂಬಿಸಿರುತ್ತಾರೆ. ಆದಷ್ಟು ಜನರಿಗೆ ಉದ್ಯೋಗ ಕಲ್ಪಿಸಿ, ವಲಸೆ ಹೋಗುವುದನ್ನು ತಡೆಯಲು ಸಕಾಲಕ್ಕೆ ಕೂಲಿ ಸಿಗುವಂತೆ ಮಾಡಬೇಕಾದ ಅನಿವಾರ್ಯತೆ ಇದೆ  ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಬರ ಪರಿಸ್ಥಿತಿಯು ಕಠಿಣವಾಗಿರುವುದರಿಂದ ಎಂಜಿಎನ್‌ಆರ್‌ಇಜಿಎ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ವೇತನ ಅನುದಾನ ಬಿಡುಗಡೆಗಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ನವದೆಹಲಿಯ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ವಲಸಿಗರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ ಅವರು, “ಗ್ರಾಮೀಣದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಅವರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಒದಗಿಸುವುದು MGNREGA ಯ ಮುಖ್ಯ ಉದ್ದೇಶವಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಬಾಕಿ ಉಳಿದಿರುವ MG-NREGA ವೇತನ ಬಿಡುಗಡೆಗೆ ಸಂಬಂಧಿಸಿದಂತೆ, ರಾಜ್ಯದ ಗ್ರಾಮೀಣಾಭಿವೃದ್ಧಿ ಕಮಿಷನರೇಟ್ ಈಗಾಗಲೇ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಬಳಕೆಯ ಪ್ರಮಾಣಪತ್ರಗಳು ಮತ್ತು ವಾರ್ಷಿಕ ಲೆಕ್ಕಪರಿಶೋಧನೆಯ ವಿವರಗಳನ್ನು ಸಲ್ಲಿಸಿದೆ.

ಕೇಂದ್ರವು ಬಾಕಿ ಇರುವ ಕೂಲಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿದರೆ ನರೇಗಾ ಮೂಲಕ ಸ್ವಲ್ಪ ಮಟ್ಟಿಗೆ ಬರ ಪರಿಸ್ಥಿತಿ ಎದುರಿಸಲು ಸಾಧ್ಯ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 2023 ರಿಂದ ಬಾಕಿ ಉಳಿದಿರುವ ವೇತನ 478.46 ಕೋಟಿ ರೂ. ಆದರೆ ಕರ್ನಾಟಕಕ್ಕೆ ಸೆಪ್ಟೆಂಬರ್ 24 ರಂದು ಬಿಡುಗಡೆಯಾದ ಕೊನೆಯ ವೇತನ ಅನುದಾನವು ಆಗಸ್ಟ್ ಮತ್ತು ಸೆಪ್ಟೆಂಬರ್‌ಗೆ 1.55 ಕೋಟಿ ರೂ. ಮಾತ್ರ.

ಆದಾಗ್ಯೂ, ಬೆಳಗಾವಿಯಂತಹ ಜಿಲ್ಲೆಗಳಲ್ಲಿ, ಕಬ್ಬಿನ ಬೆಳೆ ಬರಗಾಲದಿಂದ ಹೆಚ್ಚು ಪರಿಣಾಮ ಬೀರದ ಕಾರಣ ವಲಸೆ ಬಹಳ ಕಡಿಮೆ ಇರಬಹುದು. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ಪ್ರಕಾರ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್ ಮತ್ತು ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಉದ್ಯೋಗಕ್ಕಾಗಿ ಬೆಳಗಾವಿ ಜಿಲ್ಲೆಗೆ ವಲಸೆ ಹೋಗುತ್ತಾರೆ. ನವೆಂಬರ್‌ನಲ್ಲಿ ಕಬ್ಬು ಕಟಾವು ಪ್ರಾರಂಭವಾದ ನಂತರ, ಇತರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ" ಎಂದು ಅವರು ಹೇಳಿದರು. “ಜನರಿಗೆ ಉತ್ತಮ ವೇತನವನ್ನು ಖಚಿತಪಡಿಸಿಕೊಳ್ಳಲು MGNREGA ಅಡಿಯಲ್ಲಿ ಮಾನವ ದಿನಗಳನ್ನು 100 ದಿನಗಳಿಂದ 150 ದಿನಗಳವರೆಗೆ ಹೆಚ್ಚಿಸಲು ನಾವು ಸರ್ಕಾರವನ್ನು ವಿನಂತಿಸುತ್ತಿದ್ದೇವೆ. ಈಗಾಗಲೇ ಬೆಳಗಾವಿ ಅತಿ ಹೆಚ್ಚು ದಿನಗಳನ್ನು ನೀಡುತ್ತಿದೆ.

ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಕೃಷಿ ಬಿಕ್ಕಟ್ಟು ಮತ್ತು ಉದ್ಯೋಗ ಅರಸಿ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. "ರೈತರು ಮತ್ತು ಕಾರ್ಮಿಕರನ್ನು 'ಅಸಂಘಟಿತ ವಲಯ'ದ ಭಾಗವೆಂದು ಪರಿಗಣಿಸಲಾಗುತ್ತದೆ ಆದರೆ ಕೇವಲ 2 ರಿಂದ 3 ಪ್ರತಿಶತದಷ್ಟು ಇರುವ ಸರ್ಕಾರಿ ನೌಕರರು 'ಸಂಘಟಿತ ವಲಯ' ಅಡಿಯಲ್ಲಿ ಬರುತ್ತಾರೆ.

ವೇತನ ಮತ್ತು ಭತ್ಯೆಗಳ ಹೆಚ್ಚಳದ ಅವರ ಪ್ರತಿಯೊಂದು ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಆದರೆ ಸರ್ಕಾರವು ಅಸಂಘಟಿತ ವಲಯವನ್ನು ನಿರ್ಲಕ್ಷಿಸುತ್ತದೆ. ಸರಕಾರವು ಅಸಂಘಟಿತ ವಲಯವನ್ನು ಸಂಘಟಿತ ವಲಯಕ್ಕೆ ಸರಿಸಮನಾಗಿ ಪರಿಗಣಿಸುವವರೆಗೆ ಗ್ರಾಮೀಣ ಪ್ರದೇಶಗಳಿಂದ ವಲಸೆ ಮುಂದುವರಿಯುತ್ತದೆ,'' ಎಂದು  ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT